‘ರಕ್ಷಿತ್ ಸಿನಿಮಾ ಮಾಡಲು ನಿರ್ಮಾಪಕರಿದ್ದಾರೆ, ಅವರಿಗೆ ಸದ್ಯಕ್ಕಂತೂ ನನ್ನ ಅನಿವಾರ್ಯತೆ ಇಲ್ಲ’; ಪುಷ್ಕರ್
Pushkar mallikarjunaiah: ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈ ಮೊದಲು ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇತ್ತೀಚೆಗೆ ಅವರು ಸಿನಿಮಾ ಮಾಡುವುದರಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಳ್ಳುತ್ತಿದ್ದಾರೆ. ಅವರು ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡೋ ವಿಚಾರದ ಕುರಿತು ಮಾತನಾಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ‘ಕಿರಿಕ್ ಪಾರ್ಟಿ’ ಅಂಥ ಸೂಪರ್ ಹಿಟ್ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಇಬ್ಬರ ಮಧ್ಯೆ ಕೆಲವು ವಿಚಾರಕ್ಕೆ ಮನಸ್ತಾಪ ಬಂತು ಎನ್ನಲಾಗಿದೆ. ಈಗ ಇಬ್ಬರೂ ಬೇರೆ ಆಗಿದ್ದಾರೆ. ಸದ್ಯಕ್ಕಂತೂ ಇವರು ಒಟ್ಟಾಗಿ ಸಿನಿಮಾ ಮಾಡುವ ಆಲೋಚನೆ ಇಲ್ಲ. ‘ಅವತಾರ ಪುರುಷ 2’ ಸಿನಿಮಾ ರಿಲೀಸ್ಗೆ ಕಾಯುತ್ತಿರುವ ಪುಷ್ಕರ್ ಅವರು ಟಿವಿ ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ಈ ವೇಳೆ ರಕ್ಷಿತ್ ಶೆಟ್ಟಿ ಜೊತೆಗಿನ ಫ್ರೆಂಡ್ಶಿಪ್ ಬಗ್ಗೆ, ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಅವರು ಮಾತನಾಡಿದ್ದಾರೆ.
‘ನನ್ನ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಯಾವುದೇ ಹೇಟ್ ರಿಲೇಶನ್ಶಿಪ್ ಇಲ್ಲ. ಇಬ್ಬರೂ ಗೌರವಯುತವಾಗಿ ನಮ್ಮದೇ ಸ್ಪೇಸ್ನಲ್ಲಿ ಇದ್ದೇವೆ. ರಕ್ಷಿತ್ ಶೆಟ್ಟಿ ಅವರಿಗೆ ಈಗ 10-20 ನಿರ್ಮಾಪಕರು ರೆಡಿ ಇದ್ದಾರೆ. ನಾನು ಹಣ ಹಾಕ್ತೀನಿ ಡೇಟ್ ಕೊಡಿ ಎಂದು ಅವರು ಕೇಳುತ್ತಾ ಇರುತ್ತಾರೆ. ಹೀಗಾಗಿ, ತಕ್ಷಣಕ್ಕಂತೂ ಅವರಿಗೆ ಪುಷ್ಕರ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಅನಿವಾರ್ಯತೆ ಇಲ್ಲ’ ಎಂದಿದ್ದಾರೆ ಪುಷ್ಕರ್. ಇದನ್ನೂ ಓದಿ: ‘ಕಿರಿಕ್ ಪಾರ್ಟಿ’, ‘ಗೋಧಿಬಣ್ಣ..’ ರೀತಿ ‘ಅವತಾರ ಪುರುಷ 2’ ಬಿಡುಗಡೆ ಪ್ಲ್ಯಾನ್: ಪುಷ್ಕರ್
‘ನಾನು ಒಂದೊಳ್ಳೆಯ ಕಥೆ ತೆಗೆದುಕೊಂಡು ಬಂದು, ನನ್ನ ಪ್ರೊಡಕ್ಷನ್ನಿಂದ ಅವರಿಗೆ ಹೇಳಿ ಅದು ರಕ್ಷಿತ್ಗೆ ಇಷ್ಟವಾದರೆ ಬನ್ನಿ ಸಿನಿಮಾ ಮಾಡೋಣ ಎಂದರೆ ಅದು ವಿನ್ ವಿನ್ ಸಿಚ್ಯುವೇಷನ್ ಆಗುತ್ತದೆ. ಆದರೆ, ಅಂಥ ಕಥೆಯನ್ನು ಅವರಿಗೆ ಹೇಳಬೇಕು ಎನ್ನುವ ಪರಿಸ್ಥಿತಿ ನನಗೂ ಬಂದಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಅಂಥ ಸಮಯ ಬಂದರೆ ಇಬ್ಬರೂ ಒಂದಾಗಬಹುದು’ ಎಂದಿದ್ದಾರೆ ಪುಷ್ಕರ್.
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈ ಮೊದಲು ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇತ್ತೀಚೆಗೆ ಅವರು ಸಿನಿಮಾ ಮಾಡುವುದರಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಳ್ಳುತ್ತಿದ್ದಾರೆ. ‘ಅವತಾರ ಪುರುಷ’ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ‘ಅವತಾರ ಪುರುಷ 2’ ಸಿನಿಮಾನ ಪ್ರೇಕ್ಷಕರ ಎದುರು ಇಡುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ಶರಣ್, ಆಶಿಕಾ ರಂಗನಾಥ್ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Tue, 12 March 24