AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿರಿಕ್​ ಪಾರ್ಟಿ’, ‘ಗೋಧಿಬಣ್ಣ..’ ರೀತಿ ‘ಅವತಾರ ಪುರುಷ 2’ ಬಿಡುಗಡೆ ಪ್ಲ್ಯಾನ್​: ಪುಷ್ಕರ್​‘ಕಿರಿಕ್​ ಪಾರ್ಟಿ’, ‘ಗೋಧಿಬಣ್ಣ..’ ರೀತಿ ‘ಅವತಾರ ಪುರುಷ 2’ ಬಿಡುಗಡೆ ಪ್ಲ್ಯಾನ್​: ಪುಷ್ಕರ್​

‘ಕಿರಿಕ್​ ಪಾರ್ಟಿ’, ‘ಗೋಧಿಬಣ್ಣ..’ ರೀತಿ ‘ಅವತಾರ ಪುರುಷ 2’ ಬಿಡುಗಡೆ ಪ್ಲ್ಯಾನ್​: ಪುಷ್ಕರ್​

ಮದನ್​ ಕುಮಾರ್​
|

Updated on: Mar 08, 2024 | 10:20 PM

Share

ಬಹಳ ದಿನಗಳಿಂದ ಕಾದಿದ್ದ ‘ಅವತಾರ ಪುರುಷ 2’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಚಿತ್ರ ಮಾರ್ಚ್​ 22ರಂದು ತೆರೆಕಾಣಲಿದ್ದು, ಆ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿಂಪಲ್​ ಸುನಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ​ (Pushkara Mallikarjunaiah) ಅವರು ‘ಅವತಾರ ಪುರುಷ 1’ ಸಿನಿಮಾವನ್ನು 2022ರ ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ್ದರು. ಕಾರಣಾಂತರಗಳಿಂದ ‘ಅವತಾರ ಪುರುಷ 2’ (Avatara Purusha Part 2) ಸಿನಿಮಾ ರಿಲೀಸ್​ ಆಗುವುದು ವಿಳಂಬವಾಯ್ತು. ಈಗ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಅವರು ರಿಲೀಸ್​ ಪ್ಲ್ಯಾನ್​ ಬಗ್ಗೆ ಮಾತನಾಡಿದರು. ‘ವಿತರಕ ಮೋಹನ್​ ಅವರು 150ರಿಂದ 200 ಚಿತ್ರಮಂದಿರಗಳಲ್ಲಿ ರಿಲೀಸ್​ ಮಾಡುವುದಾಗಿ ಹೇಳಿದ್ದಾರೆ. ಪ್ಯಾನ್​ ಇಂಡಿಯಾ ಮತ್ತು ವಿದೇಶದಲ್ಲೂ ನಿಯಮಿತ ಸ್ಕ್ರೀನ್​ಗಳಲ್ಲಿ ಬಿಡುಗಡೆ ಮಾಡುತ್ತೇನೆ. ‘ಕಿರಿಕ್​ ಪಾರ್ಟಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗಳನ್ನು ರಿಲೀಸ್​ ಮಾಡಿದ ರೀತಿಯಲ್ಲೇ ‘ಅವತಾರ ಪುರುಷ 2’ ಸಿನಿಮಾವನ್ನು ಪ್ಯಾನ್​ ಇಂಡಿಯಾ ಹಾಗೂ ವಿದೇಶದಲ್ಲಿ ತೆರೆಕಾಣಿಸುತ್ತೇವೆ’ ಎಂದು ಪುಷ್ಕರ್​ ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಶರಣ್​ (Sharan), ಆಶಿಕಾ ರಂಗನಾಥ್​, ಶ್ರೀನಗರ ಕಿಟ್ಟಿ, ಸಾಯಿಕುಮಾರ್​, ಭವ್ಯಾ, ಸುಧಾರಾಣಿ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More