ಹೊಸ ಫೋಟೋ ಹಂಚಿಕೊಂಡು ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ; ವಿಜಯ್ ಜೊತೆಗಿನ ಡೇಟಿಂಗ್ ವಿಚಾರ ಖಚಿತ
ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದು ‘ಗೀತ ಗೋವಿಂದಂ’ ಚಿತ್ರದಲ್ಲಿ. ಇವರಿಬ್ಬರ ಗೆಳೆತನದಿಂದಲೇ ರಶ್ಮಿಕಾ-ರಕ್ಷಿತ್ ಸಂಬಂಧ ಹಾಳಾಯಿತು ಎನ್ನುವ ಮಾತೂ ಇದೆ. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಟಿಸಿದ್ದರು. ಈಗ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ.
ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಹುಟ್ಟಿದ್ದು ಇಂದು ನಿನ್ನೆಯಲ್ಲ. ಮೊದಲಿನಿಂದಲೂ ಇವರು ಸುತ್ತಾಡುತ್ತಿರುವ ವಿಚಾರ ಸುದ್ದಿಯಲ್ಲಿದೆ. ಆದರೆ, ಯಾವುದೂ ಖಚಿತವಾಗಿಲ್ಲ. ಪಬ್ಲಿಕ್ನಲ್ಲಿ ಇವರು ರಿಲೇಶನ್ಶಿಪ್ ಒಪ್ಪಿಕೊಂಡಿಲ್ಲ. ‘ನಾವು ಬೆಸ್ಟ್ ಫ್ರೆಂಡ್ಸ್ ಅಷ್ಟೇ’ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಒಂದು ಫೋಟೋ ಹಂಚಿಕೊಂಡು ಅಭಿಮಾನಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಧರಿಸಿರೋ ಕ್ಯಾಪ್ ಒಂದೇ ರೀತಿ ಇದೆ.
ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದು ‘ಗೀತ ಗೋವಿಂದಂ’ ಸಿನಿಮಾದಲ್ಲಿ. ಇವರಿಬ್ಬರ ಗೆಳೆತನದಿಂದಲೇ ರಶ್ಮಿಕಾ-ರಕ್ಷಿತ್ ಸಂಬಂಧ ಹಾಳಾಯಿತು ಎನ್ನುವ ಮಾತೂ ಇದೆ. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಟಿಸಿದ್ದರು. ಈಗ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇಬ್ಬರೂ ನಾನಾ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಇದ್ದಾರೆ.
ವಿಜಯ್ ದೇವರಕೊಂಡ ಅವರು ಮೂರು ತಿಂಗಳ ಹಿಂದೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ನ್ಯೂಯಾರ್ಕ್ನಲ್ಲಿ ಕಳೆದ ಕ್ಷಣವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಅದರಲ್ಲಿ ವಿಜಯ್ ಅವರು ಪಿಂಕ್ ಬಣ್ಣದ ಕ್ಯಾಪ್ ಧರಿಸಿದ್ದರು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ವಿಜಯ್ ಧರಿಸಿದ ಕ್ಯಾಪ್ನೇ ರಶ್ಮಿಕಾ ಕೂಡ ಧರಿಸಿದ್ದಾರೆ. ಇದರಿಂದ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೈಗೆ ಮತ್ತೆ ಸಿಕ್ಕಿ ಬಿದ್ದಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಂದೇ ಬ್ಯಾಕ್ಗ್ರೌಂಡ್ ಇರುವ, ಒಂದೇ ರೀತಿಯ ಬಟ್ಟೆ ಧರಿಸಿ ಸಿಕ್ಕಿ ಬಿದ್ದಿದ್ದು ಇದೇ ಮೊದಲೇನು ಅಲ್ಲ. ಒಟ್ಟಿಗೇ ತೆರಳಿದ್ದರೂ ವಿಜಯ್ ದೇವರಕೊಂಡ ಅವರು ಫೋಟೋ ಪೋಸ್ಟ್ ಮಾಡಿದ ಕೆಲವು ವಾರಗಳ ಬಳಿಕ ರಶ್ಮಿಕಾ ಫೋಟೋ ಹಂಚಿಕೊಳ್ಳುತ್ತಾರೆ. ಇದು ಮೊದಲಿನಿಂದಲೂ ನಡೆದು ಬಂದಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ಫೇಕ್ ವಿಡಿಯೋ ವೈರಲ್; ತಪ್ಪಿತಸ್ಥರಿಗೆ ಆಗುತ್ತಾ ಶಿಕ್ಷೆ?
ರಶ್ಮಿಕಾ ಮಂದಣ್ಣ ‘ಪುಷ್ಪ 2’, ‘ರೇನ್ಬೋ’ ಮೊದಲಾದ ಸಿನಿಮಾಗಳ ಕೆಲಸದಲ್ಲಿ ಬ್ಯುಸಿ ಇದ್ದಾರೆ. ವಿಜಯ್ ದೇವರಕೊಂಡ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 5ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ