ಆರ್​ಸಿಬಿ ಕೋಣಗಳ ಜೊತೆ ‘ಕಾಂತಾರ’ ಶಿವ: ಹೇಳಿದ್ದು ಅರ್ಥವಾಯ್ತಾ?

RCB: ರಿಷಬ್ ಶೆಟ್ಟಿ ‘ಕಾಂತಾರ’ ಶಿವ ಕಾಸ್ಟೂಮ್​ನಲ್ಲಿ ಆರ್​ಸಿಬಿ ಕೋಣಗಳನ್ನು ಕರೆತಂದಿದ್ದಾರೆ. ಆದರೆ ರಿಷಬ್ ಏನೋ ಹೇಳಲು ಯತ್ನಿಸುತ್ತಿದ್ದಾರೆ ನಿಮಗೆ ಅರ್ಥವಾಯ್ತಾ?

ಆರ್​ಸಿಬಿ ಕೋಣಗಳ ಜೊತೆ ‘ಕಾಂತಾರ’ ಶಿವ: ಹೇಳಿದ್ದು ಅರ್ಥವಾಯ್ತಾ?
Follow us
ಮಂಜುನಾಥ ಸಿ.
|

Updated on:Mar 13, 2024 | 10:52 AM

ಡಬ್ಲುಪಿಎಲ್ ರೋಚಕ ಘಟ್ಟ ತಲುಪಿದೆ, ಅದರ ಬೆನ್ನಲ್ಲೆ ಐಪಿಎಲ್ (IPL) ಜ್ವರ ಆರಂಭವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಆರ್​ಸಿಬಿ ಅಭಿಮಾನಿಗಳು ಜೋಶ್​ನಲ್ಲಿದ್ದಾರೆ. ಈ ಬಾರಿಯಾದರೂ ಕಪ್ ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿಯೇ ಐಪಿಎಲ್​ ವೀಕ್ಷಿಸಲು ತಯಾರಿ ಆರಂಭಿಸಿದ್ದಾರೆ. ಐಪಿಎಲ್ ಶುರುವಾಗಲು ಕೆಲವೇ ದಿನಗಳು ಇರುವಾಗ, ಆರ್​ಸಿಬಿ ಕೋಣಗಳ ಜೊತೆ ‘ಕಾಂತಾರ’ ಶಿವ ಬಂದಿದ್ದಾನೆ. ರಿಷಬ್ ಶೆಟ್ಟಿ (Rishab Shetty), ‘ಆರ್​ಸಿಬಿ ಕೋಣ’ಗಳ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಆರ್​ಸಿಬಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಿಷಬ್ ಏನೋ ಹೇಳಿದ್ದಾರೆ, ನಿಮಗೆ ಅರ್ಥವಾಯ್ತಾ?

ರಿಷಬ್ ಶೆಟ್ಟಿ, ‘ಕಾಂತಾರ’ ಶಿವನ ಗೆಟಪ್​ನಲ್ಲಿ ಸ್ಟೈಲ್ ಆಗಿ ಎಂಟ್ರಿ ಕೊಟ್ಟಿರುವ ದೃಶ್ಯ ವಿಡಿಯೋನಲ್ಲಿದೆ. ವಿಡಿಯೋ ಮುಂದುವರೆದಂತೆ ಮೂರು ಕೋಣಗಳು ಕಾಣುತ್ತವೆ. ಮೊದಲ ಕೋಣದ ಮೇಲೆ ರಾಯಲ್ ಎಂದು ಬರೆಯಲಾಗಿದೆ, ಎರಡನೇ ಕೋಣದ ಮೇಲೆ ಚಾಲೆಂಜರ್ಸ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಮೇಲೆ ಬ್ಯಾಂಗಲೂರ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಬಳಿಕ ಬರುವ ರಿಷಬ್ ಶೆಟ್ಟಿ, ‘ಭಟ್ರೆ, ಇದು ಚೆನ್ನಾಗಿಲ್ಲ ತಗೋಂಡು ಹೋಗಿ’ ಎನ್ನುತ್ತಾರೆ. ಕೂಡಲೇ ಬ್ಯಾಂಗಲೂರ್ ಎಂದು ಬರೆದಿರುವ ಕೋಣವನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತದೆ. ಆಗ ರಿಷಬ್ ಶೆಟ್ಟಿ ನೋಡುಗರ ಕಡೆ ತಿರುಗಿ, ‘ಅರ್ಥವಾಯ್ತಾ’ ಎಂದು ಕೇಳುತ್ತಾರೆ.

ಇದನ್ನೂ ಓದಿ:Ramraj & Rishab Shetty: ರಾಮ್​ರಾಜ್ ಕಾಟನ್​ಗೆ ಹೊಸ ಪರಿಚಯ ರಿಷಬ್ ಶೆಟ್ಟಿ

ಈ ವಿಡಿಯೋ ನೋಡಿ ಹಲವರು ತಲೆಕೆಡಿಸಿಕೊಂಡಿದ್ದಾರೆ. ಬೆಂಗಳೂರು ಎಂದು ಇಂಗ್ಲೀಷ್​ನಲ್ಲಿ ಬರೆದಿದ್ದ ಕೋಣವನ್ನೇಕೆ ರಿಷಬ್ ಬೇಡ ಎಂದರು ಇದರ ಅರ್ಥವೇನು ಎಂದು ಯೋಚಿಸುತ್ತಿದ್ದಾರೆ. ಅಸಲಿಗೆ, ವಿಡಿಯೋನಲ್ಲಿ ರಿಷಬ್ ವಾಪಸ್ ಕಳಿಸಿದ ಕೋಣದ ಮೇಲೆ ಇಂಗ್ಲೀಷ್​ನಲ್ಲಿ ‘ಬ್ಯಾಂಗಲೂರ್’ (Bangalore) ಎಂದು ಬರೆಯಲಾಗಿತ್ತು. ಆದರೆ ಈ ಬಾರಿ ‘ಬ್ಯಾಂಗಲೂರ್’ ಬದಲು ‘ಬೆಂಗಳೂರು’ (Bengaluru) ಎಂದು ಹೆಸರು ಬದಲಾವಣೆ ಮಾಡಲಾಗುತ್ತಿದೆ. ಅದರ ಸುಳಿವನ್ನೇ ರಿಷಬ್, ವಿಡಿಯೋನಲ್ಲಿ ನೀಡಿದ್ದಾರೆ. ಇನ್ನು ಮುಂದೆ ಆರ್​ಸಿಬಿ ಎಂದರೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಅಲ್ಲ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು.

View this post on Instagram

A post shared by Danish sait (@danishsait)

ರಿಷಬ್​ ಶೆಟ್ಟಿಯವರ ವಿಡಿಯೋ ಹಂಚಿಕೊಂಡಿರುವ ಆರ್​ಸಿಬಿ, ರಿಷಬ್ ಏನು ಹೇಳುತ್ತಿದ್ದಾರೆ ಎಂಬುದು ಆರ್​ಸಿಬಿ ಅನ್​ಬಾಕ್ಸಿಂಗ್​ ಇವೆಂಟ್ ದಿನ ಗೊತ್ತಾಗಲಿದೆ. ಈಗಲೇ ನಿಮ್ಮ ಟಿಕೆಟ್ ಖರೀದಿ ಮಾಡಿ ಎಂದು ಹೇಳಿದೆ. ಆರ್​ಸಿಬಿ ಅನ್​ಬಾಕ್ಸಿಂಗ್ ಮಾರ್ಚ್ 19ಕ್ಕೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕಳೆದ ಬಾರಿಯ ಅನ್​ಬಾಕ್ಸಿಂಗ್ ಇವೆಂಟ್​ನಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ಭಾಗಿಯಾಗಿದ್ದರು. ಅಭಿಮಾನಿಗಳ ಆರ್ಭಟಕ್ಕೆ ಸ್ಟೇಡಿಯಂನಲ್ಲಿ ತಲ್ಲಣ ಎದ್ದಿತ್ತು. ಈ ಬಾರಿಯ ಅನ್​ಬಾಕ್ಸಿಂಗ್ ಇವೆಂಟ್ ಸಹ ಸಖತ್ ಜೋರಾಗಿರಲಿದೆ.

ಹೊಂಬಾಳೆ ಫಿಲಮ್ಸ್​, ಆರ್​ಸಿಬಿಯ ವಿಡಿಯೋ ಪಾರ್ಟರ್ನ್ಸ್ ಆಗಿದ್ದು, ಈ ಬಾರಿಯೂ ಸಹ ಆರ್​ಸಿಬಿಯ ಕಂಟೆಂಟ್​ ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ಸಹ ಹೊಂಬಾಳೆಯ ನಿರ್ಮಾಣವೇ ಆಗಿರುವ ಕಾರಣ, ರಿಷಬ್ ಶೆಟ್ಟಿ ಸಹ ಈಗ ‘ಆರ್​ಸಿಬಿ’ ಕುಟುಂಬ ಸೇರಿಕೊಂಡಿದ್ದಾರೆ. ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ನಲ್ಲಿ ರಿಷಬ್ ಸಹ ಭಾಗಿಯಾಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Wed, 13 March 24

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ