Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಬೆದರಿಕೆ ಆರೋಪ: ಫೈಟ್ ಮಾಸ್ಟರ್ ರವಿ ವರ್ಮಾ ಪ್ರತಿಕ್ರಿಯೆ

Ravi-Danny: ಜನಪ್ರಿಯ ಫೈಟ್ ಮಾಸ್ಟರ್ ರವಿವರ್ಮಾ ವಿರುದ್ಧ ಡಿಫರೆಂಟ್ ಡ್ಯಾನಿ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಸ್ವತಃ ರವಿವರ್ಮಾ ಸ್ಪಷ್ಟನೆ ನೀಡಿದ್ದಾರೆ.

ಕೊಲೆ ಬೆದರಿಕೆ ಆರೋಪ: ಫೈಟ್ ಮಾಸ್ಟರ್ ರವಿ ವರ್ಮಾ ಪ್ರತಿಕ್ರಿಯೆ
Follow us
ಮಂಜುನಾಥ ಸಿ.
|

Updated on:Mar 13, 2024 | 12:38 PM

ಕನ್ನಡ ಚಿತ್ರರಂಗದ (Sandalwood) ಇಬ್ಬರು ಜನಪ್ರಿಯ ಫೈಟ್ ಮಾಸ್ಟರ್​ಗಳ ನಡುವೆ ಫೈಟ್ ನಡೆಯುತ್ತಿದೆ. ಕನ್ನಡ ಮಾತ್ರವೇ ಅಲ್ಲದೆ, ಬಾಲಿವುಡ್, ಟಾಲಿವಡ್​ನಲ್ಲೂ ಮಿಂಚುತ್ತಿರುವ ಆಕ್ಷನ್ ಕೊರಿಯೋಗ್ರಾಫರ್ ರವಿ ವರ್ಮಾ (Ravi Varma) ವಿರುದ್ಧ ಹಿರಿಯ ಫೈಟ್ ಮಾಸ್ಟರ್ ಡ್ಯಾನಿ ಮಾಸ್ಟರ್ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ಅಲ್ಲದೆ, ನಾನು ಮಾಡಿರುವ ಫೈಟ್ ಅನ್ನು ತಮ್ಮದು ಎಂದು ಸುಳ್ಳು ಹೇಳಿಕೊಂಡು ದೊಡ್ಡ-ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಸಹ ಡ್ಯಾನಿ ಮಾಸ್ಟರ್ ಆರೋಪ ಮಾಡಿದ್ದು, ಈ ಬಗ್ಗೆ ಇದೀಗ ರವಿವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿರುವ ರವಿ ವರ್ಮಾ, ‘ಜಾಕಿ’ ಸಿನಿಮಾದ ಫೈಯರ್ ಫೈಟ್ ಹಾಗೂ ಬಣ್ಣ ಹಚ್ಚಿಕೊಂಡು ಮಾಡಿದ್ದ ಫೈಟ್ ಎರಡನ್ನೂ ಡ್ಯಾನಿ ಅವರೇ ಮಾಡಿದ್ದು. ಆ ಎರಡು ಫೈಟ್ ಮಾಡಿರೋದು ನಾನಲ್ಲ, ಮಿಕ್ಕೆಲ್ಲ ಫೈಟ್​ಗಳನ್ನು ನಾನು ಮಾಡಿದ್ದೇನೆ. ಆದರೆ ನಾನು ಎಲ್ಲಿಯೂ ಸಹ ಆ ಎರಡು ಫೈಟ್ ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿಲ್ಲ. ಇಡೀ ಸಿನಿಮಾಗೆ ಫೈಟ್ ಮಾಸ್ಟರ್ ನಾನಾಗಿದ್ದೇ, ಪುನೀತ್ ಸರ್ ಒಂದೇ ಶೆಡ್ಯೂಲ್​ನಲ್ಲಿ ಕಾಲ್ ಶೀಟ್ ಕೊಟ್ಟಿದ್ದರು. ನನಗೆ ಅದೇ ಸಮಯದಲ್ಲಿ ದರ್ಶನ್ ಅವರ ಸಿನಿಮಾದ ಡೇಟ್ಸ್ ಇದ್ದ ಕಾರಣ ನಾನು ಫೈಟ್ ದೃಶ್ಯಗಳನ್ನು ಮಾಡಲು ಆಗಿರಲಿಲ್ಲ ಆಗ ಡ್ಯಾನಿ ಮಾಡಿದ್ದರು’ ಎಂದಿದ್ದಾರೆ ರವಿ ವರ್ಮಾ.

ಇದನ್ನೂ ಓದಿ:ಫೈಟ್ ಮಾಸ್ಟರ್​ಗಳ ನಡುವೆ ಫೈಟ್: ರವಿ ವರ್ಮಾ ವಿರುದ್ಧ ಡ್ಯಾನಿ ದೂರು

ಈಗ ಡ್ಯಾನಿ ಮಾಡುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡುವ ಕಾರ್ಯ ಮಾಡುವುದಿಲ್ಲ. ನಾನು ಈಗ ‘ಜಾಕಿ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಸಮಯದಲ್ಲಿ ಅದೇ ಸಿನಿಮಾದ ಬಗ್ಗೆ ವಿವಾದ ಎಬ್ಬಿಸಿ ಪುನೀತ್ ರಾಜ್​ಕುಮಾರ್ ಅವರಿಗೆ ಅಗೌರವ ತೋರುವ ಕೆಲಸ ನಾನು ಮಾಡುವುದಿಲ್ಲ. ಮುಂದೆ ಈ ಬಗ್ಗೆ ಮಾತನಾಡುತ್ತೇನೆ’ ಎಂದಿದ್ದಾರೆ.

ಕೊಲೆ ಬೆದರಿಕೆ ಆರೋಪದ ಬಗ್ಗೆ ಮಾತನಾಡಿರುವ ರವಿವರ್ಮಾ, ‘ನಾನು ಎಲ್ಲೂ, ಯಾರಿಗೂ ಕೊಲೆ ಬೆದರಿಕೆ ಹಾಕಿಲ್ಲ. ಇದೆಲ್ಲ ನನ್ನ ಮೇಲಿನ ಅಸೂಯೆ ಇಂದ ಮಾಡುತ್ತಿರುವ ಸುಳ್ಳು ಆರೋಪ. ‘ಮಾಸ್ತಿಗುಡಿ’ ಸಿನಿಮಾದ ಅವಘಡ ಆದ ಸಮಯದಲ್ಲಿಯೂ ಸಹ ನನ್ನ ಜೊತೆ ಒಂದು ಮಾತನಾಡಿ ಟಿವಿಗಳ ಮುಂದೇ ಹೋಗಿ ಬೇರೆ ರೀತಿ ಮಾತನಾಡಿದ್ದರು’ ಎಂದು ರವಿವರ್ಮಾ ಹೇಳಿದ್ದಾರೆ.

‘ಜಾಕಿ’ ಸಿನಿಮಾದ ಫೈರ್ ಫೈಟ್ ಅನ್ನು ತಾನು ಮಾಡಿದ್ದು ಎಂದು ನಿರ್ದೇಶಕ ಪ್ರಭುದೇವ ಮುಂದೆ ಸುಳ್ಳು ಹೇಳಿ ಬಾಲಿವುಡ್ ಸಿನಿಮಾ ಅವಕಾಶವನ್ನು ರವಿವರ್ಮಾ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಬಹಿರಂಗವಾಗಿ ನಾನು ಮಾತನಾಡಿದ ಬಳಿಕ ನನ್ನ ಆಪ್ತ ಸಹಾಯಕನಿಗೆ ಕರೆ ಮಾಡಿ ನನ್ನ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಡ್ಯಾನಿ ಮಾಸ್ಟರ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ, ರವಿವರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Wed, 13 March 24