AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರ್ಯಾದೆ ಪ್ರಶ್ನೆ: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅಂಥದ್ದೇನಾಯ್ತು?

ಜನ ಸಾಮಾನ್ಯರಾಗಿರಲಿ ಅಥವಾ ಸೆಲೆಬ್ರಿಟಿಗಳೇ ಆಗಿರಲಿ ಮರ್ಯಾದೆ ಪ್ರಶ್ನೆ ಬಂದರೆ ಸುಮ್ಮನಿರೋಕೆ ಸಾಧ್ಯವಿಲ್ಲ. ಸ್ಯಾಂಡಲ್​ವುಡ್​ನ ಅನೇಕ ಮಂದಿಗೆ ಈಗ ಮರ್ಯಾದೆ ಪ್ರಶ್ನೆ ಎದುರಾಗಿದೆ. ಅವರೆಲ್ಲ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಅಷ್ಟಕ್ಕೂ ಈ ಸೆಲೆಬ್ರಿಟಿಗಳೆಲ್ಲ ಏಕಕಾಲಕ್ಕೆ ಮರ್ಯಾದೆ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಯಾಕೆ ಎಂಬ ಕೌತುಕ ಮೂಡಿದೆ.

ಮರ್ಯಾದೆ ಪ್ರಶ್ನೆ: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅಂಥದ್ದೇನಾಯ್ತು?
ಮರ್ಯಾದೆ ಪ್ರಶ್ನೆ
ಮದನ್​ ಕುಮಾರ್​
|

Updated on: Mar 13, 2024 | 7:33 PM

Share

ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಮರ್ಯಾದೆ ಪ್ರಶ್ನೆ (Maryade Prashne) ಎದುರಾಗಿದೆ. ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಇದೇ ಟ್ರೆಂಡ್​ ಆಗುತ್ತಿದೆ. ತಮ್ಮ ಪಾಲಿನ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು ಸೆಲೆಬ್ರಿಟಿಗಳು ಪೋಸ್ಟ್​ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್​ ಸುನಿ, ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್​ ಟ್ರೇನರ್​ ಶ್ರಿನಿವಾಸ್​ ಗೌಡ ಮುಂತಾದವರು ಇದೇ ವಿಷಯವಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ವಲಯದಲ್ಲಿ ಕೌತುಕ ಮೂಡಿಸಲಾಗಿದೆ. ಸ್ಯಾಂಡಲ್​ವುಡ್​ನ (Sandalwood) ಇವರಿಗೆಲ್ಲ ಅಂದೆಂಥ ಮರ್ಯಾದೆ ಪ್ರಶ್ನೆ ಎದುರಾಗಿರಬಹುದು ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ.

‘ಕರಟಕ ದಮನಕ’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ನಟಿಸಿದ್ದಾರೆ. ಆ ಚಿತ್ರದಲ್ಲಿ ಪ್ರಭುದೇವ ಜೊತೆ ಅವರು ಡ್ಯಾನ್ಸ್​ ಮಾಡಿದ ‘ಹಿತ್ತಲಕ ಕರಿಬ್ಯಾಡ ಮ್ಯಾವ..’ ಸಾಂಗ್​ ಸೂಪರ್​ ಹಿಟ್​ ಆಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ನಿಶ್ವಿಕಾ ನಾಯ್ಡು ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ‘ಹಿತ್ತಲಕ ಕರಿಬೇಡ ಮಾವಾ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು, ಸಿಂಪಲ್​ ಸುನಿ ನಿರ್ದೇಶನ ಮಾಡಿರುವ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮಾರ್ಚ್​ 22ರಂದು ತೆರೆಕಾಣಲಿದೆ. ಅದರ ತಯಾರಿಯಲ್ಲಿರುವ ಸಿಂಪಲ್​ ಸುನಿ ಅವರಿಗೂ ಮರ್ಯಾದೆ ಪ್ರಶ್ನೆ ಎದುರಾಗಿದೆ. ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು. ಮರ್ಯಾದೆ ಪ್ರಶ್ನೆ’ ಎಂದು ಸುನಿ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ? ಉತ್ತರಿಸಿದ ನಿರ್ದೇಶಕಿ ರಿಷಿಕಾ ಶರ್ಮಾ

‘ಮನಸ್ಸಿಗೆ ಅನ್ಸಿದ್ದು ಹೇಳಿಬಿಡಬೇಕು. ಮರ್ಯಾದೆ ಪ್ರಶ್ನೆ’ ಎಂದು ನಿರಂಜನ್​ ದೇಶಪಾಂಡೆ ಬರೆದುಕೊಂಡಿದ್ದಾರೆ. ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ನಟಿ ಸಂಯುಕ್ತಾ ಹೊರನಾಡು ಬರೆದುಕೊಂಡಿದ್ದಾರೆ. ‘ಜಿಮ್​ಗೆ ಸೇರ್ತೀರ. ಕಾಸು ಕೊಡ್ತೀರ. ಆದ್ರೆ ಜಿಮ್​ಗೆ ಬರೋದೇ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಸೆಲೆಬ್ರಿಟಿ ಟ್ರೇನರ್​ ಶ್ರೀನಿವಾಸ್​ ಗೌಡ ಪೋಸ್ಟ್​ ಮಾಡಿದ್ದಾರೆ. ಸೆಲೆಬ್ರಿಟಿಗಳ ಈ ಪೋಸ್ಟ್​ಗೆ ಕಮೆಂಟ್​ ಮಾಡಿದ ನೆಟ್ಟಿಗರು ‘ಇದೇನು ಹೊಸ ಟ್ರೆಂಡ್​’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್

‘ಮರ್ಯಾದೆ ಪ್ರಶ್ನೆ’ ಬಗ್ಗೆ ಕೆಲವು ಅನುಮಾನಗಳ ಕೂಡ ಮೂಡಿವೆ. ಇದು ಹೊಸ ಸಿನಿಮಾದ ಟೈಟಲ್​ ಆಗಿರಬಹುದೇ? ಆ ಶೀರ್ಷಿಕೆ ಅನೌನ್ಸ್​ ಮಾಡುವುದಕ್ಕೂ ಮುನ್ನವೇ ಹೀಗೆ ಟ್ರೆಂಡ್​ ಮಾಡಲಾಗುತ್ತಿದೆಯೇ? ಪ್ರಚಾರಕ್ಕಾಗಿ ಹೊಸ ಪ್ಲ್ಯಾನ್​ ಮಾಡಲಾಗಿದೆಯೇ? ಒಂದು ವೇಳೆ ಅದು ಸಿನಿಮಾದ ಟೈಟಲ್​ ಆಗಿದ್ದರೆ ಆ ಚಿತ್ರಕ್ಕೆ ಹೀರೋ ಯಾರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಶೀಘ್ರದಲ್ಲೇ ಅದಕ್ಕೆ ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ