ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್

ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್

ಮಂಜುನಾಥ ಸಿ.
|

Updated on: Feb 14, 2024 | 11:26 PM

Yash: ಸ್ಟಾರ್ ನಟರು ಒಂದರ ಹಿಂದೊಂದು ಸಿನಿಮಾ ಮಾಡಿದರೆ ಮಾತ್ರ ಚಿತ್ರರಂಗ ಉಳಿಯುತ್ತದೆ ಎಂಬ ವಾದ ಆಗಿದ್ದಾಂಗೆ ಕೇಳಿ ಬರುತ್ತಲೇ ಇರುತ್ತದೆ. ಈ ಬಗ್ಗೆ ನಟ ಯಶ್ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗ (Sandalwood) ಕೆಲವು ಸ್ಟಾರ್​ ನಟರನ್ನು ಮಾತ್ರವೇ ನಂಬಿಕೊಂಡಿದೆ ಎಂಬ ಮಾತಿದೆ. ಸ್ಟಾರ್ ನಟರು ಒಂದರ ಹಿಂದೊಂದು ಸಿನಿಮಾಗಳನ್ನು ಮಾಡಬೇಕು ಆಗ ಮಾತ್ರ ಚಿತ್ರರಂಗ ಉಳಿಯುತ್ತದೆ ಎಂಬ ಮಾತುಗಳು ಸಹ ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಯಶ್ ಮೇಲಂತೂ ವರ್ಷಕ್ಕೆ ಒಂದಾದರೂ ಸಿನಿಮಾ ಮಾಡುವಂತೆ ಸಾಕಷ್ಟು ಒತ್ತಡವಿದೆ. ಇಂದು (ಫೆಬ್ರವರಿ 14) ತಮ್ಮ ಫಿಟ್​ನೆಸ್ ಟ್ರೈನರ್ ಕಿಟ್ಟಿಯವರ ಜಿಮ್ ಉದ್ಘಾಟನೆಗೆ ಆಗಮಿಸಿದ್ದ ಯಶ್ (Yash), ಈ ಬಗ್ಗೆ ಮಾತನಾಡಿ, ‘ನನ್ನೊಬ್ಬನಿಂದ ಮಾತ್ರ ಕನ್ನಡ ಚಿತ್ರರಂಗವಲ್ಲ, ಅಥವಾ ಇರುವ ಕೆಲವು ಸ್ಟಾರ್ ನಟರು ಮಾತ್ರವೇ ಸಿನಿಮಾ ಮಾಡಬೇಕು ಎಂದಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಹೊಸಬರಿಗೂ ಸಿಗಬೇಕು. ಬೇರೆಯವರು ಸಿನಿಮಾ ಮಾಡಿದಾಗ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿ ಬೆಂಬಲ ನೀಡಬೇಕು. ಆಗಷ್ಟೆ ಚಿತ್ರರಂಗ ಬೆಳೆಯಲು ಸಾಧ್ಯ, ಕೆಲವರಿಂದ ಮಾತ್ರ ಚಿತ್ರರಂಗ ಬೆಳೆಯುತ್ತದೆ ಎಂದರೆ ತಪ್ಪು’ ಎಂದಿದ್ದಾರೆ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ