ಸರ್ಕಾರ ಕಾರು ಖರೀದಿಸಿದ್ದು ಪ್ರಶ್ನಿಸುವ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಸೈಕಲ್, ಬಸ್​ಗಳಲ್ಲಿ ಓಡಾಡುತ್ತಿದ್ದರೇ? ಮಧು ಬಂಗಾರಪ್ಪ

ಸರ್ಕಾರ ಕಾರು ಖರೀದಿಸಿದ್ದು ಪ್ರಶ್ನಿಸುವ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಸೈಕಲ್, ಬಸ್​ಗಳಲ್ಲಿ ಓಡಾಡುತ್ತಿದ್ದರೇ? ಮಧು ಬಂಗಾರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 14, 2024 | 7:10 PM

ಬರಗಾಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯವರು10 ಕೇಜಿ ಅಕ್ಕಿ ಕೋಡೋದನ್ನ ನಿಲ್ಲಿಸಿದ್ದಾರಾ? ಮಹಿಳೆಯರಿಗೆ ರೂ. 2,000 ಕೊಡೋದನ್ನು ನಿಲ್ಲಿಸಿದ್ದಾರಾ? ಶಕ್ತಿ ಯೋಜನೆ ನಿಂತಿದೆಯಾ? ಬರ ಅಂತ ಯಾವ ಯೋಜನೆಯನ್ನೂ ಸರ್ಕಾರ ನಿಲ್ಲಿಸಲ್ಲ, 35-40 ಕಾರುಗಳನ್ನು ಖರೀದಿಸಿದರೆ, ಖಜಾನೆ ಖಾಲಿಯಾಗುತ್ತದಯೇ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.

ಶಿವಮೊಗ್ಗ: ರಾಜ್ಯ ಭೀಕರ ಬರದಿಂದ ತತ್ತರಿಸಿರುವಾಗ ಕರ್ನಾಟಕ ಸರ್ಕಾರ ಮಂತ್ರಿಗಳಿಗಾಗಿ ಐಷಾರಾಮಿ ಕಾರು ಕೊಂಡಿರುವುದಕ್ಕೆ ಬಿಜೆಪಿ ನಾಯಕರು (BJP leaders) ತೀವ್ರ ಆಕ್ಷೇಪಣೆ ಎತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರತಿಕ್ರಿಯೆ ನೀಡಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಬರಗಾಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯವರು (CM Siddaramaiah) 10 ಕೇಜಿ ಅಕ್ಕಿ ಕೋಡೋದನ್ನ ನಿಲ್ಲಿಸಿದ್ದಾರಾ? ಮಹಿಳೆಯರಿಗೆ ರೂ. 2,000 ಕೊಡೋದನ್ನು ನಿಲ್ಲಿಸಿದ್ದಾರಾ? ಶಕ್ತಿ ಯೋಜನೆ ನಿಂತಿದೆಯಾ? ಬರ ಅಂತ ಯಾವ ಯೋಜನೆಯನ್ನೂ ಸರ್ಕಾರ ನಿಲ್ಲಿಸಲ್ಲ, 35-40 ಕಾರುಗಳನ್ನು ಖರೀದಿಸಿದರೆ, ಖಜಾನೆ ಖಾಲಿಯಾಗುತ್ತದೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ, ಇಂಥ ಕಿತಾಪತಿ ಮಡೋದನ್ನು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಅವರು ಸರ್ಕಾರ ನಡೆಸುತ್ತಿದ್ದಾಗ ಸೈಕಲ್ ಗಳ ಮೇಲೆ, ಆಟೋ ಅಥವಾ ಬಸ್ ಗಳಲ್ಲಿ ಓಡಾಡುತ್ತಿದ್ದರೇ, ಅವರು ಖಾಸಗಿ ವಿಮಾನಗಳನ್ನು ಗೊತ್ತು ಮಾಡಿಕೊಂಡು ಹಾರಾಡಿದ ಫೋಟೋಗಳನ್ನು ಬಿಡುಗಡೆ ಮಾಡಲೇ? ಅಂತ ಕೇಳಿದ ಸಚಿವ, ತಾನು ಇವತ್ತು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವಂತೆ ಸಿದ್ದರಾಮಯ್ಯ ಕಳಿಸಿದ್ದನ್ನು, ತಾನು ವಿಧಾನಸಭೆ ಮತ್ತು ವಿಧಾನ ಪರಿಷತ್ ಗೆ ರಜೆ ಗುಜರಾಯಿಸಿ ಕಾರಲ್ಲಿ ಬಂದಿದ್ದನ್ನು ಹೇಳಿದ್ದು ಔಟ್ ಆಫ್ ಡಿ ಕಾಂಟೆಸ್ಟ್ ಅನಿಸಿತು ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ