ಚಕ್ರವರ್ತಿ ಸೂಲಿಬೆಲೆಯ ಟ್ವೀಟ್ ಕೀಳು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ: ಮಧು ಬಂಗಾರಪ್ಪ, ಶಿಕ್ಷಣ ಸಚಿವ

ಮಾರ್ಚ್ ಒಂದರಂದು ಮಾತ್ರ ಒಂದು ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಅವತ್ತು ಶುಕ್ರವಾರ ಆಗಿರುವುದರಿಂದ ನಮಾಜಿಗೋಸ್ಕರ ವೇಳೆ ಬದಲಾಯಿಸಲಾಗಿದೆಯೇ ಅಂತ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ. ಟ್ವೀಟನ್ನು ಉಲ್ಲೇಖಿಸಿದ ಮಧು ಬಂಗಾರಪ್ಪ, ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆ ಎಂದು ಹೇಳಿದರು.

Follow us
|

Updated on: Feb 06, 2024 | 1:00 PM

ಮೈಸೂರು: ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಇಂದು ಮೈಸೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ವಿಷಯ ಸೂಲಿಬೆಲೆ ಟ್ವೀಟ್ ಗೆ ಸಂಬಂಧಿಸಿದ್ದು. ಎಸ್ಸೆಸ್ಸೆಲ್ಸಿಯ ಎಲ್ಲ ಪರೀಕ್ಷೆಗಳು ಬೆಳಗಿನ ಸೆಷನ್ ನಲ್ಲಿ ನಡೆಸಲಾಗುತ್ತಿದೆ ಅದರೆ, ಮಾರ್ಚ್ ಒಂದರಂದು ಮಾತ್ರ ಒಂದು ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಅವತ್ತು ಶುಕ್ರವಾರ ಆಗಿರುವುದರಿಂದ ನಮಾಜಿಗೋಸ್ಕರ ವೇಳೆ ಬದಲಾಯಿಸಲಾಗಿದೆಯೇ ಅಂತ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ. ಟ್ವೀಟನ್ನು ಉಲ್ಲೇಖಿಸಿದ ಮಧು ಬಂಗಾರಪ್ಪ, ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕನಿಷ್ಟ ಸಾಮಾನ್ಯ ಜ್ಞಾನವನ್ನಾದರೂ ಆವರು ಪ್ರದರ್ಶಿಸಬೇಕಿತ್ತು, ಅವತ್ತು ಯಾಕೆ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಅಂತ ಯೋಚಿಸುವ ವ್ಯವಧಾನವೂ ಅವರಿಗಿಲ್ಲ, ಅಸಲು ವಿಷಯವೇನೆಂದರೆ ಅದೇ ದಿನ ದ್ವಿತೀಯ ಪರೀಕ್ಷೆಗಳು ಆರಂಭವಾಗಲಿದ್ದು, ಬೆಳಗ್ಗೆ ಆ ಪರೀಕ್ಷೆ ನಡೆಯಲಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂದು ಹೇಳಿದ ಸಚಿವ, ಸೂಲಿಬೆಲೆಯ ಮನಸ್ಥಿತಿಯನ್ನು ತೆಗಳಿದರು. ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ಭಾವನಾತ್ಮಕ ವಿಷಯಗಳಿಂದ ಜನರ ತಲೆಕೆಡಿಸುವುದನ್ನು ನಿಲ್ಲಿಸಬೇಕು, ಕರ್ನಾಟಕದಲ್ಲಿ ಅದೆಲ್ಲ ನಡೆಯಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ