AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲಿ ಮಂತ್ರಿಗಳ ಗೈರು ಹಾಜರಿಗೆ ಕ್ಷಮೆಯಾಚಿಸಿದ ಸರ್ಕಾರದ ಚೀಫ್ ವ್ಹಿಪ್ ಅಶೋಕ್ ಪಟ್ಟಣ್

ಸದನದಲ್ಲಿ ಮಂತ್ರಿಗಳ ಗೈರು ಹಾಜರಿಗೆ ಕ್ಷಮೆಯಾಚಿಸಿದ ಸರ್ಕಾರದ ಚೀಫ್ ವ್ಹಿಪ್ ಅಶೋಕ್ ಪಟ್ಟಣ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 14, 2024 | 5:26 PM

Share

ಬಿಜೆಪಿ ಶಾಸಕ ಸುನಿಲ ಕುಮಾರ ತಮ್ಮ ಬೇಸರ ವ್ಯಕ್ತಪಡಿಸುತ್ತಾ, ಮಂತ್ರಿಗಳು ಸರಿಯಾದ ಸಮಯಕ್ಕೆ ಸದನದೊಳಗೆ ಬರುವಂತೆ ತಾಕೀತು ಮಾಡಲು ತಮ್ಮ ಕಚೇರಿಯ ಅಧಿಕಾರಿಗಳನ್ನೇ ನೇಮಿಸುವಂತೆ ಸಭಾಧ್ಯಕ್ಷರಿಗೆ ಹೇಳಿದರು. ಆಧಿಕಾರಿಗಳು ಹೇಳಿದರೆ ಅವರಿಗೆ ಅರ್ಥವಾಗಲ್ಲ, ನೀವು ವಿರೋಧ ಪಕ್ಷದವರೇ ಅವರನ್ನು ಸದನದಲ್ಲಿ ತಿವಿಯಬೇಕು ಅಂತ ಸ್ಪೀಕರ್ ಪ್ರತಿಕ್ರಿಯಿಸಿದರು.

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭಗೊಂಡು ಎರಡು ದಿನ ಮಾತ್ರ ಕಳೆದಿದೆ, ಇವತ್ತು ಮೂರನೇ ದಿನ. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಅಧಿವೇಶನ ಆಗಲೇ ಸಾಕೆನಿಸಿಬಿಟ್ಟಿದೆ. ಸದನದಲ್ಲಿ ಆಡಳಿತ ಪಕ್ಷದ ಸದಸ್ಯರ ಗೈರುಹಾಜರಿ ವಿರೋಧ ಪಕ್ಷದ ಶಾಸಕರಿಗೆ ರೊಚ್ಚಿಗೆಬ್ಬಿಸಿದರೆ ಸ್ಪೀಕರ್ ಯುಟಿ ಖಾದರ್ (UT Khader) ಅವರಿಗೆ ನಿರಾಶರಾಗಿಸಿತು. ಬಿಜೆಪಿ ಶಾಸಕ ಸುನಿಲ ಕುಮಾರ (Sunil Kumar) ತಮ್ಮ ಬೇಸರ ವ್ಯಕ್ತಪಡಿಸುತ್ತಾ, ಮಂತ್ರಿಗಳು ಸರಿಯಾದ ಸಮಯಕ್ಕೆ ಸದನದೊಳಗೆ ಬರುವಂತೆ ತಾಕೀತು ಮಾಡಲು ತಮ್ಮ ಕಚೇರಿಯ ಅಧಿಕಾರಿಗಳನ್ನೇ ನೇಮಿಸುವಂತೆ  ಸಭಾಧ್ಯಕ್ಷರಿಗೆ ಹೇಳಿದರು. ಅಧಿಕಾರಿಗಳು ಹೇಳಿದರೆ ಅವರಿಗೆ ಅರ್ಥವಾಗಲ್ಲ, ನೀವು ವಿರೋಧ ಪಕ್ಷದವರೇ ಅವರನ್ನು ಸದನದಲ್ಲಿ ತಿವಿಯಬೇಕು ಅಂತ  ಖಾದರ್ ಹೇಳಿದರು. ಚೀಫ್ ವ್ಹಿಪ್ ಮಾತಿಗೂ ಅವರು ಬೆಲೆ ಕೊಡುವಂತೆ ಕಾಣುತ್ತಿಲ್ಲ, ವ್ಹಿಪ್ ಮೇಲೆ ಮತ್ತೊಬ್ಬ ವ್ಹಿಪ್ ನನ್ನು ನೇಮಕ ಮಾಡಿ ಅಂತ ವಿರೋಧ ಪಕ್ಷದ ನಾಯಕರು ಹೇಳಿದಾಗ ಸರ್ಕಾರದ ಚೀಫ್ ವ್ಹಿಪ್ ಅಶೋಕ ಪಟ್ಟಣ್ (Ashok Pattan) ಎದ್ದು ನಿಂತು ಕ್ಷಮೆಯಾಚಿಸಿ ನಾಳೆಯಿಂದ ಎಲ್ಲರ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಏರ್ಪಾಟು ಮಾಡೋದಾಗಿ ಹೇಳಿದರು. ಹಾಗಾದರೆ, ಸದನದ ಕಲಾಪವನ್ನು ನಾಳೆಗೆ ಮುಂದೂಡಿ ಅಂತ ಸುನೀಲ ಕುಮಾರ ಹೇಳಿದಾಗ ಅದು ಸಭಾಧ್ಯಕ್ಷರು ತೆಗೆದುಕೊಳ್ಳಬಹುದಾದ ನಿರ್ಣಯ ಅಂತ ಪಟ್ಟಣ್ ಹೇಳುತ್ತಾರೆ. ಅದೇ ಸಮಯಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಸದನದೊಳಗೆ ಬರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ