ದೆಹಲಿಯಲ್ಲಿ ಜೋಶಿಯವರ ಮನೆಗೆ ನನ್ನ ಕೆಲಸದ ನಿಮಿತ್ತ ಹೋಗಿದ್ದರೆ ಬೇರೆಯವರು ತಮ್ಮ ಕೆಲಸಗಳಿಗೆ ಬಂದಿದ್ದರು: ಬಸನಗೌಡ ಪಾಟೀಲ್ ಯತ್ನಾಳ್
ತಾನು ಯಾರಿಗೂ ಹೆದರಿದವನಲ್ಲ, ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, ತಮ್ಮ ಮುಂದಿರುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಆ ಹುದ್ದೆಯನ್ನು ಅಲಂಕರಿಸುವಂತೆ ಮಾಡೋದು, ಭಾರತ ಭಾರತವಾಗೇ ಉಳಿಯಬೇಕು, ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಮತ್ತು ಕರ್ನಾಟಕದಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲಬೇಕು ಎಂದು ಯತ್ನಾಳ್ ಹೇಳಿದರು.
ಶಿವಮೊಗ್ಗ: ತಮ್ಮ ಪಕ್ಷದ ಬಹತೇಕ ಸದಸ್ಯರು ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರೆ ಬಿಜೆಪಿ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ಶಿವಮೊಗ್ಗದಲ್ಲಿದ್ದರು. ಮಾಧ್ಯಮದವರ ಜೊತೆ ಮಾತಾಡುವಾಗ ಸಹಜವಾಗೇ ಅವರು ಮೊನ್ನೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಜೊತೆ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಷಯ ಪ್ರಸ್ತಾಪವಾಯಿತು. ಭೇಟಿಯಾಗಿದ್ದು ಒಂದು ಆಕಸ್ಮಿಕ ಅವರು ತಮ್ಮ ಕೆಲಸಕ್ಕಾಗಿ ಜೋಶಿಯವರ ಮನೆಗೆ ಹೋಗಿದ್ದರೆ ತಾನು ತನ್ನ ಕೆಲಸದ ನಿಮಿತ್ತ ಹೋಗಿದ್ದು ಎಂದರು. ನಂತರ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿದ ಯತ್ನಾಳ್, ತಾನು ಯಾರಿಗೂ ಹೆದರಿದವನಲ್ಲ, ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, ತಮ್ಮ ಮುಂದಿರುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಆ ಹುದ್ದೆಯನ್ನು ಅಲಂಕರಿಸುವಂತೆ ಮಾಡೋದು, ಭಾರತ ಭಾರತವಾಗೇ ಉಳಿಯಬೇಕು, ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಮತ್ತು ಕರ್ನಾಟಕದಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲಬೇಕು ಎಂದು ಹೇಳಿದರು. ಪತ್ರಕರ್ತರೊಬ್ಬರು ಪುನಃ ಜೋಶಿ ಮನೆಯಲ್ಲಿ ವಿಜಯೇಂದ್ರರನ್ನು ಭೇಟಿಯಾದ ಬಗ್ಗೆ ಕೇಳಿದಾಗ, ನೀವಂದುಕೊಳ್ಳುವಂಥದ್ದು ಏನೂ ಇಲ್ಲ, ಅವರು ತಮ್ಮ ಕಪ್ ನಲ್ಲಿ ಚಹಾ ಸೇವಿಸಿದರೆ ನಾನು ನನ್ನ ಕಪ್ ನಲ್ಲಿ ಚಹಾ ಕುಡಿದೆ ಎಂದು ನಗುತ್ತಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ