ಟಿಕೆಟ್, ಅಧಿಕಾರ, ಪ್ರಶಸ್ತಿಗಾಗಿ ವಶೀಲಿ ಮಾಡುವ ಜಾಯಮಾನ ನಂದಲ್ಲ, ಹೊಂದಾಣಿಕೆ ರಾಜಕಾರಣ ಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಟಿಕೆಟ್, ಅಧಿಕಾರ, ಪ್ರಶಸ್ತಿಗಾಗಿ ವಶೀಲಿ ಮಾಡುವ ಜಾಯಮಾನ ನಂದಲ್ಲ, ಹೊಂದಾಣಿಕೆ ರಾಜಕಾರಣ ಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 12, 2024 | 10:36 AM

ತನಗೆ ಹೊಂದಾಣಿಕೆ ಮಾಡಿ ಗೊತ್ತಿಲ್ಲ ಅದನ್ನು ಮಾಡಿ ರಾಜಕಾರಣದಲ್ಲಿರುವ ಉಮೇದಿಯೂ ತನಗಿಲ್ಲ, ಪ್ರಶಸ್ತಿಗಳಿಗಾಗಿ ಮತ್ತು ಟಿಕೆಟ್ ಇಲ್ಲವೇ ಆಧಿಕಾರಕ್ಕಾಗಿ ವಶೀಲಿ ಮಾಡಿದವನಲ್ಲ, ರಾಜಕೀಯ ಬದುಕಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಿಬ್ಬರಿಗೆ ಬಿಟ್ಟರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಿದವನಲ್ಲ ಎಂದು ಯತ್ನಾಳ್ ಹೇಳಿದರು.

ಹಾವೇರಿ: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಬಿಎಸ್ ಯಡಿಯೂರಪ್ಪ (BS Yediyurappa) ನಡುವೆ ರಾಜಿ? ಕಭೀ ನಹೀಂ! ಮೊನ್ನೆ ದೆಹಲಿಯಲ್ಲಿ ಯತ್ನಾಳ್ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯದ ಇತರ ಕೆಲ ಬಿಜೆಪಿ ನಾಯಕರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ದೆಹಲಿ ಕಚೇರಿಯಲ್ಲಿ ಒಟ್ಟಿಗೆ ನೋಡಿದಾಗ ಅವರಿಬ್ಬರ ನಡುವೆ ರಾಜಿ ಸಂಧಾನ ನಡೆದ ಅನುಮಾನ ಮೂಡಿತ್ತು. ಆದರೆ ಹಾವೇರಿಯಲ್ಲಿ ಬಿಜೆಪಿಯ ವಿಜಯಪುರ ಶಾಸಕ ಮಾತಾಡುವುದನ್ನು ಕೇಳಿದರೆ ಅಂಥದ್ದೇನೂ ನಡೆದಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬವನ್ನು ಹಳಿಯುವುದನ್ನು ಮುಂದುವರಿಸಿದ್ದಾರೆ. ತನಗೆ ಹೊಂದಾಣಿಕೆ ಮಾಡಿ ಗೊತ್ತಿಲ್ಲ ಅದನ್ನು ಮಾಡಿ ರಾಜಕಾರಣದಲ್ಲಿರುವ ಉಮೇದಿಯೂ ತನಗಿಲ್ಲ, ಪ್ರಶಸ್ತಿಗಳಿಗಾಗಿ ಮತ್ತು ಟಿಕೆಟ್ ಇಲ್ಲವೇ ಆಧಿಕಾರಕ್ಕಾಗಿ ವಶೀಲಿ ಮಾಡಿದವನಲ್ಲ, ರಾಜಕೀಯ ಬದುಕಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಿಬ್ಬರಿಗೆ ಬಿಟ್ಟರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಿದವನಲ್ಲ ಎಂದು ಯತ್ನಾಳ್ ಹೇಳಿದರು.

ಹೊಂದಾಣಿಕೆ ಮಾಡಿಕೊಂಡರೆ ಭವಿಷ್ಯ ಚೆನ್ನಾಗಿರುತ್ತೆ ಅಂತ ಬಹಳಷ್ಟು ಜನ ಹೇಳುತ್ತಾರೆ, ಅದು ತನಗೆ ಬೇಕಿಲ್ಲ, ಲೋಕಸಭಾ ಚುನಾವಣೆಯ ಬಳಿಕ ತನಗೊಂದು ಗತಿ ಕಾದಿದೆ ತನಗೆ ಚೆನ್ನಾಗಿ ಗೊತ್ತಿದೆ, ಹಾಗಂತ ವಶೀಲಿ ಮಾಡುವ ಜಾಯಮಾನ ತನ್ನದಲ್ಲ ಎಂದು ಯತ್ನಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ