Karnataka Budget 2024: ಬಜೆಟ್​ ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿಕೊಂಡು ಬಂದ ಬಿಜೆಪಿ ನಾಯಕರು

Karnataka Budget 2024: ಬಜೆಟ್​ ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿಕೊಂಡು ಬಂದ ಬಿಜೆಪಿ ನಾಯಕರು

ವಿವೇಕ ಬಿರಾದಾರ
|

Updated on:Feb 12, 2024 | 12:03 PM

ಕರ್ನಾಟಕ ಬಜೆಟ್​ ಅಧಿವೇಶನ 2024 ಆರಂಭವಾಗಿದೆ. ಹತ್ತು ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16 ರಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಅಧಿವೇಶನ ಇಂದು (ಫೆ.12) ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಬಜೆಟ್​ ಅಧಿವೇಶನದ ಮೊದಲ ದಿನ ಬಿಜೆಪಿ ನಾಯಕರು ಕೇಸರಿ ಶಾಲೆ ಧರಿಸಿಕೊಂಡು ಬಂದಿದ್ದು ವಿಶೇಷವಾಗಿದೆ.

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ಬಜೆಟ್​ ಅಧಿವೇಶನ 2024 (Karnataka Budget 2024) ಆರಂಭವಾಗಿದೆ. ಹತ್ತು ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಫೆಬ್ರವರಿ 16 ರಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಅಧಿವೇಶನ ಇಂದು (ಫೆ.12) ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಬಜೆಟ್​ ಅಧಿವೇಶನದ ಮೊದಲ ದಿನ ಬಿಜೆಪಿ ನಾಯಕರು ಕೇಸರಿ ಶಾಲೆ ಧರಿಸಿಕೊಂಡು ಬಂದಿದ್ದು ವಿಶೇಷವಾಗಿದೆ. ಸದ್ಯ ರಾಜ್ಯದಲ್ಲಿ ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರ ರಾಜ್ಯವ್ಯಾಪಿ ಹಬ್ಬಿದೆ. ಕೆರಗೋಡಿನಲ್ಲಿ ಹನುಮ ಧ್ವಜವನ್ನು ಮತ್ತೆ ಹಾರಿಸಲು ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ. ಇದರ ಪ್ರತೀಕವೆಂಬಂತೆ ಬಿಜೆಪಿ ಶಾಸಕರು ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ. ಈ ಮೂಲಕ ಹಿಂದೂ ವಿರೋಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವೆಂದು ಸಾಂಕೇತಿಕವಾಗಿ ಟೀಕಿಸಿದ್ದಾರೆ.

Published on: Feb 12, 2024 11:58 AM