ದೇವೇಗೌಡರ ಕುಟುಂಬವನ್ನು ನಖಶಿಖಾಂತ ದ್ವೇಷಿಸುವ ಪ್ರೀತಂ ಗೌಡರನ್ನು ಕುಮಾರಸ್ವಾಮಿ ತನ್ನ ಸಹೋದರ ಅಂದರು!

ದೇವೇಗೌಡರ ಕುಟುಂಬವನ್ನು ನಖಶಿಖಾಂತ ದ್ವೇಷಿಸುವ ಪ್ರೀತಂ ಗೌಡರನ್ನು ಕುಮಾರಸ್ವಾಮಿ ತನ್ನ ಸಹೋದರ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 12, 2024 | 11:25 AM

ಇಂದು ಹಾಸನ ಚನ್ನಂಗಿಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವಾಗ ಕುಮಾರಸ್ವಾಮಿಯವರು ಪ್ರೀತಂ ಬಗ್ಗೆ ಅನುನಯದ ಸ್ವರದಲ್ಲಿ ಮಾತಾಡಿದರು. ಅವರಿನ್ನೂ ಯುವಕ, ಯಾರೋ ಅವರು ತಲೆ ತುಂಬುತ್ತಿದ್ದಾರೆ, ಬಿಸಿರಕ್ತದ ಆವೇಶದಲ್ಲಿ ಮಾತಾಡುತ್ತಾರೆ, ಅವರು ತನಗೆ ಸಹೋದರನಂತೆ ಎಂದು ಕುಮಾರಸ್ವಾಮಿ ಹೇಳಿದರು.

ಹಾಸನ: ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಕುಟುಂಬವನ್ನು ನೀರು ಕುಡಿಕುಡಿದು ಉಗಿಯುತ್ತಿದ್ದ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡರನ್ನು (Preetham J Gowda) ಹಗುರವಾಗಿ ಪರಿಗಣಿಸಿದ್ದಾರೆ ಇಲ್ಲವೇ ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಬಿಜೆಪಿಯೆಡೆ ದೋಸ್ತಿಗಾಗಿ ಕೈ ಚಾಚಿದ ದಿನದಿಂದ ಪ್ರೀತಂ ಗೌಡ ಅವರು ದೇವೇಗೌಡರ (HD Devegowda) ಕುಟುಂಬದ ಸದಸ್ಯರನ್ನು ಒಂದೇ ಸಮ ಟೀಕಿಸುತ್ತಿದ್ದಾರೆ ಮತ್ತು ಬಿಜೆಪಿ-ಜೆಡಿಎಸ್ ಹೊಂದಾಣಿಕೆಯನ್ನು ಪ್ರೀತಂ ಗೌಡ ನಖಶಿಖಾಂತ ದ್ವೇಷಿಸುತ್ತಿದ್ದಾರೆ. ಇಂದು ಹಾಸನ ಚನ್ನಂಗಿಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವಾಗ ಕುಮಾರಸ್ವಾಮಿಯವರು ಪ್ರೀತಂ ಬಗ್ಗೆ ಅನುನಯದ ಸ್ವರದಲ್ಲಿ ಮಾತಾಡಿದರು. ಅವರಿನ್ನೂ ಯುವಕ, ಯಾರೋ ಅವರು ತಲೆ ತುಂಬುತ್ತಿದ್ದಾರೆ, ಬಿಸಿರಕ್ತದ ಆವೇಶದಲ್ಲಿ ಮಾತಾಡುತ್ತಾರೆ, ಅವರು ತನಗೆ ಸಹೋದರನಂತೆ ಎಂದು ಕುಮಾರಸ್ವಾಮಿ ಹೇಳಿದರು.

ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಪ್ರೀತಂಗೆ ಕೊಡೋಣ ಅದಲ್ಲೇನಂತೆ, ಕೂತು ಚರ್ಚೆ ಮಾಡುತ್ತೇವೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಮಾತಿನ ಧೋರಣೆ ನೋಡಿದರೆ ರಾಜ್ಯದಲ್ಲಿ ಟಿಕೆಟ್ ಹಂಚುವ ಜವಾಬ್ದಾರಿಯನ್ನು ಬಿಜೆಪಿ ನಾಯಕರು ಜೆಡಿಎಸ್ ನಾಯಕನಿಗೆ ಬಿಟ್ಟುಕೊಟ್ಟಂತಿದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 12, 2024 11:23 AM