ಬಾಗಲಕೋಟೆ: ಅಯೋಧ್ಯೆ ರಾಮ ಮಂದಿರ ಮಂಡಲಾರಾಧನೆ ಪೂಜೆಗೆ ಮುಧೋಳನ ಗುರುನಾಥ್ ಜೋಶಿ ಆಯ್ಕೆ
ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಫೆ.15, 16 ರಂದು ನಡೆಯಲಿರುವ ಮಂಡಲಾರಾಧನೆ ಪೂಜೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅರ್ಜಕ ಮುಧೋಳನ ಗುರುನಾಥ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ. ಅರ್ಚಕ ಗುರುನಾಥ್ ಜೋಶಿ ಅವರು ಮುಧೋಳದಲ್ಲಿ ಸದ್ಗುರು ಚಿದಂಬರ ವೈದಿಕ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ.
ಬಾಗಲಕೋಟೆ, ಫೆಬ್ರವರಿ 12: ಅಯೋಧ್ಯೆಯಲ್ಲಿ (Ayodhya) ಬಾಲ ರಾಮನ (Ramlalla) ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಸಂಖ್ಯ ಭಕ್ತಾದಿಗಳು ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ಈ ರಾಮ ಮಂದಿರಕ್ಕೂ ಮತ್ತು ಕರ್ನಾಟಕಕ್ಕೂ (Karnataka) ಅವಿನಾಭಾವ ಸಂಬಂಧವಿದೆ. ಈ ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರ ಕೈ ಮೇಲಾಗಿದೆ. ಇನ್ನೂ ಮಂದಿರದಲ್ಲಿ ವಿರಾಜಮಾನವಾಗಿರುವ ಬಾಲ ರಾಮನ ಮೂರ್ತಿಯನ್ನು ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ್ (Mysore Arun Yogiraj) ಕೆತ್ತಿದ್ದಾರೆ. ಇದು ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ಇದೀಗ ಅಯೋಧ್ಯೆ ರಾಮ ಮಂದಿರ ಮಂಡಲಾರಾಧನೆ (Mandalaradhne) ಪೂಜೆಗೆ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ್ ಜೋಶಿ (Gurunath Joshi) ಆಯ್ಕೆಯಾಗಿದ್ದಾರೆ. ಅರ್ಚಕ ಗುರುನಾಥ್ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ ಅಧ್ಯಯನ ಮಾಡಿದ್ದಾರೆ.
ಅರ್ಚಕ ಗುರುನಾಥ್ ಜೋಶಿ ಅವರನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯರು, ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಗಳು ಆಯ್ಕೆ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನಗಳ ಕಾಲ ಮಂಡಲಾರಾಧನೆ ನಡೆಯಲಿದೆ. ಫೆ.15, 16 ರಂದು ನಡೆಯಲಿರುವ ಮಂಡಲಾರಾಧನೆ ಪೂಜೆಯಲ್ಲಿ ಅರ್ಚಕ ಗುರುನಾಥ್ ಜೋಶಿ ಅವರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ಕಣ್ಣುಗಳನ್ನು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಫೋಟೋ ಹಂಚಿಕೊಂಡ ಶಿಲ್ಪಿ ಅರುಣ್ ಯೋಗಿರಾಜ್
ಅರ್ಚಕ ಗುರುನಾಥ್ ಜೋಶಿ ಅವರು ಸದ್ಯ ಸದ್ಗುರು ಚಿದಂಬರ ವೈದಿಕ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ. ಈ ಹಿಂದೆ ಮುಧೋಳದ ಸಾಯಿ ಬಾಬಾ ದೇಗುಲದ ಅರ್ಚಕರಾಗಿದ್ದರು.
ಅಯೋಧ್ಯೆ ರಾಮ ಮಂದಿರ ಮಂಡಲಾರಾಧನೆಗೆ ನನ್ನನ್ನು ಆಯ್ಕೆ ಮಾಡಿದ್ದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಇಂತಹ ಅವಕಾಶ ಸಿಕ್ಕಿದ್ದು ಎಂದು ಮರೆಯಲಾಗದು. ಪ್ರಭು ಶ್ರೀರಾಮಚಂದ್ರ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಗುರುನಾಥ ಜೋಶಿ ಹಾರೈಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ