Udupi Ram Mandir Gift: ಸುವರ್ಣ ಅಟ್ಟೆ ಪ್ರಭಾವಳಿ: ಅಯೋಧ್ಯೆ ಬಾಲರಾಮನಿಗೆ ಕೋಟ ಕಾಶಿಮಠ ಸಂಸ್ಥಾನದಿಂದ ಮತ್ತೊಂದು ಭರ್ಜರಿ ಕೊಡುಗೆ

ಅಯೋಧ್ಯಾ ಶ್ರೀ ರಾಮನಿಗೆ ಶ್ರೀ ಕಾಶಿಮಠ ಸಂಸ್ಥಾನದಿಂದ ಕೊಡುಗೆ. ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ಇದನ್ನು ನಿರ್ಮಿಸಲಾಗಿದೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನಿಗೆ ಇದನ್ನು ಅರ್ಪಿಸಲಾಗುವುದು.

Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on:Feb 10, 2024 | 3:11 PM

ಉಡುಪಿ, ಫೆಬ್ರವರಿ 9: ಅಯೋಧ್ಯಾ (Ayodhya) ಶ್ರೀ ರಾಮನಿಗೆ (Ram Mandir) ಶ್ರೀ ಕಾಶಿಮಠ ಸಂಸ್ಥಾನದಿಂದ ಮತ್ತೊಂದು ಭರ್ಜರಿ ಕೊಡುಗೆ ನೀಡಲಾಗಿದೆ. ಸುವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆಗೆ ಸಿದ್ಧವಾಗಿದೆ. ದೇವರ ಉತ್ಸವ ಮೂರ್ತಿಗೆ ಅಲಂಕಾರಿಕವಾಗಿ ಈ ಅಟ್ಟೆ ಪ್ರಭಾವಳಿಯನ್ನು (Prabhavali, Aura) ಬಳಸಲಾಗುತ್ತದೆ.

ಉಡುಪಿ  (Udupi) ಜಿಲ್ಲೆ ಕೋಟ ಶ್ರೀ ಕಾಶಿ ಮಠದ ಶಾಖೆಯಿಂದ ವೈಭವದ ಮೆರವಣಿಗೆಯ ಮೂಲಕ ಅಯೋಧ್ಯೆಯತ್ತ ತೆರಳಲಿದೆ. ಸುಮಾರು ಒಂದು ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯಿಂದ ಇದನ್ನು ತಯಾರಿಸಲಾಗಿದೆ. ಈ ಅಟ್ಟೆ ಪ್ರಭಾವಳಿಗೆ ಸುಮಾರು‌70 ಲಕ್ಷ ರೂ ವೆಚ್ಚ ತಗುಲಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನಿಗೆ ರಜತ ಕಲಶ ಅಭಿಷೇಕ ಸೇವೆ ಮಾಡಿಸಬೇಕಾ? ಹಾಗಾದರೆ ಈ ಉದಾತ್ತ ಸಮಾಜ ಕಾರ್ಯ ನಡೆಸಿಕೊಡಿ

ಅಯೋಧ್ಯಾ ಶ್ರೀ ರಾಮನಿಗೆ ಶ್ರೀ ಕಾಶಿಮಠ ಸಂಸ್ಥಾನದಿಂದ ಕೊಡುಗೆ. ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ಇದನ್ನು ನಿರ್ಮಿಸಲಾಗಿದೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನಿಗೆ ಇದನ್ನು ಅರ್ಪಿಸಲಾಗುವುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:45 pm, Sat, 10 February 24