ನಮಾಜ್ ಮಾಡುತ್ತಿದ್ದಾಗಲೇ ವ್ಯಕ್ತಿಯೋರ್ವ ಕುಳಿತಲ್ಲೇ ಉರುಳಿ ಬಿದ್ದು ಸಾವು; ವಿಡಿಯೋ ಇಲ್ಲಿದೆ
ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟಗ್ಟಿರುವ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ. ನಮಾಜ್ ಮಾಡುತ್ತಿರುವಾಗ ವ್ಯಕ್ತಿಯೋರ್ವ ಹೇಗೆ ನೆಲಕ್ಕೆ ಉರುಳಿ ಬಿದ್ದರು ಎನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ, (ಫೆಬ್ರವರಿ, 10): ಮಸೀದಿಯೊಳಗೆ ನಮಾಜ್ ( namaz)ಮಾಡುತ್ತಾ ಕುಳಿತಲ್ಲೇ ಕುಸಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ (Anjuman Mosque Udupi) ನಡೆದಿದೆ. ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್(55) ಮೃತ ವ್ಯಕ್ತಿ. ಶುಕ್ರವಾರ ಮಧ್ಯಾಹ್ನದ ನಮಾಜ್ಗೆಂದು ಅಬ್ದುಲ್ ಖಾದರ್ ಕಳಾರ್ ಅವರು ಅಂಜುಮಾನ್ ಮಸೀದಿಗೆ ಬಂದಿದ್ದು, ಎಲ್ಲರೂ ತಮ್ಮ ಪಾಡಿಗೆ ನಮಾಜ್ ಮಾಡುತ್ತಿರುವಾಗ ಮುಸ್ತಾಕ್ ಕುಳಿತಲ್ಲೇ ಉರುಳಿ ಬಿದ್ದಿದ್ದಾರೆ.
ಮುಷ್ತಾಕ್ ಅವರು ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜ್‌ಗಾಗಿ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಗೆ ಬಂದಿದ್ದರು. ಅವರು ಖುತ್ಬಾ ಕೇಳಲು ಕುಳಿತಿದ್ದಾಗ ಒಮ್ಮಿಂದೊಮ್ಮೆಗೇ ಏನೋ ಆದಂತಾಗಿ ಕುಳಿತಿದ್ದಲ್ಲೇ ಕುಸಿದು ಬಿದ್ದರು. ಅವರ ಜತೆಗೆ ನಮಾಜ್ ಮಾಡುತ್ತಿದ್ದವರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ಯಾರೂ ಸಹ ಅಷ್ಟು ಅವರತ್ತ ಗಮನಹರಿಸದೇ ತಮ್ಮ ಪಾಡಿಗೆ ತಾವು ನಮಾಜ್ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕೂಡಲೇ ಅವರನ್ನು ಮೇಲೆ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಮುಸ್ತಾಕ್ ಮೇಲೇಳಲೇ ಇಲ್ಲ. ನಂತರ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Sat, 10 February 24