ಬಿಗ್​ಬಾಸ್​ನಲ್ಲಿ ಗೆದ್ದ ಹಣವನ್ನು ಏನು ಮಾಡಿದರು ಸಂಗೀತಾ ಶೃಂಗೇರಿ

ಬಿಗ್​ಬಾಸ್​ನಲ್ಲಿ ಗೆದ್ದ ಹಣವನ್ನು ಏನು ಮಾಡಿದರು ಸಂಗೀತಾ ಶೃಂಗೇರಿ

ಮಂಜುನಾಥ ಸಿ.
|

Updated on: Feb 11, 2024 | 11:28 PM

Sangeetha Sringeri: ನಟಿ ಸಂಗೀತಾ ಶೃಂಗೇರಿ ಬಿಗ್​ಬಾಸ್ ಕನ್ನಡ ಸೀಸನ್ 10ರ ಎರಡನೇ ರನ್ನರ್ ಅಪ್ ಆಗಿದ್ದು ಅವರಿಗೆ ಏಳು ಲಕ್ಷ ನಗದು ಬಹುಮಾನ ನೀಡಲಾಗಿತ್ತು. ಆ ಹಣವನ್ನು ಅವರು ಏನು ಮಾಡಿದರು? ಅವರೇ ಕೊಟ್ಟರು ಮಾಹಿತಿ.

ಸಂಗೀತಾ ಶೃಂಗೇರಿ (Sangeetha Sringeri) ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ಫಿನಾಲೆ ವರೆಗೂ ಬಂದು ಎಡವಿದರು. ಸಂಗೀತಾ, ಬಿಗ್​ಬಾಸ್ ಅನ್ನು ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಜನ, ಆದರೆ ಅವರು ಎರಡನೇ ರನ್ನರ್ ಅಪ್ ಆದರು. ಹಾಗೆಂದು ಅವರನ್ನು ಬರಿಗೈಲಿ ಕಳಿಸಲಿಲ್ಲ. ಅವರಿಗೆ ಏಳು ಲಕ್ಷ ನಗದು ಬಹುಮಾನ ನೀಡಲಾಗಿತ್ತು. ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಇಂದು (ಫೆಬ್ರವರಿ 11) ಅಭಿಮಾನಿಗಳನ್ನು ಸಂಗೀತಾ ಭೇಟಿ ಮಾಡಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸಂಗೀತಾ, ಬಿಗ್​ಬಾಸ್​ನಲ್ಲಿ ಗೆದ್ದ ಮೊತ್ತವನ್ನು ನಾನು ಸರ್ಕಾರಿ ಶಾಲೆಗಳ ಉಳಿವಿಗೆ ಖರ್ಚು ಮಾಡಿದ್ದೇನೆ ಎಂದರು. ಸರ್ಕಾರಿ ಶಾಲೆಗಳು ಉತ್ತಮ ಪರಸ್ಥಿತಿಯಲ್ಲಿಲ್ಲ. ಹಲವು ಕಡೆ ಶಾಲೆಗಳು ಮುಚ್ಚುತ್ತಿವೆ ಎಂದ ಸಂಗೀತಾ. ತಾವು ಗೆದ್ದ ಮೊತ್ತವನ್ನು ಸರ್ಕಾರಿ ಬಾಲಕಿಯರ ಶಾಲೆಯೊಂದಕ್ಕೆ ದೇಣಿಗೆಯಾಗಿ ನೀಡಿದ್ದಾಗಿ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ