AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿಗಂತ್​ ನನ್ನ ಕ್ರಶ್​’: ಮನಸ್ಸಿನ ಮಾತು ಹಂಚಿಕೊಂಡ ಸಂಗೀತಾ ಶೃಂಗೇರಿ

‘ದಿಗಂತ್​ ನನ್ನ ಕ್ರಶ್​’: ಮನಸ್ಸಿನ ಮಾತು ಹಂಚಿಕೊಂಡ ಸಂಗೀತಾ ಶೃಂಗೇರಿ

ಮದನ್​ ಕುಮಾರ್​
|

Updated on: Feb 06, 2024 | 4:40 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸಿ ಬಂದಿರುವ ನಟಿ ಸಂಗೀತಾ ಶೃಂಗೇರಿ ಅವರು ಈಗ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ದಿಗಂತ್​ ಜೊತೆ ಅವರು ನಟಿಸಿರುವ ‘ಮಾರಿಗೋಲ್ಡ್​’ ಸಿನಿಮಾದ ಟೀಸರ್​ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳನ್ನು ಸಂಗೀತಾ ಹಂಚಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಿದೆ. ಒಂದೆಡೆ ‘777 ಚಾರ್ಲಿ’ ಸಿನಿಮಾದ ಗೆಲುವು, ಇನ್ನೊಂದೆಡೆ ‘ಬಿಗ್​ ಬಾಸ್​ ಕನ್ನಡ’ ಶೋ. ಈ ಎರಡೂ ಕಾರಣಗಳಿಂದ ಅವರು ಫೇಮಸ್​ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ದಿಗಂತ್​ ಮಂಚಾಲೆ (Diganth Manchale) ಜೊತೆ ಸಂಗೀತಾ ಶೃಂಗೇರಿ ಅವರು ‘ಮಾರಿಗೋಲ್ಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಫೆಬ್ರವರಿ 6) ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಈ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಸಂಗೀತಾ ಮಾತನಾಡಿದ್ದಾರೆ. ‘ನಾನು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ಕಾರಣ ಕಥೆ. ಇನ್ನೊಂದು ಕಾರಣ ದಿಗಂತ್​. ಅವರ ಜೊತೆ ಆ್ಯಕ್ಟ್​ ಮಾಡಬೇಕು ಅಂತ ನನಗೆ ಚಿಕ್ಕ ವಯಸ್ಸಿನಿಂದಲೂ ಕನಸು ಇತ್ತು. ನನ್ನ ಬಾಲ್ಯದ ಕ್ರಶ್​ ಯಾರು ಅಂತ ಅನೇಕರು ಕೇಳಿದ್ದಾರೆ. ಸಿನಿಮಾ ಜಗತ್ತಿನಲ್ಲಿ ದಿಗಂತ್​ (Diganth) ಅವರು ನನ್ನ ಕ್ರಶ್​ ಆಗಿದ್ದರು. ಶೂಟಿಂಗ್​ ಸಂದರ್ಭದಲ್ಲಿ ನಾನು ಅದನ್ನು ಅವರಿಗೆ ಹೇಳಿದ್ದೇನೆ’ ಎಂದಿದ್ದಾರೆ ಸಂಗೀತಾ ಶೃಂಗೇರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More