AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾ ಶೃಂಗೇರಿ ಜೊತೆಗಿನ ಗೆಳೆತನದ ಬಗ್ಗೆ ಕಾರ್ತಿಕ್ ಮಹೇಶ್ ಮಾತು

Karthik Mahesh: ಬಿಗ್​ಬಾಸ್ ಕನ್ನಡ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಹಾಗೂ ಸಂಗೀತಾ ಶೃಂಗೇರಿ ನಡುವಿನ ಗೆಳೆತನದ ಬಗ್ಗೆ ಮಾತನಾಡಿದರು.

ಸಂಗೀತಾ ಶೃಂಗೇರಿ ಜೊತೆಗಿನ ಗೆಳೆತನದ ಬಗ್ಗೆ ಕಾರ್ತಿಕ್ ಮಹೇಶ್ ಮಾತು
ಕಾರ್ತಿಕ್-ಮಹೇಶ್
ಮಂಜುನಾಥ ಸಿ.
|

Updated on: Feb 03, 2024 | 11:15 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಗೆದ್ದಿರುವ ಕಾರ್ತಿಕ್ ಮಹೇಶ್, ಮನೆಯಿಂದ ಹೊರ ಬಂದ ಬಳಿಕ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದರ ಹಿಂದೊಂದು ಸಂದರ್ಶನಗಳನ್ನು ನೀಡುತ್ತಲೇ ಇದ್ದಾರೆ. ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕಮಗಳಿಗೂ ಅತಿಥಿಯಾಗಿ ಹೋಗುತ್ತಿದ್ದಾರೆ. ಇದೆಲ್ಲದರ ನಡುವೆ ಬಾಲ್ಯ ಕಳೆದ ಚಾಮರಾಜನಗರ ಜಿಲ್ಲೆಗೆ ಕಾರ್ತಿಕ್ ಮಹೇಶ್ ಭೇಟಿ ನೀಡಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿರುವ ಕಾರ್ತಿಕ್ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ಇರುವಾಗ ಸಾಕಷ್ಟು ಮಾತುಗಳು ಬರ್ತಾಯಿತ್ತು ಆಗ ಬೇಸರ ಕೂಡ ಆಗ್ತಾಯಿತ್ತು. ತುಳಿಯೋಕೆ ಸಾವಿರ ಜನ ಇರ್ತಾರೆ ಆದರೆ ಕೈ ಹಿಡಿದು ಎತ್ತೊಕೆ ಕೋಟಿ ಜನ ಇರ್ತಾರೆ, ಕೆಲವರು ಏನೇನೋ ಮಾತನಾಡುತ್ತಾರೆ ಆದರೆ ಅಂಥಹವರ ಬಗ್ಗೆ ಕೆಡಿಸಿಕೊಳ್ಳಬಾರದು’ ಎಂದ ಕಾರ್ತಿಕ್, ‘ಚಾಮರಾಜನಗರ ಜಿಲ್ಲೆಯೊಟ್ಟಿಗಿನ ತಮ್ಮ ನಂಟಿನ ಬಗ್ಗೆ ಮಾತನಾಡುತ್ತಾ, ‘ಪ್ರತಿ ವರ್ಷ ಬೇಸಿಗೆ ರಜೆಗೆ ಅಜ್ಜಿ ಮನೆಗೆ ಬರ್ತಾಯಿದ್ದೆ ಸ್ನೇಹಿತರೆಲ್ಲಾ ಒಗ್ಗೂಡಿ ತೋಟಕ್ಕೆ ಹೋಗ್ತಾಯಿದ್ವಿ ಎಳನೀರು ಕುಡಿತಾ ಇದ್ವಿ. ಹೊಳಕಲ್ಲಲ್ಲಿ ರುಬ್ಬಿ ಅಜ್ಜಿ ಅಡುಗೆ ಮಾಡಿ ಕೊಡ್ತಾಯಿದ್ದರು. ಅದನ್ನು ಮರೆಯಲು ಸಾದ್ಯವೇ ಇಲ್ಲಾ’ ಎಂದಿದ್ದಾರೆ.

ಇದನ್ನೂ ಓದಿ:ಗೆಳೆಯನ ‘ಮಂಡ್ಯ ಹೈದ’ ಟ್ರೈಲರ್ ವೀಕ್ಷಿಸಿ ಕೊಂಡಾಡಿದ ಬಿಗ್​ಬಾಸ್ ವಿಜೇತ ಕಾರ್ತಿಕ್

‘ಕಾರ್ಯಕ್ರಮ ಒಂದಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಕಾರ್ಯಕ್ರಮ ಮುಗಿದ ಬಳಿಕ ನೇರವಾಗಿ ತಂಗಿ ಮನೆಗೆ ಹೋಗಿ ತಂಗಿ ಹಾಗೂ ಮಗುವನ್ನು ನೋಡುವೆ. ಬಿಗ್ ಬಾಸ್ ಬಳಿಕ ಸಾಕಷ್ಟು ಆಫರ್​ಗಳು ಬರುತ್ತಿವೆ ಈ ವಾರದ ಬಳಿಕ ಮುಂದಿನ ನಿರ್ಧಾರ ತಿಳಿಸುವೆ. ಚಾಮರಾಜನಗರದಲ್ಲಿ ದೊಡ್ಮನೆ ಹುಡುಗ ಪುನಿತ್ ರಾಜ್ ಕುಮಾರನ್ನ ನೆನೆದ ಕಾರ್ತಿಕ್, ಅಪ್ಪು ಸರ್ ಇದ್ದಿದ್ದರೆ ಖಂಡಿತ ಭೇಟಿ ಮಾಡುತ್ತಿದ್ದೆ. ನಾಳೆ ಅಪ್ಪು ಸರ್ ಸಮಾಧಿ ಬಳಿ ಹೋಗಿ ನಮನ ಸಲ್ಲಿಸುವೆ. ಒಂದು ಡ್ಯಾನ್ಸ್ ಶೋ ನಲ್ಲಿ ಭಾಗಿಯಾಗಿದ್ದಾಗ ಅಪ್ಪು ಸರ್ ನಮ್ಮನ್ನು ತುಂಬ ಚೆನ್ನಾಗಿ ನಡೆಸಿಕೊಂಡಿದ್ದರು. ಪ್ರೀತಿಯಿಂದ ಮಾತನಾಡಿಸಿದ್ದರು ಅದನ್ನ ಯಾವತ್ತು ಮರೆಯಲು ಸಾಧ್ಯವಿಲ್ಲ. ನನ್ನನ್ನು ನೋಡಿ ತುಂಬಾ ಸ್ಮಾರ್ಟ್ ಆಗಿದ್ದೀರ ಅಂತ ಅಪ್ಪು ಸರ್ ಹೇಳಿದ್ದರು’ ಎಂದು ನೆನಪು ಮಾಡಿಕೊಂಡರು.

ಸಂಗಿತಾ ಶೃಂಗೇರಿ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ ಕಾರ್ತಿಕ್, ‘ನನ್ನ ಬಳಿ ಸಂಗೀತಾ ಶೃಂಗೇರಿ ಅವರ ಮೊಬೈಲ್ ನಂಬರ್ ಇಲ್ಲಾ ನಾನು ಅವರನ್ನು ಕಾಂಟ್ಯಾಕ್ಟ್ ಮಾಡಿಲ್ಲ ಹಾಗೇ ಅವರೂ ಸಹ ಸಂಪರ್ಕ ಮಾಡಿಲ್ಲ. ಬಿಗ್ ಬಾಸ್ ಮನೆ ಒಳಗಡೆ ಆಗಿದ್ದು ಒಳಗಡೆ ಮಾತ್ರ, ನಾನು ಯಾವ ದ್ವೇಷವನ್ನು ಕ್ಯಾರಿ ಓವರ್ ಮಾಡುವುದಿಲ್ಲ. ಯಾರೇ ಸಿಕ್ಕರೂ ನಗು ನಗ್ತಾ ನಾಲ್ಕು ಮಾತಾಡಿ ಹೋಗ್ತಿನಿ, ನಾನು ಯಾರನ್ನೂ ದ್ವೇಷ ಮಾಡುವುದಿಲ್ಲ ನಾನು ಯಾರನ್ನು ಜಾಸ್ತಿ ಫೋರ್ಸ್ ಮಾಡೋಕೆ ಹೋಗಲ್ಲ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ