ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿವೈ ವಿಜಯೇಂದ್ರ ನಡುವಿನ ಮುನಿಸು ಕೊನೆಗೊಂಡಿತೇ?
ಯತ್ನಾಳ್ ಮತ್ತು ಜಾರಕಿಹೊಳಿ ‘ಸಮಾನ ಮನಸ್ಕರು’, ಆದರೆ ಯತ್ನಾಳ್ ಹಾಗೆ ಜಾರಕಿಹೊಳಿ ಅವರು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ನಾಲಗೆ ಹರಿಬಿಡದಿದ್ದರೂ ಅವರೊಂದಿಗೆ ಅಂತರ ಕಾಯ್ದುಕೊಂಡವರು. ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಮುನಿಸನ್ನು ಕೊನೆಗಾಣಿಸುವಲ್ಲಿ ಪಕ್ಷದ ವರಿಷ್ಠರು ಯಶ ಕಂಡಂತಿದೆ.
ದೆಹಲಿ: ಆಗೆ ಆಗೆ ದೇಖೋ ಹೋತಾ ಹೈ ಕ್ಯಾ ಅನ್ನುವಂತಿದೆ ಬಿಜೆಪಿ ನಾಯಕರ ಧೋರಣೆ. ಲೋಕ ಸಭಾ ಚುನಾವಣೆ ಮುಗಿಯುವ ಹೊತ್ತಿಗೆ ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆಯೋ? ಇಂಥದೊಂದು ದೃಶ್ಯವನ್ನು ಕನ್ನಡಿಗರು ಖಂಡಿತ ನಿರೀಕ್ಷಿಸಿರಲಿಲ್ಲ- ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಅವರ ಬದ್ಧವೈರಿ (bête noir) ಬಸನಗೌಡ ಪಾಟೀಲ್ ಯತ್ನಾಳ್ ರನ್ನು (Basangouda Patil Yatnal) ಒಂದೇ ಫ್ರೇಮಿನಲ್ಲಿ! ವೆಲ್, ಇಬ್ಬರ ನಡುವೆ ರಾಜಿ ಸಂಧಾನ ಆದಂತಿದೆ. ವಿಜಯೇಂದ್ರ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿಯಾಗಲು ಸಂಸತ್ ಭವನಕ್ಕೆ ತೆರಳಿದ್ದರು. ಅಲ್ಲಿ ಕೇವಲ ಜೋಶಿಯಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯದ ಬಿಜೆಪಿ ಸಂಸದರಾದ ಪಿಸಿ ಮೋಹನ್, ಪಿಸಿ ಗದ್ದಿಗೌಡರ, ಶಾಸಕ ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಸಹ ಇದ್ದರು. ಯತ್ನಾಳ್ ಮತ್ತು ಜಾರಕಿಹೊಳಿ ‘ಸಮಾನ ಮನಸ್ಕರು’, ಆದರೆ ಯತ್ನಾಳ್ ಹಾಗೆ ಜಾರಕಿಹೊಳಿ ಅವರು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ನಾಲಗೆ ಹರಿಬಿಡದಿದ್ದರೂ ಅವರೊಂದಿಗೆ ಅಂತರ ಕಾಯ್ದುಕೊಂಡವರು. ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಮುನಿಸನ್ನು ಕೊನೆಗಾಣಿಸುವಲ್ಲಿ ಪಕ್ಷದ ವರಿಷ್ಠರು ಯಶ ಕಂಡಂತಿದೆ. ಒಂದೆರಡು ತಿಂಗಳಿಂದ ಯತ್ನಾಳ್ ಮಾಧ್ಯಮಗಳಿಂದ ದೂರವಿದ್ದಿದ್ದು ರಾಜಿ ಸಂಧಾನ ನಡೆಯುವುದರ ಮುನ್ಸೂಚನೆಯಾಗಿತ್ತೇ? ಇದ್ದೀತು ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ