ಡಿಕೆ ಶಿವಕುಮಾರ್​ ಭೇಟಿಯಾದ ಕಾರ್ತಿಕ್​ ಮಹೇಶ್​; ಬಿಗ್​ ಬಾಸ್​ ಟ್ರೋಫಿ ಜತೆ ಪೋಸ್​

ಡಿಕೆ ಶಿವಕುಮಾರ್​ ಭೇಟಿಯಾದ ಕಾರ್ತಿಕ್​ ಮಹೇಶ್​; ಬಿಗ್​ ಬಾಸ್​ ಟ್ರೋಫಿ ಜತೆ ಪೋಸ್​

ಮದನ್​ ಕುಮಾರ್​
|

Updated on: Feb 14, 2024 | 1:14 PM

ಬಿಗ್​ ಬಾಸ್​ ಗೆದ್ದ ಕಾರ್ತಿಕ್​ ಮಹೇಶ್​ ಅವರು ರಾಜಕೀಯ ಕ್ಷೇತ್ರದ ಹಲವು ಗಣ್ಯರನ್ನು ಭೇಟಿ ಮಾಡಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆಶಿ ಜೊತೆ ಬಿಗ್​ ಬಾಸ್​ ಟ್ರೋಫಿಯನ್ನು ಹಿಡಿದುಕೊಂಡು ಕಾರ್ತಿಕ್​ ಮಹೇಶ್​ ಪೋಸ್​ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ...

ನಟ ಕಾರ್ತಿಕ್​ ಮಹೇಶ್​ (Karthik Mahesh) ಅವರು ಈಗ ಸೆಲೆಬ್ರೇಷನ್​ ಮೂಡ್​ನಲ್ಲಿ ಇದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಭಾಗಿಯಾಗಿದ್ದ ಅವರು ಟ್ರೋಫಿ ಪಡೆದು ಬಂದ ಬಳಿಕ ಅನೇಕರನ್ನು ಭೇಟಿ ಮಾಡುತ್ತಿದ್ದಾರೆ. ರಾಜಕೀಯ ಕ್ಷೇತ್ರದ ಅನೇಕ ಗಣ್ಯರನ್ನು ಅವರು ಮೀಟ್​ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಬಿಗ್​ ಬಾಸ್​ ಟ್ರೋಫಿಯನ್ನು ಹಿಡಿದುಕೊಂಡು ಡಿಕೆ ಶಿವಕುಮಾರ್​ ಜೊತೆ ಕಾರ್ತಿಕ್​ ಮಹೇಶ್​ ಪೋಸ್​ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಹಲವು ಸಿನಿಮಾಗಳಲ್ಲಿ ಕಾರ್ತಿಕ್​ ಮಹೇಶ್​ ನಟಿಸುತ್ತಿದ್ದಾರೆ. ಅವರು ಅತಿಥಿ ಪಾತ್ರ ಮಾಡಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ‘ನನ್ನಮ್ಮ ಸೂಪರ್​ಸ್ಟಾರ್​ ಸೀಸನ್​ 3’ ಶೋನಲ್ಲೂ ಅವರು ಗೆಸ್ಟ್​ ಆಗಿ ಭಾಗಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ವಿಪಕ್ಷ ನಾಯಕ ಆರ್​. ಅಶೋಕ್​ ಅವರನ್ನು ಕಾರ್ತಿಕ್​ ಮಹೇಶ್​ ಭೇಟಿ ಆಗಿದ್ದರು. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ