ಜನ ಪ್ರತಿನಿಧಿಗಳ ಮಧ್ಯಾಹ್ನದ ಊಟಕ್ಕೆ ಸಮಯದ ಸೀಮೆ ಇಲ್ಲವೇ? ಲಂಚ್ ಅವರ್ ನಂತರ ಸದನ ಖಾಲಿ ಖಾಲಿ!

ಸದಸ್ಯರ ಅದರಲ್ಲೂ ವಿಶೇಷವಾಗಿ ಮಂತ್ರಿಗಳ ಅನುಪಸ್ಥಿತಿಯಿಂದ ಬೇಸರಗೊಂಡ ಸಭಾಧ್ಯಕ್ಷ ಖಾದರ್, ಅಧಿಕಾರಿಗಳ ಕಡೆ ಎಲ್ಲರನ್ನು ಬೇಗ ಬರಲು ಹೇಳಿ ಅನ್ನುತ್ತಾರೆ. ವಿರೋಧ ಪಕ್ಷದ ನಾಯಕರು ಆತುರ ಪ್ರದರ್ಶಿಸಿದಾಗ ಸಮಾಧಾನ ಮಾಡ್ಕೊಳ್ಳಿ, ಎಲ್ಲಾದಕ್ಕೂ ಪರಿಹಾರ ಇದೆ, ನಿಮ್ಮ ಆತಂಕಕ್ಕೆ ಪರಿಹಾರ ಇಲ್ಲ ಅನ್ನುತ್ತಾರೆ.

ಜನ ಪ್ರತಿನಿಧಿಗಳ ಮಧ್ಯಾಹ್ನದ ಊಟಕ್ಕೆ ಸಮಯದ ಸೀಮೆ ಇಲ್ಲವೇ? ಲಂಚ್ ಅವರ್ ನಂತರ ಸದನ ಖಾಲಿ ಖಾಲಿ!
|

Updated on: Feb 14, 2024 | 4:31 PM

ಬೆಂಗಳೂರು: ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗ್ಗೆ ಶಾಸಕರು ಮತ್ತು ಮಂತ್ರಿಗಳೆಲ್ಲ ಬೇಗ ಸದನಕ್ಕೆ ಬರಲಿ, ತಿಂಡಿ ನೆಪದಲ್ಲಿ ತಡಮಾಡೋದು ಬೇಡ ಅಂತ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರು ವಿಧಾನ ಸೌಧದಲ್ಲೇ ತಿಂಡಿಯ ವ್ಯವಸ್ಥೆ ಮಾಡಿಸಿದರು. ಶಾಸಕರು ಟೈಮಿಗೆ ಬಂದರೇ? ಬೆಳಗಿನ ಸಮಯ ಸದನ ಭರ್ತಿಯಾಗಿದೆ ಅನಿಸಲಿಲ್ಲ. ಅದು ಸರಿ, ಬೆಳಗ್ಗೆ ವಿಧಾನ ಸೌಧದಲ್ಲಿ ತಿಂಡಿ ತಿಂದವರು ಲಂಚ್ ಅವರ್ ನಲ್ಲಿ (lunch hour) ಊಟಕ್ಕೆ ಹೋಗಿ ಬೆಲ್ ಅಗುವ ಮೊದಲು ಸದನದಲ್ಲಿ ಇರಬೇಕು ತಾನೇ? ಅದೂ ಇಲ್ಲ, ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರ ಗೈರುಹಾಜರಿಯಿಂದ ಸಿಟ್ಟಿಗೆದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka), ಅಧ್ಯಕ್ಷರೇ ಯಾರನ್ನು ಪ್ರಶ್ನೆ ಕೇಳೋದು? ಕೃಷ್ಣ ಭೈರೇಗೌಡ (Krishna Byre Gowda) ಮತ್ತು ಒಂದಿಬ್ಬರು ಅಧಿಕಾರಿಗಳನ್ನು ಬಿಟ್ಟರೆ ಯಾರೂ ಇಲ್ಲ, ನೀವು ಬೆಳಗ್ಗೆ ಬೇಗ ಬರಲು ಹೇಳಿದರೆ ಸದನಕ್ಕೆ ಬಂದು ನಿದ್ರೆ ಮಾಡುತ್ತಾರೆ, 11 ಗಂಟೆಗೆ ಬರಲು ಹೇಳಿ ಎಲ್ಲರೂ ಸರಿಯಾಗುತ್ತಾರೆ ಅನ್ನುತ್ತಾರೆ. ಸದಸ್ಯರ ಅದರಲ್ಲೂ ವಿಶೇಷವಾಗಿ ಮಂತ್ರಿಗಳ ಅನುಪಸ್ಥಿತಿಯಿಂದ ಬೇಸರಗೊಂಡ ಸಭಾಧ್ಯಕ್ಷ ಖಾದರ್, ಅಧಿಕಾರಿಗಳ ಕಡೆ ಎಲ್ಲರನ್ನು ಬೇಗ ಬರಲು ಹೇಳಿ ಅನ್ನುತ್ತಾರೆ. ವಿರೋಧ ಪಕ್ಷದ ನಾಯಕರು ಆತುರ ಪ್ರದರ್ಶಿಸಿದಾಗ ಸಮಾಧಾನ ಮಾಡ್ಕೊಳ್ಳಿ, ಎಲ್ಲಾದಕ್ಕೂ ಪರಿಹಾರ ಇದೆ, ನಿಮ್ಮ ಆತಂಕಕ್ಕೆ ಪರಿಹಾರ ಇಲ್ಲ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us