Karnataka Budget Session: 16 ಪ್ರಕರಣಗಳ ಆರೋಪಿ ಶ್ರೀಕಾಂತ್ ಪೂಜಾರಿ ಕರಸೇವಕನಲ್ಲ, ಕರಸೇವಕರ ಹೆಸರಿಗೆ ಕಳಂಕ: ಎಂಬಿ ಪಾಟೀಲ್
ಖರ್ಗೆ ಪುನಃ ಎದ್ದುನಿಂತು, ಪೂಜಾರಿ ವಿರುದ್ಧ ಸುಲಿಗ, ವಂಚನೆ ಪ್ರಕರಣಗಳಿವೆ, ಅವನು ಜೂಜುಕೋರ ಮತ್ತು ಮಟ್ಕಾ ದಂಧೆಯಲ್ಲಿ ಭಾಗಿಯಾಗಿದ್ದವನು, ಅಂಥವನ್ನು ನೀವು ಕರಸೇವಕ ಅಂತ ಕರೆದರೆ ತಮಗೇನು ಅಭ್ಯಂತರವಿಲ್ಲ ಅಂತ ಹೇಳುತ್ತಾ ಕರಸೇವಕನ ವ್ಯಾಖ್ಯಾನ ಏನು ಅನ್ನೋದನ್ನು ಬಿಜೆಪಿ ನಾಯಕರು ಹೇಳಬೇಕು ಅನ್ನುತ್ತಾರೆ
ಬೆಂಗಳೂರು: ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚೆ ಶುರುವಾದಾಗ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ವಿರೋಧ ಪಕ್ಷದ ಆರ್ ಅಶೋಕ (R Ashoka) ಅವರು ಹುಬ್ಬಳ್ಳಿಯ ಬಿಜೆಪಿ ಕಾರ್ಯಕರ್ತ ಮತ್ತು ಕರಸೇವಕ ಶ್ರೀಕಾಂತ್ ಪೂಜಾರಿ (Srikanth Pujari) ಹೆಸರು ಪ್ರಸ್ತಾಪ ಮಾಡುತ್ತಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಅವನು ಕರಸೇವಕ ಅಲ್ಲ ಅನ್ನುತ್ತಾರೆ. ಕೂಡಲೇ ಎದ್ದು ನಿಂತು ಮಾತಾಡುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪೂಜಾರಿಯನ್ನು ಅರೆಸ್ಟ್ ಮಾಡಿದ್ದು 31 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ, ಬೇರೆ ಪ್ರಕರಣಗಳಲ್ಲಿ ಅರೆಸ್ಟ್ ಮಾಡಿಸಿದ್ದರೆ ತಮ್ಮ ಅಭ್ಯಂತರವಿರುತ್ತಿರಲಿಲ್ಲ ಎನ್ನುತ್ತಾರೆ. ಸಚಿವ ಎಂಬಿ ಪಾಟೀಲ್, ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವನನ್ನು ಕರಸೇವಕ, ರಾಮ ಭಕ್ತ ಅನ್ನುತ್ತೀರಲ್ಲ? ಅವನು ಕರಸೇವಕರಿಗೆ ಕಳಂಕ, ಅಪಮಾನ ಅನ್ನುತ್ತಾರೆ.
ಖರ್ಗೆ ಪುನಃ ಎದ್ದುನಿಂತು, ಪೂಜಾರಿ ವಿರುದ್ಧ ಸುಲಿಗ, ವಂಚನೆ ಪ್ರಕರಣಗಳಿವೆ, ಅವನು ಜೂಜುಕೋರ ಮತ್ತು ಮಟ್ಕಾ ದಂಧೆಯಲ್ಲಿ ಭಾಗಿಯಾಗಿದ್ದವನು, ಅಂಥವನ್ನು ನೀವು ಕರಸೇವಕ ಅಂತ ಕರೆದರೆ ತಮಗೇನು ಅಭ್ಯಂತರವಿಲ್ಲ ಅಂತ ಹೇಳುತ್ತಾ ಕರಸೇವಕನ ವ್ಯಾಖ್ಯಾನ ಏನು ಅನ್ನೋದನ್ನು ಬಿಜೆಪಿ ನಾಯಕರು ಹೇಳಬೇಕು ಅನ್ನುತ್ತಾರೆ. ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಶ್ರೀಕಾಂತ್ ಪೂಜಾರಿಯನ್ನು ಸಮರ್ಥಿಸಿಕೊಳ್ಳುವವರಿಗೆ ನಾಚಿಕೆಯಾಗಬೇಕು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ