Karnataka Budget Session: ಪ್ರಿಯಾಂಕ್ ಖರ್ಗೆ ಮತ್ತು ಸುನೀಲ ಕುಮಾರ ನಡುವೆ ಮಾತಿನ ಚಕಮಕಿ; ಸ್ಪೀಕರ್ ಪ್ರೇಕ್ಷಕ!

ಸುನೀಲ ಕುಮಾರ ಯಾವ ವಿಷಯದ ಬಗ್ಗೆ ಚರ್ಚೆಯಾಗಬೇಕು ಅಂತ ನಿಮ್ಮಿಂದ ತಿಳಿಯುವ ಅವಶ್ಯಕತೆ ನಮಗಿಲ್ಲ, ನಮಗೆ ಸಲಹೆ ನೀಡುವ ಸಾಹಸ ಮಾಡಬೇಡಿ ಅಂತ ಹೇಳಿದ ಬಳಿಕ ಸ್ಪೀಕರ್ ಕಡೆ ತಿರುಗಿ, ಅದ್ಯಕ್ಷರೇ, ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗಾಗಿ ಬೆಳಗ್ಗೆ 9 ಗಂಟೆಗೆ ಬಂದು ನೋಟೀಸ್ ಕೊಟ್ಟಿದ್ದೇವೆ, ಹಾಗಾಗಿ ಪ್ರಶ್ನೋತ್ತರ ವೇಳೆಯನ್ನು ಬದಿಗೊತ್ತಿ ಕಾನೂನು ಸುವ್ಯವಸ್ಥೆ ವಿಷಯದ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡಿ ಅನ್ನುತ್ತಾರೆ

Karnataka Budget Session: ಪ್ರಿಯಾಂಕ್ ಖರ್ಗೆ ಮತ್ತು ಸುನೀಲ ಕುಮಾರ ನಡುವೆ ಮಾತಿನ ಚಕಮಕಿ; ಸ್ಪೀಕರ್ ಪ್ರೇಕ್ಷಕ!
|

Updated on: Feb 13, 2024 | 12:19 PM

ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನದ (Karnataka Budget Session) ಎರಡನೇ ದಿನ ಆರಂಭಗೊಳ್ಳುತ್ತಿದ್ದಂತೆಯೇ ಸದನ ರಣಾಂಗಣವಾಯಿತು. ಬಿಜೆಪಿ ಶಾಸಕ ಸುನೀಲ ಕುಮಾರ್ (Sunil Kumar) ಮತ್ತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಇಬ್ಬರೂ ದೊಡ್ಡ ಗಂಟಲಿನವರು. ವಿರೋಧ ಪಕ್ಷದ ನಾಯಕರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಅಂತ ಹೇಳಿ ಚರ್ಚೆಗೆ ಆಗ್ರಹಿಸಿದರೆ, ದೆಹಲಿಯ ಹೊರಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಆ ಚಳುವಳಿಯ ಬಗ್ಗೆ ಚರ್ಚೆ ಬೇಡವೇ ಎಂದು ಖರ್ಗೆ ಕೇಳುತ್ತಾರೆ. ನಮ್ಮ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆಯೂ ಹರಿಯಾಣ ಮತ್ತು ಪಂಜಾಬ್ ರೈತರು ಪ್ರಸ್ತಾಪಿಸಿದ್ದಾರೆ ಅದನ್ನೂ ಚರ್ಚೆ ಮಾಡೋಣ ಎಂದು ಖರ್ಗೆ ರೋಷದಲ್ಲಿ ಹೇಳಿದಾಗ ರೊಚ್ಚಿಗೆದ್ದ ಸುನೀಲ ಕುಮಾರ ಯಾವ ವಿಷಯದ ಬಗ್ಗೆ ಚರ್ಚೆಯಾಗಬೇಕು ಅಂತ ನಿಮ್ಮಿಂದ ತಿಳಿಯುವ ಅವಶ್ಯಕತೆ ನಮಗಿಲ್ಲ, ನಮಗೆ ಸಲಹೆ ನೀಡುವ ಸಾಹಸ ಮಾಡಬೇಡಿ ಅಂತ ಹೇಳಿದ ಬಳಿಕ ಸ್ಪೀಕರ್ ಕಡೆ ತಿರುಗಿ, ಅದ್ಯಕ್ಷರೇ, ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗಾಗಿ ಬೆಳಗ್ಗೆ 9 ಗಂಟೆಗೆ ಬಂದು ನೋಟೀಸ್ ಕೊಟ್ಟಿದ್ದೇವೆ, ಹಾಗಾಗಿ ಪ್ರಶ್ನೋತ್ತರ ವೇಳೆಯನ್ನು ಬದಿಗೊತ್ತಿ ಕಾನೂನು ಸುವ್ಯವಸ್ಥೆ ವಿಷಯದ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡಿ ಅನ್ನುತ್ತಾರೆ. ಆಗ ಗೃಹ ಸಚಿವ ಜಿ ಪರಮೇಶ್ವರ್ ಎದ್ದು ನಿಂತು, ಕ್ವೆಶ್ವನ್ ಅವರ್ ಬದಿಗೊತ್ತಿ ಬೇರೆ ವಿಷಯ ಚರ್ಚೆಗೆ ತೆಗೆದುಕೊಳ್ಳಲು ಅವಕಾಶವಿಲ್ಲ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us