‘ಒಂದು ಸರಳ ಪ್ರೇಮಕಥೆ’ಗೆ ಭರ್ಜರಿ ಆಫರ್; ಲವರ್ಸ್ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ
‘ಒಂದು ಸರಳ ಪ್ರೇಮಕಥೆ’ ಪ್ರೇಮಿಗಳ ದಿನ ಸಂದರ್ಭದಲ್ಲೇ ರಿಲೀಸ್ ಆಗಿದೆ. ಹೀಗಾಗಿ ವ್ಯಾಲೆಂಟೈನ್ಸ್ ಡೇ ದಿನ ಒಂದು ಆಫರ್ ನೀಡಲಾಗಿದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ.
‘ಒಂದು ಸರಳ ಪ್ರೇಮಕಥೆ’ ಚಿತ್ರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿಯೇ ರಿಲೀಸ್ ಆಗಿದೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದಲ್ಲಿ ಲವ್ಸ್ಟೋರಿ ಇದೆ. ಈ ಕಾರಣಕ್ಕೆ ಪ್ರೇಮಿಗಳ ದಿನದಂದು ಒಂದು ಆಫರ್ ನೀಡಲಾಗುತ್ತಿದೆ. ‘ಒಂದು ಸರಳ ಪ್ರೇಮಕಥೆ’ (Ondu Saraka Premakathe Movie) ನೋಡಲು ಹುಡುಗ ಹಾಗೂ ಹುಡುಗಿ ಬಂದರೆ ತಂಡದ ಕಡೆಯಿಂದ ಒಂದು ಆಫರ್ ಇದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ. ಈ ವಿಚಾರವನ್ನು ನಿರ್ದೇಶಕ ಸಿಂಪಲ್ ಸುನಿ ಅವರು ರಿವೀಲ್ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಜನರು ಹೆಚ್ಚೆಚ್ಚು ನೋಡಿದರೆ ಬಾಯಿಮಾತಿನ ಪ್ರಚಾರ ಸಿಗುತ್ತದೆ. ಅದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos