AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗಿ ಆದಿತ್ಯನಾಥ್​ ಭೇಟಿ ಮಾಡಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಅನುಮತಿ ಪತ್ರ ಪಡೆದ ಬೋನಿ ಕಪೂರ್​

ನೋಯ್ಡಾದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದೆ. ನಿರ್ಮಾಪಕ ಬೋನಿ ಕಪೂರ್​ ಅವರು ಟೆಂಡರ್​ ಪಡೆದಿದ್ದಾರೆ. ಫಿಲ್ಮ್​ ಸಿಟಿ ನಿರ್ಮಾಣದ ಪ್ಲ್ಯಾನ್​ ಸಿದ್ಧವಾಗಿದೆ. ನಿರ್ಮಾಣ ಕಾರ್ಯ ಆರಂಭಿಸಲು ಬೇಕಾದ ಎಲ್ಲ ಬಗೆಯ ಅನುಮತಿ ಪತ್ರಗಳನ್ನು ಬೋನಿ ಕಪೂರ್​ ಅವರಿಗೆ ಯೋಗಿ ಆದಿತ್ಯನಾಥ್​ ನೀಡಿದ್ದಾರೆ.

ಯೋಗಿ ಆದಿತ್ಯನಾಥ್​ ಭೇಟಿ ಮಾಡಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಅನುಮತಿ ಪತ್ರ ಪಡೆದ ಬೋನಿ ಕಪೂರ್​
ಬೋನಿ ಕಪೂರ್​, ಯೋಗಿ ಆದಿತ್ಯನಾಥ್​
ಮದನ್​ ಕುಮಾರ್​
|

Updated on: Mar 13, 2024 | 6:08 PM

Share

ನಿರ್ಮಾಪಕ ಬೋನಿ ಕಪೂರ್​ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಅವರನ್ನು ಭೇಟಿ ಮಾಡಿದ್ದಾರೆ. ಲಖನೌನಲ್ಲಿ ಈ ಭೇಟಿ ನಡೆದಿದೆ. ಭೇಟಿಯ ಸಂದರ್ಭದಲ್ಲಿ ಬೋನಿ ಕಪೂರ್​ ಅವರು ನೋಯ್ಡಾದಲ್ಲಿ ನಿರ್ಮಾಣ ಆಗಲಿರುವ ಫಿಲ್ಮ್​ ಸಿಟಿ (Noida Film City) ಬಗ್ಗೆ ಪ್ಲ್ಯಾನ್​ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಕಾರ್ಯ ನಡೆಯಲಿದೆ. ಅದರ ಉಸ್ತುವಾರಿಯನ್ನು ಬೋನಿ ಕಪೂರ್​ ಪಡೆದಿದ್ದಾರೆ. ಬೋನಿ ಕಪೂರ್​ (Boney Kapoor) ಒಡೆತನದ ‘ಬೇವ್ಯೂ ಪ್ರಾಜೆಕ್ಸ್ಟ್​’ ಮತ್ತು ಭೂತಾನಿ ಗ್ರೂಪ್​ ಸಹಯೋಗದಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಆಗಲಿದೆ.

ಮುಂಬರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಅನುಮತಿಗಳಿರುವ ಪತ್ರವನ್ನು ಯೋಗಿ ಆದಿತ್ಯನಾಥ್​ ಅವರು ಬೋನಿ ಕಪೂರ್​ಗೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇರುವ ಫಿಲ್ಮ್​ ಸಿಟಿ ನಿರ್ಮಾಣ ಆಗಬೇಕು ಎಂಬುದು ಯೋಗಿ ಆದಿತ್ಯನಾಥ್​ ಅವರ ಕನಸು. ಅದನ್ನು ಸಾಕಾರಗೊಳಿಸುವ ಅವಕಾಶವನ್ನು ತಮಗೆ ನೀಡಿದ್ದಕ್ಕಾಗಿ ಬೋನಿ ಕಪೂರ್​ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಬಹಳ ಬದ್ಧತೆಯಿಂದ ಈ ಕಾರ್ಯ ಮಾಡುವುದಾಗಿ ಅವರು ಹೇಳಿದ್ದಾರೆ.

ನೋಯ್ಡಾದಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಮಾಡುವ ಟೆಂಡರ್​ ತಮಗೆ ಸಿಕ್ಕಿರುವುದಕ್ಕೆ ಬೋನಿ ಕಪೂರ್​ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಉತ್ಕೃಷ್ಟ ಗುಣಮಟ್ಟದೊಂದಿಗೆ ಈ ಪ್ರಾಜೆಕ್ಟ್​ ಅನ್ನು ಯಶಸ್ವಿಗೊಳಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಫಿಲ್ಮ್​ ಸಿಟಿ ನಿರ್ಮಾಣ ಆದ ಬಳಿಕ ಚಿತ್ರರಂಗಕ್ಕೆ ಬಹಳ ಅನುಕೂಲ ಆಗಲಿದೆ. ಎಲ್ಲ ಬಗೆಯ ಕಾರ್ಯಗಳು ಒಂದೇ ಕಡೆ ಆಗುವ ರೀತಿ ಆಗಲಿದೆ. ಜಗತ್ತಿನಾದ್ಯಂತ ಇರುವ ಫಿಲ್ಮ್​ ಮೇಕರ್​ಗಳು ತಮ್ಮ ಸ್ಕ್ರಿಪ್ಟ್​ ತೆಗೆದುಕೊಂಡು ಬಂದರೆ ಮುಂದಿನ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತಹ ಸೌಲಭ್ಯಗಳು ಈ ಫಿಲ್ಮ್​ ಸಿಟಿಯಲ್ಲಿ ಸಿಗಲಿವೆ.

ಇದನ್ನೂ ಓದಿ: ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ

ಚಿತ್ರರಂಗದಲ್ಲಿ ಬೋನಿ ಕಪೂರ್​ ಅವರು ಹಲವು ವರ್ಷಗಳಿಂದ ನಿರ್ಮಾಪಕನಾಗಿ ಸಕ್ರಿಯರಾಗಿದ್ದಾರೆ. ಅವರದ್ದು ಫಿಲ್ಮಿ ಕುಟುಂಬ. ಪತ್ನಿ ಶ್ರೀದೇವಿ ಅವರು ಭಾರತೀಯ ಚಿತ್ರರಂಗದಲ್ಲಿ ಲೆಜೆಂಡರಿ ನಟಿಯಾಗಿದ್ದರು. ಸಹೋದರ ಅನಿಲ್​ ಕಪೂರ್​ ಕೂಡ ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಬೋನಿ ಕಪೂರ್​ ಹಾಗೂ ಶ್ರೀದೇವಿ ದಂಪತಿಯ ಮಕ್ಕಳಾದ ಜಾನ್ವಿ ಕಪೂರ್​, ಖುಷಿ ಕಪೂರ್​ ಕೂಡ ನಟಿಯಾಗಿ ಬ್ಯುಸಿ ಆಗಿದ್ದಾರೆ. ಬೋನಿ ಕಪೂರ್​ ಅವರ ಮೊದಲ ಪತ್ನಿಯ ಪುತ್ರ ಅರ್ಜುನ್​ ಕಪೂರ್​ ಸಹ ಬಾಲಿವುಡ್​ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತ ಹಲವು ಸಿನಿಮಾಗಳನ್ನು ಬೋನಿ ಕಪೂರ್​ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.