ಸೆಟ್​ನಲ್ಲಿ ಬಸ್ಸು, ಕಾರು ಉಡೀಸ್ ಮಾಡಿದ ರೋಹಿತ್ ಶೆಟ್ಟಿ; ಇಲ್ಲಿದೆ ಝಲಕ್

ರೋಹಿತ್ ಶೆಟ್ಟಿ ಅವರ ‘ಸಿಂಗಂ’ ಹಾಗೂ ‘ಸಿಂಗಂ’ ರಿಟರ್ನ್ ಸಿನಿಮಾಗಳು ಗಮನ ಸೆಳೆದಿವೆ. ಈಗ ಈ ಸರಣಿಯಲ್ಲಿ ಮೂರನೇ ಸಿನಿಮಾ ರಿಲೀಸ್ ಆಗುತ್ತಿದೆ. ರೋಹಿತ್ ಶೆಟ್ಟಿ ಅವರು ಕಾಪ್ ಯೂನಿವರ್ಸ್ ಮಾಡಿದ್ದು, ಇದರಡಿಯಲ್ಲಿ ‘ಸಿಂಗಂ’, ‘ಸಿಂಗಂ ರಿಟರ್ನ್ಸ್’, ‘ಸಿಂಬ’, ‘ಸೂರ್ಯವಂಶಿ’ ಚಿತ್ರಗಳಿವೆ.

ಸೆಟ್​ನಲ್ಲಿ ಬಸ್ಸು, ಕಾರು ಉಡೀಸ್ ಮಾಡಿದ ರೋಹಿತ್ ಶೆಟ್ಟಿ; ಇಲ್ಲಿದೆ ಝಲಕ್
ರೋಹಿತ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on:Oct 27, 2023 | 8:17 AM

ರೋಹಿತ್ ಶೆಟ್ಟಿ (Rohit Shetty) ನಿರ್ದೇಶನದ ಸಿನಿಮಾಗಳಲ್ಲಿ ಆ್ಯಕ್ಷನ್​ಗೆ ಬರ ಇರುವುದಿಲ್ಲ. ಅವರ ಸಿನಿಮಾಗಳಲ್ಲಿ ಮಾಸ್ ಮಸಾಲ ಅಂಶಗಳು ಹೇರಳವಾಗಿ ಇರುತ್ತವೆ. ಅದರಲ್ಲೂ, ಕಾರು, ಬಸ್ಸುಗಳನ್ನು ಉಡೀಸ್ ಮಾಡೋದು ಎಂದರೆ ಅವರಿಗೆ ಸಖತ್ ಇಷ್ಟ. ಹೀಗಾಗಿ, ಅವರ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ಈ ರೀತಿಯ ಒಂದು ದೃಶ್ಯವಾದರೂ ಇದ್ದೇ ಇರುತ್ತದೆ. ಈಗ ರೋಹಿತ್ ಶೆಟ್ಟಿ ಅವರು ‘ಸಿಂಗಂ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯ ಶೂಟ್ ಮಾಡೋ ಸಂದರ್ಭ ಹೇಗಿತ್ತು ಎಂಬುದನ್ನು ಅವರು ಫೋಟೋ ಮೂಲಕ ತೋರಿಸಿದ್ದಾರೆ.

ರೋಹಿತ್ ಶೆಟ್ಟಿ ಅವರ ‘ಸಿಂಗಂ’ ಹಾಗೂ ‘ಸಿಂಗಂ’ ರಿಟರ್ನ್ ಸಿನಿಮಾಗಳು ಗಮನ ಸೆಳೆದಿವೆ. ಈಗ ಈ ಸರಣಿಯಲ್ಲಿ ಮೂರನೇ ಸಿನಿಮಾ ರಿಲೀಸ್ ಆಗುತ್ತಿದೆ. ರೋಹಿತ್ ಶೆಟ್ಟಿ ಅವರು ಕಾಪ್ ಯೂನಿವರ್ಸ್ ಮಾಡಿದ್ದು, ಇದರಡಿಯಲ್ಲಿ ‘ಸಿಂಗಂ’, ‘ಸಿಂಗಂ ರಿಟರ್ನ್ಸ್’, ‘ಸಿಂಬ’, ‘ಸೂರ್ಯವಂಶಿ’ ಚಿತ್ರಗಳಿವೆ. ಈಗ ಇದಕ್ಕೆ ‘ಸಿಂಗಂ 3’ ಕೂಡ ಸೇರ್ಪಡೆ ಆಗುತ್ತಿದೆ.

‘ಸಿಂಗಂ 3’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅಜಯ್ ದೇವಗನ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಮೊದಲಾದವರು ನಟಿಸಿದ್ದಾರೆ. ಇನ್ನೂ ಕೆಲ ಪ್ರಮುಖರು ಅತಿಥಿ ಪಾತ್ರ ಮಾಡಲಿದ್ದಾರಂತೆ. ಈ ಚಿತ್ರದ ಸೆಟ್​ನಲ್ಲಿ ಬಾಂಬ್ ಇಟ್ಟು ಬಸ್ಸು ಹಾಗೂ ಕಾರುಗಳನ್ನು ಸಿಡಿಸುತ್ತಿರುವ ದೃಶ್ಯ ಇದೆ.  ‘ಕೆಲಸ ಪ್ರಗತಿಯಲ್ಲಿದೆ’ ಎಂದು ರೋಹಿತ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rohit Shetty: ಸೆಟ್​​ನಲ್ಲಿ ನಡೆಯಿತು ಅವಘಡ; ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿಗೆ ಗಾಯ

2021ರಲ್ಲಿ ರಿಲೀಸ್ ಆದ ‘ಸೂರ್ಯವಂಶಿ’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಹೀಗಾಗಿ, ‘ಸಿಂಗಂ 3’ ಕೂಡ ಭರ್ಜರಿ ನಿರೀಕ್ಷೆ ಮೂಡಿಸಿದೆ. ಇನ್ನು, ‘ಇಂಡಿಯನ್ ಪೊಲೀಸ್ ಫೋರ್ಸ್’ ಹೆಸರಿನ ವೆಬ್ ಸೀರಿಸ್ ಕೂಡ ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್. ಇದರ ಕೆಲಸ ಪ್ರಗತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Fri, 27 October 23

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ