Rohit Shetty: ಸೆಟ್ನಲ್ಲಿ ನಡೆಯಿತು ಅವಘಡ; ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿಗೆ ಗಾಯ
ಈ ಸೋಲಿನಿಂದ ರೋಹಿತ್ ಶೆಟ್ಟಿಗೆ ಬೇಸರವಾಗಿದೆ ನಿಜ. ಆದರೆ, ಅವರು ಸುಮ್ಮನೆ ಕೂತಿಲ್ಲ. ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸೀರಿಸ್ನ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು.
ಶೂಟಿಂಗ್ ಮಾಡುವಾಗ ಸೆಟ್ನಲ್ಲಿ ಎಷ್ಟೇ ಮುಂಜಾಗೃತೆ ತೆಗೆದುಕೊಂಡರೂ ಅದು ಕಡಿಮೆಯೇ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು ಅವಘಡಗಳು ಸಂಭವಿಸುತ್ತವೆ. ಈಗ ನಿರ್ದೇಶಕ ರೋಹಿತ್ ಶೆಟ್ಟಿಗೂ (Rohit Shetty) ಹಾಗೆಯೇ ಆಗಿದೆ. ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸೀರಿಸ್ ನಿರ್ದೇಶನ ಮಾಡುತ್ತಿರುವ ಅವರಿಗೆ ಈಗ ಸೆಟ್ನಲ್ಲಿ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕ್ಕದಾಗಿ ಸರ್ಜರಿ ಮಾಡಲಾಗಿದೆ. ಈಗ ಅವರು ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ.
ರೋಹಿತ್ ಶೆಟ್ಟಿ ಅವರು ಕಳೆದ ವರ್ಷಾಂತ್ಯಕ್ಕೆ ಸೋಲುಂಡಿದ್ದಾರೆ. ‘ಸರ್ಕಸ್’ ಸಿನಿಮಾ ಸೋತಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರಕ್ಕೆ ಎಲ್ಲರಿಂದ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ರಣವೀರ್ ಸಿಂಗ್ ಅವರು ಈ ಚಿತ್ರದಲ್ಲಿ ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಪ್ರಯೋಗ ವರ್ಕೌಟ್ ಆಗಿಲ್ಲ. ಈ ಸೋಲಿನಿಂದ ರೋಹಿತ್ ಶೆಟ್ಟಿಗೆ ಬೇಸರವಾಗಿದೆ ನಿಜ. ಆದರೆ, ಅವರು ಸುಮ್ಮನೆ ಕೂತಿಲ್ಲ. ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸೀರಿಸ್ನ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು.
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಇಂಡಿಯನ್ ಪೊಲೀಸ್ ಫೋರ್ಸ್’ ಸೀರಿಸ್ನ ಶೂಟಿಂಗ್ ನಡೆಯುತ್ತಿತ್ತು. ಸಿದ್ದಾರ್ಥ್ ಮಲ್ಹೋತ್ರಾ, ಶಿಲ್ಪಾ ಶೆಟ್ಟಿ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ. ಕಾರ್ ಚೇಸ್ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ರೋಹಿತ್ ಶೆಟ್ಟಿಗೆ ಗಾಯಗಳಾಗಿವೆ.
ರೋಹಿತ್ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರಿಗೆ ಸಣ್ಣದಾದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಅವರು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ ಎಂದು ವರದಿ ಆಗಿದೆ. ಸದ್ಯ ಹೈದರಾಬಾದ್ನಲ್ಲಿ ಸೆರೆಹಿಡಿಯುತ್ತಿರುವ ದೃಶ್ಯಕ್ಕೆ ದೊಡ್ಡದೊಡ್ಡ ಸೆಟ್ ಹಾಕಲಾಗಿದೆ. ಇದಕ್ಕಾಗಿ 20 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಇದನ್ನೂ ಓದಿ: ‘ಸಿಂಗಂ ಅಗೇನ್’ ಚಿತ್ರಕ್ಕೆ ಮತ್ತೆ ಒಂದಾಗಲಿದ್ದಾರೆ ನಟ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ
ಇದು ರೋಹಿತ್ ಶೆಟ್ಟಿ ಅವರ ಮೊದಲ ವೆಬ್ ಸೀರಿಸ್. ಸಿದ್ದಾರ್ಥ್ ಮಲ್ಹೋತ್ರಾ ಜತೆಗೆ ವಿವೇಕ್ ಒಬೇರಾಯ್ ಕೂಡ ಇದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ಪ್ರಸಾರ ಕಾಣಲಿದೆ. ರೋಹಿತ್ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಈಗ ವೆಬ್ ಸೀರಿಸ್ ಟ್ರೆಂಡ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 am, Mon, 9 January 23