AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಂಗಂ ಅಗೇನ್’ ಚಿತ್ರಕ್ಕೆ ಮತ್ತೆ ಒಂದಾಗಲಿದ್ದಾರೆ ನಟ ಅಜಯ್​ ದೇವಗನ್ ಮತ್ತು ರೋಹಿತ್ ಶೆಟ್ಟಿ 

ನಟ ಅಜಯ್ ದೇವಗನ್ ತಮ್ಮ 'ಸಿಂಗಂ' ಸಿನಿಮಾ ಸರಣಿಯ ಮೂರನೇ ಭಾಗವಾದ 'ಸಿಂಗಂ ಅಗೇನ್' ಚಿತ್ರಕ್ಕಾಗಿ ನಿರ್ದೇಶಕ ರೋಹಿತ್​ ಶೆಟ್ಟಿ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ.

'ಸಿಂಗಂ ಅಗೇನ್' ಚಿತ್ರಕ್ಕೆ ಮತ್ತೆ ಒಂದಾಗಲಿದ್ದಾರೆ ನಟ ಅಜಯ್​ ದೇವಗನ್ ಮತ್ತು ರೋಹಿತ್ ಶೆಟ್ಟಿ 
ನಟ ಅಜಯ್​ ದೇವಗನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Dec 02, 2022 | 6:37 AM

Share

ನಟ ಅಜಯ್​ ದೇವಗನ್​ (Ajay Devgn) ಸದ್ಯ ‘ದೃಶ್ಯಂ 2’ ಚಿತ್ರದ ಸಕ್ಸಸ್​​ನಲ್ಲಿದ್ದಾರೆ. ಅಜಯ್​ ದೇವಗನ್ ಫ್ಯಾನ್ಸ್​​ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಅವರ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿ ಹೊರಬಿದ್ದಿದೆ. ನಟ ಅಜಯ್ ದೇವಗನ್ ತಮ್ಮ ‘ಸಿಂಗಂ’ ಸಿನಿಮಾ ಸರಣಿಯ ಮೂರನೇ ಭಾಗವಾದ ‘ಸಿಂಗಂ ಅಗೇನ್’ (Singham Again) ಚಿತ್ರಕ್ಕಾಗಿ ನಿರ್ದೇಶಕ ರೋಹಿತ್​ ಶೆಟ್ಟಿ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಈ ಹೊಸ ಬೆಳವಣಿಗೆಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರು ಖಚಿತಪಡಿಸಿದ್ದಾರೆ. ಅಜಯ್ ದೇವಗನ್ ಅವರು ತಮ್ಮ ಮುಂದಿನ ಚಿತ್ರವಾದ ‘ಭೋಲಾ’ ಪೂರ್ಣಗೊಂಡ ನಂತರ ಮತ್ತೆ ಪೊಲೀಸ್​ ಸಮವಸ್ತ್ರ ಧರಿಸಲಿಸದ್ದಾರೆ ಎಂದು ವರದಿಯಾಗಿದೆ.

ರೋಹಿತ್ ಶೆಟ್ಟಿ ಅವರು ಅಜಯ್ ದೇವಗನ್ ಅವರ ಈ ಹಿಂದಿನ ‘ಸಿಂಗಂ’​​, ‘ಸಿಂಗಂ ರಿಟರ್ನ್ಸ್‌’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ ಮತ್ತು ಅಜಯ್ ದೇವಗನ್ ಅವರು ಜೊತೆಗೆ ಕೆಲಸ ಮಾಡಿದ್ದರು. 2010 ರಲ್ಲಿ ಹರಿಗೋಪಾಲಕೃಷ್ಣನ್ ನಿರ್ದೇಶಿಸಿದ ಅದೇ ಹೆಸರಿನ ತಮಿಳು ಚಿತ್ರದ ರೀಮೇಕ್ ಆಗಿದೆ. ಈಗ ಈ ಚಿತ್ರ  11 ವರ್ಷ ಪೂರೈಸಿದೆ.

ಇದನ್ನೂ ಓದಿ: Drishyam 2 Collection: ಸೋತಿದ್ದ ಬಾಲಿವುಡ್​ಗೆ ‘ದೃಶ್ಯಂ 2’ ಚಿತ್ರದಿಂದ ಹೊಸ ಚೈತನ್ಯ; ಮೂರೇ ದಿನಕ್ಕೆ 64 ಕೋಟಿ ರೂ. ಕಮಾಯಿ

‘ಸಿಂಗಂ ಅಗೇನ್’ ಚಿತ್ರದ ಕುರಿತು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ. ‘ಅಜಯ್​ ದೇವಗನ್​ ಮತ್ತು ರೋಹಿತ್​​ ಶೆಟ್ಟಿ ಸಿಂಗಂ ಅಗೇನ್ ಚಿತ್ರಕ್ಕೆ ಮತ್ತೆ ಒಂದಾಗುತ್ತಿದ್ದಾರೆ. ಇಲ್ಲಿಯವರೆಗೂ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಇವರು ಕೂಡ. ಅಜಯ್ ದೇವಗನ್ ಅವರ ಮುಂದಿನ ಚಿತ್ರ ಭೋಲಾದ ನಂತರ ಈ ಜೋಡಿ ಒಂದಾಗಲಿದೆ’ ಎಂದು ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ವಿಚಾರ ತಿಳಿಯುತ್ತಿದ್ದಂತೆ ಅಜಯ್ ದೇವಗನ್ ಫ್ಯಾನ್ಸ್​ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: Ajay Devgn: 175 ಕೋಟಿ ರೂ. ಗಡಿಯತ್ತ ‘ದೃಶ್ಯಂ 2’ ಸಿನಿಮಾ; ವರ್ಷಾಂತ್ಯಕ್ಕೆ ಅಜಯ್​ ದೇವಗನ್​ ಹ್ಯಾಪಿ

ಅಜಯ್ ಇತ್ತೀಚೆಗಷ್ಟೇ ‘ಭೋಲಾ’ ಚಿತ್ರದ ಮೊದಲ ಟೀಸರ್​ನ್ನು ಬಿಡುಗಡೆ ಮಾಡಿದ್ದರು. ಇದು ಅಜಯ್ ದೇವಗನ್​ ಅವರು ನಟಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ‘ಭೋಲಾ’ ಚಿತ್ರವು 2019ರಲ್ಲಿ ತೆರೆಕಂಡ ತಮಿಳು ಸೂಪರ್‌ಹಿಟ್ ‘ಕೈದಿ’ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ಟಬು ಕಾಣಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:03 pm, Thu, 1 December 22

ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್