‘ಸಲಾಮ್ ವೆಂಕಿ’ ಸಿನಿಮಾವನ್ನು ಮೂರು ಬಾರಿ ನಿರಾಕರಿಸಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಕಾಜೋಲ್
ನಟಿ ಕಾಜೋಲ್ ಈ ಚಿತ್ರದ ಕಥೆಯನ್ನು ಮೊದಲ ಬಾರಿಗೆ ಕೇಳಿದಾಗ ತಿರಸ್ಕರಿಸಿದ್ದರಂತೆ. ಯಾಕೆ ತಿರಸ್ಕರಿಸಿದ್ದರು ಎಂಬ ವಿಷಯವನ್ನು ಸದ್ಯ ಕಾಜೋಲ್ ರಿವೀಲ್ ಮಾಡಿದ್ದಾರೆ.

ನಟಿ ಕಾಜೋಲ್ (kajol) 2015ರಲ್ಲಿ ಶಾರುಖ್ ಖಾನ್ ನಟನೆಯ, ರೋಹಿತ್ ಶೆಟ್ಟಿ ನಿರ್ದೇಶನದ ‘ದಿಲ್ವಾಲೆ’ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಬಳಿಕ ಅವರು ಬಾಲಿವುಡ್ನಿಂದ ಸ್ವಲ್ಪ ವರ್ಷಗಳ ಕಾಲ ದೂರ ಉಳಿದಿದ್ದರು. ಸದ್ಯ ನಟಿ ಕಾಜೋಲ್ ಮತ್ತೆ ನಟನೆಗೆ ಮರಳಿದ್ದಾರೆ. ನಟ ಶಾರುಖ್ ಖಾನ್ ತರಹ ಕಾಜೋಲ್ ಅವರು ಕೂಡ ತಮ್ಮ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಅವರು ಇಷ್ಟು ದಿನ ಸಿನಿಮಾ ಮಾಡದಿರುವುದಕ್ಕೆ ಇದು ಒಂದು ಕಾರಣವೆನ್ನಲಾಗುತ್ತಿದೆ. ಸದ್ಯ ಕಾಜೋಲ್ ಅವರು ಶಿರ್ಕಾಂತ್ ಮೂರ್ತಿಯವರ ಪುಸ್ತಕ ‘ದಿ ಲಾಸ್ಟ್ ಹುರ್ರಾ’ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಚಿತ್ರಕ್ಕೆ ‘ಸಲಾಮ್ ವೆಂಕಿ’ (Salaam Venky) ಎಂದು ಹೆಸರಿಡಲಾಗಿದ್ದು, ರೇವತಿ ನಿರ್ದೇಶನ ಮಾಡಿದ್ದಾರೆ. ನಟಿ ಕಾಜೋಲ್ ಈ ಚಿತ್ರದ ಕಥೆಯನ್ನು ಮೊದಲ ಬಾರಿಗೆ ಕೇಳಿದಾಗ ತಿರಸ್ಕರಿಸಿದ್ದರಂತೆ. ಯಾಕೆ ತಿರಸ್ಕರಿಸಿದ್ದರು ಎಂಬ ವಿಷಯವನ್ನು ಸದ್ಯ ಕಾಜೋಲ್ ರಿವೀಲ್ ಮಾಡಿದ್ದಾರೆ.
‘ಸಲಾಮ್ ವೆಂಕಿ’ ಸಿನಿಮಾದಲ್ಲಿ ಅಮ್ಮ ಮಗನ ಬಾಂಧವ್ಯದ ಕಥೆಯನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಸುಜಾತಾ ಎಂಬ ಪಾತ್ರದಲ್ಲಿ ಕಾಜೋಲ್ ಅವರು ಕಾಣಿಸಿಕೊಂಡಿದ್ದು, ಅನಾರೋಗ್ಯಕ್ಕೆ ಒಳಗಾದ ಮಗ ವೆಂಕಿ ಪಾತ್ರದಲ್ಲಿ ವಿಶಾಲ್ ಜೇತ್ವಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಹನಾ ಕುಮ್ರಾ, ರಾಹುಲ್ ಬೋಸ್, ಪ್ರಕಾಶ್ ರಾಜ್, ಅನಂತ್ ಮಹದೇವನ್, ಪ್ರಿಯಾಮಣಿ ಕೂಡ ಚಿತ್ರದಲ್ಲಿದ್ದಾರೆ.
ಇದನ್ನು ಓದಿ: Tamannaah Bhatia: ಸೂರ್ಯನ ಕಿರಣಗಳಿಗೆ ಮೈ ಒಡ್ಡಿ, ಹಾಟ್ ಆಗಿ ಪೋಸ್ ನೀಡಿದ ನಟಿ ತಮನ್ನಾ
ನಟಿ ಕಾಜೋಲ್ ಈ ಚಿತ್ರವನ್ನು ಮೊದಲು ತಿರಸ್ಕರಿಸಿ ನಂತರ ಒಪ್ಪಿಗೆ ಸೂಚಿಸಿದರ ಕುರಿತಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಾಯಿ ಮತ್ತು ಅನಾರೋಗ್ಯಕ್ಕೆ ಒಳಗಾದ ಆಕೆಯ ಮಗನ ನುಡುವಿನ ಬಾಂಧವ್ಯದ ಕುರಿತಾಗಿ ನಿರ್ದೇಶಕಿ ರೇವತಿ ಕಾಜೋಲ್ ಅವರ ಬಳಿ ಕಥೆ ತೆಗೆದುಕೊಂಡು ಹೋದಾಗ ಅವರು ಕಡ್ಡಿ ತುಂಡು ಮಾಡಿದ ಹಾಗೆ ನಿರಾಕರಿಸಿದ್ದರಂತೆ.
‘ನಾನು ಮೂರು ದಿನಗಳವರೆಗೆ ಚಿತ್ರವನ್ನು ನಿರಾಕರಿಸಿದೆ. ಈ ಚಿತ್ರವನ್ನು ನಾನು ಮಾಡುವುದಿಲ್ಲ. ನನ್ನ ಮಕ್ಕಳಿಗೆ ಏನಾದರೂ ಆಗುತ್ತದೆ ಎನ್ನುವ ಹಾಗೆ ಚಿತ್ರ ಮಾಡಲು ನಾನು ಬಯಸುವುದಿಲ್ಲ. ನಾನು ಅದನ್ನು ನಿಭಾಯಿಸಲಾರೆ. ಇದು ಪ್ರತಿಯೊಬ್ಬ ಪೋಷಕರಿಗೆ ಕೆಟ್ಟ ಸ್ವಪ್ನವಾಗಿದೆ. ನಿಮ್ಮ ಶತ್ರುಗಳ ಮಕ್ಕಳಿಗೂ ಹೀಗೆ ಆಗಲಿ ಎಂದು ನೀವು ಬಯಸುವುದಿಲ್ಲ. ಇದು ಅಂತಹ ಪರಿಸ್ಥಿತಿಯಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಆದರ್ಶ ದಂಪತಿ ಎಂದು ಬಣ್ಣಿಸಿದ ಸಂತೋಷ್ ಆನಂದ್ರಾಮ್
ನಿರ್ದೇಶಕಿ ರೇವತಿ ಅವರು ಕಥೆಯ ಬಗ್ಗೆ ಕುಳಿತು ಯೋಚಿಸುವಂತೆ ಕೇಳಿಕೊಂಡರು. ನಂತರ ಅಂತಿಮವಾಗಿ ಮರುಪರಿಶೀಲಿಸಿದರು. ‘ನಾನು 10 ನಿಮಿಷ ಸಮಯ ತೆಗೆದುಕೊಂಡು ಯೋಚಿಸಿದೆ. ಬಳಿಕ ರೇವತಿ ಅವರ ಅಭಿಮಾನಿಯಾದೆ. ಅದು ಯಾಕೆ ಎಂದು ನೀವು ಸಿನಿಮಾ ನೋಡಿದಾಗ ನಿಮಗೆ ಗೊತ್ತಾಗುತ್ತದೆ’ ಎಂದು ಕಾಜೋಲ್ ಹೇಳಿದರು. ‘ಸಲಾಮ್ ವೆಂಕಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆಯನ್ನು ಸಹ ಪಡೆದುಕೊಂಡಿತ್ತು. ಚಿತ್ರದಲ್ಲಿ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಲಾಮ್ ವೆಂಕಿ’ ಡಿಸೆಂಬರ್ 9 ರಂದು ತೆರೆಗೆ ಬರುತ್ತಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




