Puneeth Rajkumar: ಪುನೀತ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಆದರ್ಶ ದಂಪತಿ ಎಂದು ಬಣ್ಣಿಸಿದ ಸಂತೋಷ್ ಆನಂದ್ರಾಮ್
Puneeth Rajkumar Wedding Anniversary: ಪುನೀತ್ ರಾಜ್ಕುಮಾರ್ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ. ಅವರ ನಗುಮೊಗವನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದರು. ಪತ್ನಿ ಮತ್ತು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಅವರು ಬಯಸುತ್ತಿದ್ದರು. ಕುಟುಂಬದ ಜೊತೆ ಆಗಾಗ ಪ್ರವಾಸಕ್ಕೆ ತೆರಳುತ್ತಿದ್ದರು. ಇಂದು (ಡಿಸೆಂಬರ್ 1) ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ (Ashwini Puneeth Rajkumar) ದಂಪತಿಯ ವಿವಾಹ ವಾರ್ಷಿಕೋತ್ಸವ. ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇದ್ದಿದ್ದರೆ ಈ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅವರಿಲ್ಲ ಎಂಬ ಕೊರಗಿನಲ್ಲಿ ಯಾವ ವಿಶೇಷ ದಿನವೂ ಮೊದಲಿನಂತೆ ಆಪ್ತವಾಗುತ್ತಿಲ್ಲ. ಅಪ್ಪು ಬಿಟ್ಟುಹೋದ ಎಲ್ಲ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮುಂದುವರಿಸುತ್ತಿದ್ದಾರೆ. ಈ ದಂಪತಿಯ ವೆಡ್ಡಿಂಗ್ ಆ್ಯನಿವರ್ಸರಿ (Wedding Anniversary) ಪ್ರಯುಕ್ತ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಅವರ ಅಪರೂಪದ ಫೋಟೋವನ್ನು ಸಂತೋಷ್ ಆನಂದ್ ರಾಮ್ ಶೇರ್ ಮಾಡಿಕೊಂಡಿದ್ದಾರೆ. ದೊಡ್ಮನೆಯ ದಂಪತಿ ಕುರಿತು ಅವರು ವಿಶೇಷ ಸಾಲುಗಳನ್ನು ಬರೆದಿದ್ದಾರೆ. ಈ ಜೋಡಿಯನ್ನು ಆದರ್ಶ ದಂಪತಿ ಎಂದು ಅವರು ಬಣ್ಣಿಸಿದ್ದಾರೆ.
‘ದಾಂಪತ್ಯವೆಂದರೆ ಜೊತೆಯಾಗೋದು, ಜೊತೆಯಲ್ಲಿ ಇರೋದು ಹಾಗೂ ಸಂಗಾತಿಯ ಕನಸುಗಳನ್ನ ನನಸಾಗಿಸೋದು, ಆ ದಾರಿಯಲ್ಲಿ ಹೆಜ್ಜೆ ಹಾಕೋದು. ಈ ನಿಟ್ಟಿನಲ್ಲಿ ನೀವು ಆದರ್ಶ ಮಹಿಳೆ ಹಾಗೂ ಅಪ್ಪು ಅಣ್ಣ ಆದರ್ಶ ವ್ಯಕ್ತಿ (ವಿಶ್ವ ಮಾನವ). ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಅವರನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿದ್ದೀರಿ. ಈ ನನ್ನ ಶುಭಾಶಯ ನಿರಂತರ’ ಎಂದು ಸಂತೋಷ್ ಆನಂದ್ರಾಮ್ ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. 1991ರ ಡಿಸೆಂಬರ್ 1ರಂದು ಈ ಜೋಡಿಯ ವಿವಾಹ ನೆರವೇರಿತ್ತು. ಇಂದು ಅಪ್ಪು ಇಲ್ಲ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಸಿನಿಮಾಗಳ ಮೂಲಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಎಲ್ಲರ ಹೃದಯದಲ್ಲೂ ನೆಲೆಸಿದ್ದಾರೆ.
ದಾಂಪತ್ಯವೆಂದರೆ ಜೊತೆಯಾಗೋದು,ಜೊತೆಯಲ್ಲಿರೋದು ಹಾಗು ಸಂಗಾತಿಯ ಕನಸುಗಳನ್ನ ನನಸಾಗಿಸೋದು,ಆ ದಾರಿಯಲ್ಲಿ ಹೆಜ್ಜೆ ಹಾಕೋದು,ಈ ನಿಟ್ಟಿನಲ್ಲಿ ನೀವು ಆದರ್ಶ ಮಹಿಳೆ ಹಾಗೂ ಅಪ್ಪು ಅಣ್ಣ ಆದರ್ಶ ವ್ಯಕ್ತಿ (ವಿಶ್ವ ಮಾನವ) ನಿಮಗೆ ವಿವಾಹವಾರ್ಷಿಕೋತ್ಸವದ ಶುಭಾಶಯಗಳು❤️ಅವರನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿದ್ದೀರ?ಈ ನನ್ನ ಶುಭಾಶಯ ನಿರಂತರ pic.twitter.com/BrbKw5R1EP
— Santhosh Ananddram (@SanthoshAnand15) December 1, 2022
ಪುನೀತ್ ರಾಜ್ಕುಮಾರ್ ಜೊತೆ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಆಪ್ತ ಒಡನಾಟ ಹೊಂದಿದ್ದರು. ‘ರಾಜಕುಮಾರ’, ‘ಯುವರತ್ನ’ ಸಿನಿಮಾಗಳಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಸಂತೋಷ್ ಆನಂದ್ರಾಮ್ ಹಂಚಿಕೊಂಡ ಪೋಸ್ಟ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ. ಅವರ ನಗುಮೊಗವನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Thu, 1 December 22