Haripriya Vasishta Simha Engagement: ಹರಿಪ್ರಿಯಾ-ವಸಿಷ್ಠ ಸಿಂಹ ನಿಶ್ಚಿತಾರ್ಥ; ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯಿತು ಶುಭಕಾರ್ಯ
Vasishta Simha | Haripriya: ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್ ಆಗಿ ಈ ಶುಭಕಾರ್ಯ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಲಾಗಿದೆ.
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಈ ಜೋಡಿಯ ಬಗ್ಗೆ ಗುಸುಗುಸು ಹಬ್ಬಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ಒಂದೆರಡು ಫೋಟೋಗಳು ಕೂಡ ವೈರಲ್ ಆಗಿದ್ದವು. ಈಗ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಎಂಗೇಜ್ಮೆಂಟ್ (Vasishta Simha Haripriya Engagement) ಮಾಡಿಕೊಂಡಿದ್ದಾರೆ. ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್ ಆಗಿ ಈ ಶುಭಕಾರ್ಯ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಹರಿಪ್ರಿಯಾ-ವಸಿಷ್ಠ ಸಿಂಹ ಸಪ್ತಪದಿ ತುಳಿಯಲಿದ್ದಾರೆ.
ಹಲವು ವರ್ಷಗಳಿಂದ ನಟಿ ಹರಿಪ್ರಿಯಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಮೂಗು ಚುಚ್ಚಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೂಗು ಚುಚ್ಚಲಾಯಿತು. ಆ ವಿಡಿಯೋ ನೋಡಿದ ಬಳಿಕ ಅನೇಕ ಅಭಿಮಾನಿಗಳಿಗೆ ಮದುವೆ ಬಗ್ಗೆ ಗುಮಾನಿ ಮೂಡಿತು. ‘ಇದು ಮದುವೆಯ ತಯಾರಿ’ ಎಂದು ಹಲವರು ಕಮೆಂಟ್ ಮಾಡಿದ್ದರು. ಅದರ ಬೆನ್ನಲ್ಲೇ ಇನ್ನಷ್ಟು ಗುಸುಗುಸು ಕೇಳಿಬರಲು ಆರಂಭಿಸಿತು.
ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತು ಎಂಬ ಮಾತು ಗಾಂಧಿನಗರದಲ್ಲಿ ಹಬ್ಬಿದೆ. ಎಂಗೇಜ್ಮೆಂಟ್ ಸಲುವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚಿಗೆ ಶಾಪಿಂಗ್ ಮಾಡಿದ್ದರು ಎಂಬ ಮಾಹಿತಿ ಕೇಳಿಬಂದಿತ್ತು. ಈಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಜೋಡಿಗೆ ಅಭಿನಂದನೆ ತಿಳಿಸಲು ಆರಂಭಿಸಿದ್ದಾರೆ.
2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹರಿಪ್ರಿಯಾ ಅವರು ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಹಲವು ಚಿತ್ರಗಳು ಅವರ ಕೈಯಲ್ಲಿವೆ. ವಸಿಷ್ಠ ಸಿಂಹ ಕೂಡ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ವಿಲನ್ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Fri, 2 December 22