Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕ್ಕೆ ಎಂಟ್ರಿ ಕೊಡೋ ಸಮಯದಲ್ಲಿ ನಟಿಯ ಮುಖಕ್ಕೆಲ್ಲ ಚುಚ್ಚಿದೆ ಸೂಜಿ; ನೋವು ನೆನೆದು ಬೇಸರಗೊಂಡ ಫ್ಯಾನ್ಸ್

ಅಕ್ಯು ಸ್ಕಿನ್ ಲಿಫ್ಟ್​ ಹೆಸರಿನ ಟ್ರೀಟ್​ಮೆಂಟ್ ಮಾಡಿಸಿಕೊಂಡಿದ್ದಾರೆ ಮೆಹ್ರೀನ್. ಇದಕ್ಕಾಗಿ ಅವರು ವಿದೇಶದಲ್ಲಿ ಖ್ಯಾತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದಾರೆ.

ಕನ್ನಡಕ್ಕೆ ಎಂಟ್ರಿ ಕೊಡೋ ಸಮಯದಲ್ಲಿ ನಟಿಯ ಮುಖಕ್ಕೆಲ್ಲ ಚುಚ್ಚಿದೆ ಸೂಜಿ; ನೋವು ನೆನೆದು ಬೇಸರಗೊಂಡ ಫ್ಯಾನ್ಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 02, 2022 | 7:23 AM

ನಟ-ನಟಿಯರು ಸೌಂದರ್ಯವೃದ್ಧಿಗೆ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಂದು ಯಶಸ್ಸು ಕೊಟ್ಟರೆ ಇನ್ನೂ ಕೆಲವರು ಅಡ್ಡಪರಿಣಾಮ ಬೀರುತ್ತದೆ. ಇದರಿಂದ ಇರುವ ಸೌಂದರ್ಯವೂ ಹಾಳಾಗುತ್ತದೆ. ಈಗ ಮೆಹ್ರೀನ್​ ಫಿರ್ಜಾದ (Mehreen Pirzada) ಅವರು ಒಂದು ರಿಸ್ಕಿ ಥೆರಪಿ ಮಾಡಿಸಿದ್ದಾರೆ. ಮುಖದ ತುಂಬೆಲ್ಲ ಅವರು ಗುಂಡುಸೂಜಿ ಚುಚ್ಚಿಸಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ! ಅವರಿಗೆ ಎಷ್ಟು ನೋವಾಗಿರಬಹುದು ಎಂಬುದನ್ನು ನೆನೆದು ಅಭಿಮಾನಿಗಳು (Fans) ಬೇಸರ ಮಾಡಿಕೊಂಡಿದ್ದಾರೆ.

ಅಕ್ಯು ಸ್ಕಿನ್ ಲಿಫ್ಟ್​ ಹೆಸರಿನ ಟ್ರೀಟ್​ಮೆಂಟ್ ಮಾಡಿಸಿಕೊಂಡಿದ್ದಾರೆ ಮೆಹ್ರೀನ್. ಇದಕ್ಕಾಗಿ ಅವರು ವಿದೇಶದಲ್ಲಿ ಖ್ಯಾತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದಾರೆ. ಅಕ್ಯು ಸ್ಕಿನ್ ಲಿಫ್ಟ್​ ಥೆರಪಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹ್ರೀನ್ ಹಂಚಿಕೊಂಡಿದ್ದಾರೆ​. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಕೆನ್ನೆ, ಹಣೆ ಭಾಗಕ್ಕೆಲ್ಲ ಸೂಜಿಗಳನ್ನು ಚುಚ್ಚಲಾಗಿದೆ. ಇದನ್ನು ನೋಡಿ ಫ್ಯಾನ್ಸ್​ಗೆ ನೋವಾಗಿದೆ.

‘ಅಷ್ಟೊಂದು ಸೂಜಿ ಚುಚ್ಚಿಸಿಕೊಂಡಿದ್ದೀರಿ. ನಿಮಗೆ ನೋವಾಗುವುದಿಲ್ಲವೇ? ಇಂತಹ ರಿಸ್ಕ್​ ಏಕೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಒಂದನ್ನು ಮಾಡಲು ಹೋಗಿ ಮತ್ತೊಂದು ಆದೀತು’ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯಲ್ಲಿ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ‘ನೀ ಸಿಗೋವರೆಗೂ’ ಚಿತ್ರದ ಲವರ್ ಬಾಯ್ ಶಿವಣ್ಣ ಲುಕ್ ರಿಲೀಸ್; ಹ್ಯಾಟ್ರಿಕ್ ಹೀರೋಗೆ ವಯಸ್ಸೇ ಆಗೋಲ್ಲ ಎಂದ ಅಭಿಮಾನಿಗಳು

2016ರಲ್ಲಿ ತೆರೆಗೆ ಬಂದ ‘ಕೃಷ್ಣ ಗಾಡಿ ವೀರ ಪ್ರೇಮ ಗಾಥ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು ನಟಿ ಮೆಹ್ರೀನ್. ತೆಲುಗಿನ ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ಬಳಿಕ ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದರು. ಶಿವರಾಜ್​ಕುಮಾರ್ ನಟನೆಯ ‘ನೀ ಸಿಗೋವರೆಗೂ’ ಚಿತ್ರದಲ್ಲೂ ಮೆಹ್ರೀನ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾ. ಶಿವರಾಜ್​ಕುಮಾರ್ ಅವರ 124ನೇ ಸಿನಿಮಾ ಇದಾಗಿದೆ. ‘ಭಜರಂಗಿ 2′ ಚಿತ್ರದಲ್ಲಿ ‘ನೀ ಸಿಗೋವರೆಗೂ..’ ಹೆಸರಿನ ಹಾಡಿದೆ. ಈಗ ಅದನ್ನೇ ಈ ಸಿನಿಮಾಗೆ ಶೀರ್ಷಿಕೆ ಮಾಡಿರುವುದು ವಿಶೇಷ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ಗೆ ಜತೆಯಾಗಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತಕ್ಕೆ ಸುದೀಪ್ ಆಗಮಿಸಿ ಕ್ಲ್ಯಾಪ್ ಮಾಡಿದ್ದರು.

ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?