AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆದ್ದ ಚಿತ್ರಗಳ ಜತೆ ಸೆಣೆಸಲು ಬರುತ್ತಿವೆ ಹೊಸ ಚಿತ್ರಗಳು; ಈ ವಾರದ ರಿಲೀಸ್ ಬಗ್ಗೆ ಇಲ್ಲಿದೆ ಮಾಹಿತಿ

ಬಾಲಿವುಡ್ ಈ ವರ್ಷ ಕಹಿ ಉಂಡಿದ್ದೇ ಹೆಚ್ಚು. ಕೊನೆಯ ತಿಂಗಳಲ್ಲಿ ಅನೇಕ ಚಿತ್ರಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿವೆ. ಈ ವಾರ ಕನ್ನಡ ಹಾಗೂ ಪರಭಾಷೆಗಳಲ್ಲಿ ಅನೇಕ ಚಿತ್ರಗಳು ರಿಲೀಸ್ ಆಗುತ್ತಿವೆ.

ಗೆದ್ದ ಚಿತ್ರಗಳ ಜತೆ ಸೆಣೆಸಲು ಬರುತ್ತಿವೆ ಹೊಸ ಚಿತ್ರಗಳು; ಈ ವಾರದ ರಿಲೀಸ್ ಬಗ್ಗೆ ಇಲ್ಲಿದೆ ಮಾಹಿತಿ
ಈ ವಾರದ ರಿಲೀಸ್ ಆಗಲಿರುವ ಸಿನಿಮಾಗಳು
TV9 Web
| Edited By: |

Updated on:Dec 01, 2022 | 2:55 PM

Share

2022 ಪೂರ್ಣಗೊಳ್ಳುತ್ತಾ ಬಂದಿದೆ. ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್​ ಬಂದಿದೆ. 11 ತಿಂಗಳಲ್ಲಿ ಅನೇಕ ಕನ್ನಡದ ಚಿತ್ರಗಳು (Kannada Films) ಗೆದ್ದಿವೆ. ಬಾಲಿವುಡ್ (Bollywood)​ ಈ ವರ್ಷ ಕಹಿ ಉಂಡಿದ್ದೇ ಹೆಚ್ಚು. ಕೊನೆಯ ತಿಂಗಳಲ್ಲಿ ಅನೇಕ ಚಿತ್ರಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿವೆ. ಈ ವಾರ ಕನ್ನಡ ಹಾಗೂ ಪರಭಾಷೆಗಳಲ್ಲಿ ಅನೇಕ ಚಿತ್ರಗಳು ರಿಲೀಸ್ ಆಗುತ್ತಿವೆ. ಕಳೆದ ವಾರ ತೆರೆಗೆ ಬಂದ ಆಶಿಕಾ ರಂಗನಾಥ್ ಹಾಗೂ ಇಶಾನ್ ನಟನೆಯ ‘ರೇಮೊ’, ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’, ಈ ಮೊದಲು ರಿಲೀಸ್ ಆದ ಹಿಂದಿಯ ‘ದೃಶ್ಯ 2’ ಚಿತ್ರಗಳಿಗೆ ಮೆಚ್ಚುಗೆ ಬಂದಿವೆ. ಈ ಚಿತ್ರಗಳ ಜತೆ ಹೊಸ ಸಿನಿಮಾಗಳು ಸೆಣೆಸಬೇಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ತಿಮ್ಮಯ್ಯ & ತಿಮ್ಮಯ್ಯ

ಅನಂತ್ ನಾಗ್ ಹಾಗೂ ದಿಗಂತ್ ಒಟ್ಟಾಗಿ ನಟಿಸಿದ ಸಿನಿಮಾ ‘ತಿಮ್ಮಯ್ಯ & ತಿಮ್ಮಯ್ಯ’. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಶುಭ್ರಾ ಅಯ್ಯಪ್ಪ, ಐಂದ್ರಿತಾ ರೇ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಅನಂತ್ ನಾಗ್ ತಾತನ ಪಾತ್ರ ಮಾಡಿದರೆ, ದಿಗಂತ್ ಮೊಮ್ಮಗನಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಪಂಚರಂಗಿ, ‘ಗಾಳಿಪಟ’, ‘ಗಾಳಿಪಟ 2’ ಚಿತ್ರಗಳಲ್ಲಿ ಅನಂತ್ ನಾಗ್ ಹಾಗೂ ದಿಗಂತ್ ಒಟ್ಟಾಗಿ ನಟಿಸಿದ್ದರು.

ಧರಣಿ ಮಂಡಲ ಮಧ್ಯದೊಳಗೆ

‘ಗುಳ್ಟು’ ಚಿತ್ರದ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡವರು ನವೀನ್ ಶಂಕರ್. ಅವರ ನಟನೆಯ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಜಯಶ್ರೀ ಆರಾಧ್ಯ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಶಣ್ಮುಖ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ವಾಸಂತಿ ನಲಿದಾಗ

ವಂಶಿ ರವೀಂದ್ರ ನಿರ್ದೇಶನದ, ಭಾವನಾ ಶ್ರೀನಿವಾಸ್, ಜೀವಿತಾ ವಸಿಷ್ಠ, ಸಾಯಿ ಕುಮಾರ್, ಸುಧಾರಾಣಿ ಮೊದಲಾದವರ ನಟನೆಯ ‘ವಾಸಂತಿ ನಲಿದಾಗ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಯಾವ ರೀತಿಯಲ್ಲಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹಿಟ್ 2

ತೆಲುಗಿನಲ್ಲಿ ಅಡಿವಿ ಶೇಷ್ ನಟನೆಯ ‘ಹಿಟ್ 2’ ಚಿತ್ರ ತೆರೆಗೆ ಬರುತ್ತಿದೆ. ಶೈಲೇಶ್​ ಕೋಲನು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ‘ಎವರು’, ‘ಮೇಜರ್​’ ಅಂತಹ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

ಆ್ಯನ್ ಆ್ಯಕ್ಷನ್ ಹೀರೋ

ಭಿನ್ನ ಚಿತ್ರಗಳ ಮೂಲಕ ಬಾಲಿವುಡ್​​ನಲ್ಲಿ ಗಮನ ಸೆಳೆದvರು ಆಯುಷ್ಮಾನ್ ಖುರಾನಾ. ಅವರು ಈಗ ‘ಆ್ಯನ್ ಆ್ಯಕ್ಷನ್ ಹೀರೋ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಟ್ರೇಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ ಆಯುಷ್ಮಾನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:50 pm, Thu, 1 December 22

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ