ಪ್ರತಿಯೊಂದು ಹೆಣ್ಣಿಗೂ ತನ್ನ ಮದುವೆಯ ದಿನದಂದು ಸುಂದರವಾಗಿ ಕಾಣಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ಮದುವೆಯ ಒಂದು ತಿಂಗಳ ಹಿಂದೆಯೇ ಎಲ್ಲಾ ತಯಾರಿಗಳು ಪ್ರಾರಂಭವಾಗಿರುತ್ತದೆ. ನಿಮ್ಮ ಮೇಕಪ್ ಬುಕಿಂಗ್ ಮಾಡುವುದರಿಂದ ಹಿಡಿದು ವಧುವಿನ ಬಟ್ಟೆ ಬರೆ ಹೀಗೆ ಪ್ರತಿಯೊಂದು ತಯಾರಿಗಳು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ವಧುವಿನ ಬ್ಯೂಟಿ ಸೆಷನ್‌ಗಳು, ಅದರಲ್ಲೂ ವಿಶೇಷವಾಗಿ ಹೇರ್ ಟ್ರೀಟ್‌ಮೆಂಟ್‌ಗಳ ವಿಷಯಕ್ಕೆ ಬಂದಾಗ ನಿಮ್ಮ ಮನಸ್ಸಿನಲ್ಲಿ ಅಂತ್ಯವಿಲ್ಲದ ಸಂದೇಹಗಳು ಹುಟ್ಟಿಕೊಳ್ಳುತ್ತದೆ. ಯಾವುದನ್ನು ಆಯ್ಕೆ ಮಾಡಬೇಕು? ಯಾವುದು ಉತ್ತಮ ಹೀಗೆ ಸಾಕಷ್ಟು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕೂದಲಿನ ಸೌಂದರ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಕೆಲವೊಂದಿಷ್ಟು ಸೂಕ್ತ ಸಲಹೆಗಳು ಇಲ್ಲಿವೆ.
ನಿಮ್ಮ ಮದುವೆಯ ಪೂರ್ವ ತಯಾರಿಯಲ್ಲಿ ಆಯ್ಕೆಗಳು ಸಾಕಷ್ಟಿವೆ. ಆದರೆ ನಿಮ್ಮ ಕೂದಲು ಅತ್ಯಂತ ಸೂಕ್ಷ್ಮವಾಗಿರುವುದ್ದರಿಂದ, ಆದಷ್ಟು ಕೂದಲಿನ ಆರೋಗ್ಯ ಕೆಡದಂತೆ ಎಚ್ಚರವಹಿಸಿ. ನೀವು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಿರುವಾಗ, ನಿಮ್ಮ ಕೂದಲಿನ ಪ್ರಕಾರಕ್ಕೆ ಸರಿಹೊಂದುವ ಆಯ್ಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಕೂದಲಿನ ಕೆರಾಟಿನ್ ಚಿಕಿತ್ಸೆ , ಕೂದಲಿನ ಬಣ್ಣ ಹೀಗೆ ಸಾಕಷ್ಟು ಕೂದಲಿಗೆ ಸಂಬಂಧಪಟ್ಟ ಸಾಕಷ್ಟು ಚಿಕಿತ್ಸೆಗಳಿವೆ. ಆದ್ದರಿಂದ ಇಂತವುಗಳನ್ನು ಮದುವೆಯ ಒಂದು ತಿಂಗಳ ಮುಂಚೆಯೇ ಮಾಡುವುದು ಅತ್ಯಂತ ಸೂಕ್ತವಾಗಿದೆ.
1. ಕೆರಾಟಿನ್ ಚಿಕಿತ್ಸೆ:
ಕೆರಾಟಿನ್ ಚಿಕಿತ್ಸೆ ವೇಳೆ ಕೂದಲಿಗೆ ಕೃತಕವಾಗಿ ಕೆರಾಟಿನ್ ನೀಡಲಾಗುತ್ತದೆ. ಇದರಿಂದಾಗಿ ಕೂದಲು ತುಂಬಾ ನಯ, ಕಾಂತಿ ಹಾಗೂ ಹೊಳಪವನ್ನು ಪಡೆಯುವುದು. ನೀವು ಕೆರಾಟಿನ್ ಚಿಕಿತ್ಸೆಗಳಿಗೆ ಹೋಗಲು ಬಯಸಿದರೆ, ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು ನಿಮ್ಮ ಮದುವೆಗೆ ಕನಿಷ್ಠ 2 ತಿಂಗಳ ಮೊದಲು ಹೋಗಿ.
2. ಕೂದಲಿನ ಹೊಸ ಹೊಸ ಬಣ್ಣಗಳನ್ನು ತಪ್ಪಿಸಿ:
ನಿಮ್ಮ ಮದುವೆಗೆ ಮುಂಚೆಯೇ ಕೂದಲಿನ ಬಣ್ಣ, ವಿನ್ಯಾಸವನ್ನು ಬದಲಾಯಿಸಲು ಸಾಕಷ್ಟು ಪ್ರಾಯೋಗಗಳನ್ನು ಮಾಡಲು ಹೋಗದಿರಿ. ಹೊಸ ಹೊಸ ಬಣ್ಣಗಳ ಆಯ್ಕೆಗಳಲ್ಲಿ ನಿಮಗೆ ಸಾಕಷ್ಟು ಗೊಂದಲದ ಜೊತೆಗೆ ನಿಮ್ಮನ್ನು ಒತ್ತಡಕ್ಕೀಡು ಮಾಡುತ್ತದೆ.
3.ಕೂದಲಿನ ಹೊಸ ಹೊಸ ವಿನ್ಯಾಸಗಳ ಪ್ರಯೋಗ ಮಾಡದಿರಿ:
ಕೂದಲಿನ ಹೊಸ ಹೊಸ ವಿನ್ಯಾಸಗಳಿಗೆ ಸಾಕಷ್ಟು ಚಿಕಿತ್ಸೆಗಳನ್ನು ಕಾಣಬಹುದು. ಆದರೆ ಇದು ನಿಮ್ಮ ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಹೊಸ ಹೊಸ ವಿನ್ಯಾಸಗಳ ಅಗತ್ಯವಿದ್ದರೆ ಕ್ಲಿಪ್ ಇನ್‌ಗಳು ಉತ್ತಮವಾಗಿವೆ. ಇದು ಕ್ಲಿಪ್ ಸಹಾಯದ ಮೂಲಕ ಕೂದಲಿಗೆ ಇನ್ನಿತರ ವಿನ್ಯಾಸದ ಕೃತಕ ಕೂದಲುಗಳನ್ನು ಜೋಡಿಸುವುದಾಗಿದೆ. ಕ್ಲಿಪ್ ಇನ್‌ಗಳು ತುಂಬಾ ಸುಲಭ ಮತ್ತು ಯಾವುದೇ ತೊಂದರೆ ಇಲ್ಲ.
ಇದನ್ನು ಓದಿ: ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆಮಾಡಲು ಈ ಸರಳ ಮನೆ ಮದ್ದು ಪ್ರಯತ್ನಿಸಿ
4. ಮದುವೆಯ ದಿನವೇ ಕೂದಲನ್ನು ತೊಳೆಯಬೇಡಿ:
ಲಿಮದುವೆಯ ದಿನ ತುಂಬಾ ವಿಶೇಷವಾಗಿರುವುದ್ದರಿಂದ ನಿಮ್ಮ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಪರಿಪೂರ್ಣ ಕೇಶ ವಿನ್ಯಾಸಕ್ಕಾಗಿ, ಅದೇ ದಿನದಲ್ಲಿ ನಿಮ್ಮ ಕೂದಲನ್ನು ತೊಳೆಯದಿರಿ. ಆದ್ದರಿಂದ ನಿಮ್ಮ ಮದುವೆಯ ದಿನದಂದು ಕೂದಲಿನ ಸೌಂದರ್ಯಕ್ಕಾಗಿ ಹಾಗೂ ಕೂದಲಿನ ಆರೋಗ್ಯಕ್ಕಾಗಿ ಈ ಮೇಲಿನ ಸಲಹೆಗಳನ್ನು ಪಾಲಿಸಿ, ಉತ್ತಮ ಫಲಿತಾಂಶ ಕಂಡುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.