AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blouse Designs: ಪ್ರತಿ ವಧು ತನ್ನ ಕನಸಿನ ದಿನವನ್ನು ಇನ್ನಷ್ಟು ಮೆರುಗುಗೊಳಿಸಲು ಇಲ್ಲಿದೆ ದಕ್ಷಿಣ ಭಾರತದ ಮದುವೆಯ ಬ್ಲೌಸ್ ಡಿಸೈನ್ ಗಳು

ಪ್ರತಿಯೊಂದು ಹೆಣ್ಣಿಗೂ ಆಕೆಯ ಮದುವೆಯ ದಿನ ಜೀವನದ ವಿಶೇಷ ದಿನವಾಗಿದೆ. ಈ ವಿಶೇಷ ದಿನದಂದು ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕೆಂಬುದು ಆಕೆಯ ಕನಸಾಗಿರುತ್ತದೆ. ಆದ್ದರಿಂದ ನಿಮ್ಮ ಕನಸಿನ ದಿನವನ್ನು ಇನ್ನಷ್ಟು ಮೆರುಗುಗೊಳಿಸಲು ಇಲ್ಲಿದೆ ಕ್ರಿಯೇಟಿವ್ ಬ್ಲೌಸ್ ಡಿಸೈನ್ ಗಳು.

Blouse Designs: ಪ್ರತಿ ವಧು ತನ್ನ ಕನಸಿನ ದಿನವನ್ನು ಇನ್ನಷ್ಟು ಮೆರುಗುಗೊಳಿಸಲು ಇಲ್ಲಿದೆ ದಕ್ಷಿಣ ಭಾರತದ ಮದುವೆಯ ಬ್ಲೌಸ್ ಡಿಸೈನ್ ಗಳು
Blouse DisgnImage Credit source: Pinterest
TV9 Web
| Updated By: ಅಕ್ಷತಾ ವರ್ಕಾಡಿ|

Updated on:Nov 06, 2022 | 2:25 PM

Share

ದಕ್ಷಿಣ ಭಾರತದ ಮದುವೆಯ ಬ್ಲೌಸ್ ಡಿಸೈನ್ ಗಳು ವಿಭಿನ್ನ ರೀತಿಯಲ್ಲಿ ಮಹಿಳೆಯರನ್ನು ತನ್ನತ್ತ ಸೆಳೆಯುತ್ತಿದೆ. ಇಂದು ಬೆಲೆಯಲ್ಲಿ ಹಾಗೂ ಕ್ರಿಯಾತ್ಮಕ ವಿನ್ಯಾಸಗಳ ಮೂಲಕ ಬ್ಲೌಸ್ ಡಿಸೈನ್ ಗಳು ಒಂದಕಿಂತ ಒಂದು ಪೈಪೋಟಿ ನೀಡುತ್ತಿದೆ.

ಪ್ರತಿಯೊಂದು ಹೆಣ್ಣಿಗೂ ಆಕೆಯ ಮದುವೆಯ ದಿನ ಜೀವನದ ವಿಶೇಷ ದಿನವಾಗಿದೆ. ಈ ವಿಶೇಷ ದಿನದಂದು ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕೆಂಬುದು ಆಕೆಯ ಕನಸಾಗಿರುತ್ತದೆ. ಆದ್ದರಿಂದ ನಿಮ್ಮ ಕನಸಿನ ದಿನವನ್ನು ಇನ್ನಷ್ಟು ಮೆರುಗುಗೊಳಿಸಲು ಇಲ್ಲಿದೆ ಕ್ರಿಯೇಟಿವ್ ಬ್ಲೌಸ್ ಡಿಸೈನ್ ಗಳು.

ಪಿಕಾಕ್ ಡಿಸೈನ್ ಬ್ಲೌಸ್: ಗರಿಬಿಚ್ಚಿ ನಿಂತ ನವಿಲಿನ ಸುಂದರ ಚಿತ್ರಣವನ್ನು ದಕ್ಷಿಣ ಭಾರತದ ಬಹುತೇಕ ಮದುವೆಯ ಬ್ಲೌಸ್ ಗಳಲ್ಲಿ ಕಾಣಬಹುದು. ಈಗಾಗಲೇ ನವಿಲು ವಿನ್ಯಾಸದ ಸೀರೆ, ಆಭರಣ ಹಾಗೂ ಆಕ್ಸೆಸರೀಸ್‌ಗಳು ಜನಪ್ರಿಯವಾಗಿದೆ. ಈಗ ನವಿಲಿನ ವೈವಿಧ್ಯಮಯ ವಿನ್ಯಾಸದ ಕಲರ್‌ಫುಲ್‌ ರವಿಕೆಗಳು ಟ್ರೆಂಡಿಯಾಗಿವೆ.

peacock design blouse

peacock design blouse

ವಿಶಿಷ್ಟ ಥೀಮ್ ಬ್ಲೌಸ್:

ವಿಶೇಷ ಥೀಮ್ ಇಟ್ಟುಕೊಂಡು ಡಿಸೈನ್ ಮಾಡಲಾಗುವ ಬ್ಲೌಸ್ ಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇಲ್ಲಿ ವಧು ವರರ ಸಪ್ತಪದಿ ತುಳಿಯುವಂತಹ ಕೆಲವೊಂದು ಸುಂದರ ಕ್ಷಣಗಳನ್ನು ಡಿಸೈನ್ ಮಾಡಲಾಗುತ್ತದೆ. ಇದಲ್ಲದೆ ಜಾನಪದ ಸಂಸ್ಕೃತಿಯನ್ನು ಕೂಡ ವಿಶೇಷವಾಗಿ ಚಿತ್ರಿಸಲಾಗುತ್ತದೆ.

Theme Blouse

Theme Blouse

ಬೆಲ್ ಸ್ಲೀವ್ಡ್ ಬ್ಲೌಸ್: 

ಇದರ ಆಕರ್ಷಕ ಅಗಲವಾದ ಕೈಗಳ ವಿನ್ಯಾಸವು ವಿಶೇಷವಾಗಿದೆ. ಇದು ಸಿಂಪಲ್ ಸೀರೆಗಳಿಗೂ ಗ್ರಾಂಡ್ ಲುಕ್ ನೀಡುತ್ತದೆ. ವಿಶೇಷವಾಗಿ ದಕ್ಷಿಣ ಭಾರತದ ಮದುವೆಯ ಬ್ಲೌಸ್ ಡಿಸೈನ್ ಗಳಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

Bell Sleeve Blouse

Bell Sleeve Blouse

ಬಟರ್‌ಫ್ಲೈ ಕಟ್ ಬ್ಲೌಸ್:

ಬಟರ್‌ಫ್ಲೈ ಕಟ್ ಬ್ಲೌಸ್ ವಿನ್ಯಾಸವು ನಿಮಗೆ ವಿಶೇಷ ಲುಕ್ ನೀಡುತ್ತದೆ. ಬ್ಲೌಸ್ ಹಿಂಭಾಗದಲ್ಲಿ ಚಿಟ್ಟೆ ಆಕೃತಿಯ ರೀತಿಯಲ್ಲಿ ಈ ಬ್ಲೌಸ್ ವಿನ್ಯಾಸ ಮಾಡಲಾಗುತ್ತದೆ. ಇದು ನಿಮ್ಮನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ ನೀವು ಬಟರ್‌ಫ್ಲೈ ಕಟ್ ಬ್ಲೌಸ್ ಅನ್ನು ಪ್ರಯತ್ನಿಸಿ.

Butterfly Cut Attractive Blouse

Butterfly Cut Attractive Blouse

ಒವರ್ ಲಾಪಿಂಗ್ ಬ್ಲೌಸ್ ಡಿಸೈನ್: 

ಇದು ಹೊಸ ಬ್ಲೌಸ್ ಡಿಸೈನ್ ಆಗಿದ್ದು , ನಿಮ್ಮ ಸಿಂಪಲ್ ಸಾರಿಗಳಿಗೆ ಗ್ರಾಂಡ್ ಲುಕ್ ನೀಡುತ್ತದೆ. ಈ ಡಿಸೈನ್ ನ ವಿಶೇಷವೆಂದರೆ ಇದು ನೀವು ಉಡುವ ಸಾರಿಯ ಹೊರಗಡೆ ಕೋಟ್ ರೀತಿಯಂತೆ ಕಾಣುತ್ತದೆ. ನಿಮಗೆ ವಿಶೇಷ ಲುಕ್ ನೀಡಲು ಒವರ್ ಲಾಪಿಂಗ್ ಬ್ಲೌಸ್ ಡಿಸೈನ್ ಪ್ರಯತ್ನಿಸಿ ನೋಡಿ.

Overlapping

Overlapping

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:25 pm, Sun, 6 November 22