ಹನಿಮೂನ್ ಪ್ರವಾಸಕ್ಕಾಗಿ ದಕ್ಷಿಣ ಭಾರತದಲ್ಲಿವೆ ರೋಮ್ಯಾಂಟಿಕ್ ಸ್ಥಳಗಳು

ಹನಿಮೂನ್ ಪ್ರಿಯರಿಗಾಗಿ ದಕ್ಷಿಣ ಭಾರತದಲ್ಲಿವೆ ಅಚ್ಚು ಮೆಚ್ಚಿನ ಪ್ರವಾಸಿ ತಾಣಗಳು

TV9 Web
| Updated By: ವಿವೇಕ ಬಿರಾದಾರ

Updated on: Oct 13, 2022 | 7:00 AM

ಮಧುಚಂದ್ರಕ್ಕೆ ಕೇರಳದ ಹಿನ್ನೀರಿನ ಪ್ರದೇಶವಾದ ಪ್ರಶಾಂತ ಮತ್ತು ರೋಮಾಂಚನಕಾರಿಯಾದ ಕುಮಾರಕೋಮ್ ಉತ್ತಮ ಸ್ಥಳವಾಗಿದೆ.

Romantic Honeymoon Places In South India

1 / 10
ನವಜೋಡಿಗಳು ಬಹಳ ಇಷ್ಟಪಡುವ ತಾಣ ಕನ್ಯಾಕುಮಾರಿ. ಸಮುದ್ರದಡಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದೆ ಚಂದ. ಇದು ಅನೇಕ ಕರಾವಳಿ ಪಟ್ಟಣಗಳಿಗಿಂತ ಭಿನ್ನವಾಗಿದೆ.  ಇದು ಮೂರು ಕಡೆಗಳಿಂದ ಲಕ್ಕಾಡಿವ್ ಸಮುದ್ರದಿಂದ ಆವೃತವಾಗಿದೆ.

Romantic Honeymoon Places In South India

2 / 10
 Romantic Honeymoon Places In South India

ಗೋಕರ್ಣವು ಗೋವಾದಂತೆಯೇ ಬಿಳಿ ಮರಳಿನ ಕಡಲತೀರಗಳನ್ನು ಒಳಗೊಂಡಿದೆ. ಇದು ದೇವಾಲಯಗಳು, ಹಿಪ್ಪಿ ಕೆಫೆಗಳು ಮತ್ತು ಫ್ಲೀ ಮಾರುಕಟ್ಟೆಗಳಿಗೆ ಪ್ರಸಿದ್ಧವಾಗಿದೆ. ಬಹಳಷ್ಟು ಯುವಕರು ಮತ್ತು ಮಧುಚಂದ್ರದ ಜೋಡಿಗಳು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳೆಂದರೆ ಓಂ ಬೀಚ್, ಹಾಫ್ ಮೂನ್ ಬೀಚ್ ಮತ್ತು ಪರಮಾತ್ಮನ ದೇವಾಲಯ.

3 / 10
 Romantic Honeymoon Places In South India

ಲಕ್ಷದ್ವೀಪ ನೀಲಿ ಮತ್ತು ಹಸಿರು ಬಣ್ಣಗಳಿಂದ ಆವೃತವಾಗಿರುವ ಬಹುಕಾಂತೀಯ ದ್ವೀಪ. ಮಧುಚಂದ್ರಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ. ಇಲ್ಲಿಯ ಪ್ರಕೃತಿಯ ಸೌದರ್ಯಕ್ಕೆ ನೀವು ಮನಸೋಲದೆ ಇರಲಾರಿರಿ.

4 / 10
 Romantic Honeymoon Places In South India

ಕಬಿನಿಯು ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ಮಧುಚಂದ್ರದ ತಾಣವಾಗಿದೆ. ಇದು ಕಾವೇರಿ ನದಿಯ ಪ್ರಮುಖ ಉಪನದಿಯಾಗಿರುವ ಕಬಿನಿ ನದಿಯ ದಂಡೆಯ ಉದ್ದಕ್ಕೂ ಇರುವ ಅರಣ್ಯ ಪ್ರದೇಶವಾಗಿದೆ. ಬೆಂಗಳೂರಿನಿಂದ ಕೇವಲ 275 ಕಿ.ಮೀ ದೂರದಲ್ಲಿದೆ. ಕಬಿನಿಯಲ್ಲಿ ರೋಮ್ಯಾಂಟಿಕ್ ರೆಸಾರ್ಟ್‌ಗಳಿವೆ. ಅವು ನಿಮ್ಮನ್ನು ಸಂಪೂರ್ಣವಾಗಿ ವಿಭಿನ್ನ ಜಗತ್ತಿಗೆ ಕರೆದೊಯ್ಯುತ್ತವೆ.

5 / 10
 Romantic Honeymoon Places In South India

ವಯನಾಡ್‌ ದಟ್ಟವಾದ ಅರಣ್ಯ ಪ್ರದೇಶವು ಸಾಕಷ್ಟು ಕ್ವಿಕ್ಸೋಟಿಕ್ ಆಗಿದೆ. ಮಧುಚಂದ್ರಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

6 / 10
 Romantic Honeymoon Places In South India

ಪ್ರಕೃತಿಯ ವಿಲಕ್ಷಣ ಸೌಂದರ್ಯವನ್ನು ಇಷ್ಟಪಡುವ ದಂಪತಿಗಳಿಗೆ ಕೂರ್ಗ್ ಉತ್ತಮ ಸ್ಥಳವಾಗಿದೆ. ಕಾಫಿ ತೋಟಗಳಿಂದ ಸುತ್ತುವರಿದಿರುವ ಗಿರಿಧಾಮವು ದಕ್ಷಿಣ ಭಾರತದ ಅತ್ಯಂತ ಆಕರ್ಷಕ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ಅರೇಬಿಕಾ ಕಾಫಿ ಬೀಜಗಳ ಕಾಮೋತ್ತೇಜಕ ಸುವಾಸನೆಯು ನಿಮ್ಮನ್ನು ಅಲ್ಟ್ರಾ ರೊಮ್ಯಾಂಟಿಕ್ ಮಾಡುತ್ತದೆ.

7 / 10
 Romantic Honeymoon Places In South India

ಊಟಿಯು ಒಂದು ರಮ್ಯವಾದ ವಾಸಸ್ಥಾನವಾಗಿದೆ. ನಿಮ್ಮ ಪ್ರೀತಿಯ ವೈವಾಹಿಕ ಜೀವನದ ಆರಂಭಕ್ಕೆ ಪರ್ವತಗಳು ಸಾಕ್ಷಿಯಾಗಲಿವೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮಧುಚಂದ್ರದ ಸ್ಥಳಗಳಲ್ಲಿ ಒಂದಾಗಿರುವ ಊಟಿಯು ಪ್ರಶ್ನಾತೀತ ಸ್ವರ್ಗವಾಗಿದೆ.

8 / 10
 Romantic Honeymoon Places In South India

ಆಂಧ್ರಪ್ರದೇಶದಲ್ಲಿರುವ ಅನಂತಗಿರಿ ಬೆಟ್ಟಗಳು ದಕ್ಷಿಣ ಭಾರತದಲ್ಲಿ ಮಧುಚಂದ್ರಕ್ಕೆ ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಸದಾ ಹಸಿರಿನಿಂದ ಕೂಡಿರುವ ಬೆಟ್ಟಗಳು, ಬೆಟ್ಟಕ್ಕೆ ಚುಂಬಿಸುವ ಮೋಡಗಳು ಮಧುಚಂದ್ರಕ್ಕೆ ಸೂಕ್ತವಾದ ಸ್ಥಳವಾಗಿದೆ.

9 / 10
 Romantic Honeymoon Places In South India

ತಿರುವನಂತಪುರಂನಿಂದ 27 ಕಿಮೀ ದೂರದಲ್ಲಿ ಪೂವರ್ ಎಂಬ ಸಣ್ಣ ಪಟ್ಟಣವಿದೆ. ಇದು ಚಿನ್ನದ ಮರಳಿನ ಕಡಲತೀರಗಳನ್ನು ಹೊಂದಿದೆ. ಇಲ್ಲಿ ಸಾಕಷ್ಟು ಏಕಾಂತ ಸ್ಥಳಗಳಿವೆ. ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ನಿಜವಾಗಿಯೂ ಸುಂದರವಾಗಿದ್ದು, ಅದ್ಭುತ ಆತಿಥ್ಯಕ್ಕೆ ಹೆಸರುವಾಸಿಯಾಗಿವೆ.

10 / 10
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ