- Kannada News Photo gallery Cricket photos T20 World Cup 2022: 5 Rule Changes that will be game-change
T20 World Cup 2022: ಟಿ20 ವಿಶ್ವಕಪ್ನಲ್ಲಿ ಹೊಸ ನಿಯಮ: ಈ ಬಾರಿ ಪಂದ್ಯ ಮತ್ತಷ್ಟು ರೋಚಕ
T20 World Cup 2022: ಈ ಬಾರಿ ಐದು ನಿಯಮಗಳು ಜಾರಿಗೆ ಬರಲಿದ್ದು, ಹೀಗಾಗಿ ಯಾವುದೇ ಸಂದರ್ಭದಲ್ಲೂ ಪಂದ್ಯದ ಚಿತ್ರಣವನ್ನು ಬದಲಾಗಬಹುದು. ಆ 5 ನಿಯಮಗಳು ಯಾವುವು ಎಂದು ನೋಡುವುದಾದರೆ...
Updated on: Oct 12, 2022 | 10:09 PM

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಕ್ಟೋಬರ್ 1 ರಂದು ಜಾರಿಗೊಳಿಸಿರುವ ಹೊಸ ನಿಯಮದಂತೆ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ. ಈ ನಿಯಮಗಳೇ ಟೂರ್ನಿಯ ಆಕರ್ಷಣೆ ಎಂದರೆ ತಪ್ಪಾಗಲಾರದು.

ಏಕೆಂದರೆ ಈ ಬಾರಿ ಐದು ನಿಯಮಗಳು ಜಾರಿಗೆ ಬರಲಿದ್ದು, ಹೀಗಾಗಿ ಯಾವುದೇ ಸಂದರ್ಭದಲ್ಲೂ ಪಂದ್ಯದ ಚಿತ್ರಣವನ್ನು ಬದಲಾಗಬಹುದು. ಆ 5 ನಿಯಮಗಳು ಯಾವುವು ಎಂದು ನೋಡುವುದಾದರೆ...

1- 90 ಸೆಕೆಂಡ್ ಅವಕಾಶ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ರೆಡಿಯಾಗಲು ಕೇವಲ 90 ಸೆಕೆಂಡ್ಗಳ ಸಮಯವಕಾಶ ಮಾತ್ರ ಇರಲಿದೆ. ಅಂದರೆ 90 ಸೆಕೆಂಡ್ಗಳಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಾಗಿರಬೇಕಾಗುತ್ತದೆ. ಒಂದು ವೇಳೆ ಕ್ರೀಸ್ಗೆ ಬರಲು ತಡವಾದರೆ ಅಥವಾ 90 ಸೆಕೆಂಡ್ಸ್ ಒಳಗೆ ಚೆಂಡನ್ನು ಎದುರಿಸಲು ಸಿದ್ಧರಾಗಿರದಿದ್ದರೆ ಅವರನ್ನು ಔಟ್ ಎಂದು ಪರಿಗಣಿಸಬಹುದು.

2- ಫೀಲ್ಡರ್ ಚಲನಾ ನಿಮಯ: ಬೌಲರ್ ರನ್-ಅಪ್ ಸಮಯದಲ್ಲಿ ಯಾವುದೇ ಫೀಲ್ಡರ್ ಉದ್ದೇಶಪೂರ್ವಕವಾಗಿ ತನ್ನ ಸ್ಥಳದಿಂದ ಚಲಿಸಿದರೆ, ಅಂಪೈರ್ ಆ ತಂಡಕ್ಕೆ ಐದು ರನ್ ದಂಡವನ್ನು ವಿಧಿಸಲಿದ್ದಾರೆ. ಅಂದರೆ ಬೌಲರ್ ರನ್ ಅಪ್ ವೇಳೆ ಫೀಲ್ಡರ್ ಉದ್ದೇಶಪೂರ್ವಕವಾಗಿ ಅತ್ತಿತ್ತ ಚಲಿಸಿದರೆ ಎದುರಾಳಿ ತಂಡಕ್ಕೆ 5 ರನ್ಗಳು ಸಿಗಲಿದೆ.

3- ಬ್ಯಾಟ್ಸ್‌ಮನ್ ಪಿಚ್ನಲ್ಲಿಯೇ ಇರಬೇಕು: ಐಸಿಸಿಯ ಹೊಸ ನಿಯಮದ ಪ್ರಕಾರ ಬ್ಯಾಟ್ಸ್‌ಮನ್ ಪಿಚ್‌ನ ಒಳಗೆ ಇರುವಾಗಲೇ ಶಾಟ್ ಬಾರಿಸಬೇಕು. ಅಂದರೆ ಬ್ಯಾಟಿಂಗ್ ಮಾಡುವಾಗ ದೇಹವು ಪಿಚ್‌ನಿಂದ ಹೊರಗೆ ಹೋದರೆ, ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ. ಆ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇನ್ಮುಂದೆ ಪಿಚ್‌ನಿಂದ ಹೊರಹೋಗಿ ಶಾಟ್ ಬಾರಿಸುವಂತಿಲ್ಲ.

4- ಸ್ಲೋ ಓವರ್ ರೇಟ್ ನಿಯಮ: ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು. ಒಂದು ವೇಳೆ ತಡವಾದರೆ ಉಳಿದ ಓವರ್ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್ನಿಂದ ಒಬ್ಬ ಆಟಗಾರನನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ. ನಿಗದಿತ ಸಮಯದೊಳಗೆ ಓವರ್ ಮುಗಿಯದಿದ್ದರೆ, ಕೊನೆಯ ಓವರ್ಗಳ ವೇಳೆ ಒಬ್ಬ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನ ಕಡಿತಗೊಳಿಸಿ ಮುಂದೆ ನಿಲ್ಲಿಸಬೇಕಾಗುತ್ತದೆ.

5- ಮಂಕಡ್ ರನೌಟ್ ಅವಕಾಶ: ಐಸಿಸಿಯ ನೂತನ ನಿಯಮದ ಪ್ರಕಾರ, ಇನ್ಮುಂದೆ ಮಂಕಡ್ ರನೌಟ್ ಮಾಡಬಹುದು. ಅಂದರೆ ಬೌಲರ್ ಚೆಂಡೆಸೆಯುವ ಮುನ್ನ ಇನ್ಮುಂದೆ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟರೆ ರನೌಟ್ ಮಾಡುವ ಅವಕಾಶ ಇರಲಿದೆ. ಇಲ್ಲಿ ಬ್ಯಾಟ್ಸ್ಮನ್ಗಳಿಗೆ ಯಾವುದೇ ವಾರ್ನಿಂಗ್ ನೀಡಬೇಕಾದ ಅವಶ್ಯಕತೆಯಿಲ್ಲ.

ಈ ಐದು ನಿಯಮಗಳು ಪಂದ್ಯದ ಯಾವುದೇ ಸಂದರ್ಭಗಳಲ್ಲೂ ಬಳಕೆಗೆ ಬರಬಹುದು. ಅದರಲ್ಲೂ ಭರ್ಜರಿ ಪೈಪೋಟಿ ಸಂದರ್ಭಗಳಲ್ಲಿ ಈ ನಿಮಯಗಳೇ ಪಂದ್ಯದ ಚಿತ್ರಣವನ್ನು ಬದಲಿಸಿಬಹುದು. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.



















