ದೇಶದಲ್ಲಿನ ಯುವ ಕ್ರಿಕೆಟ್ ಪ್ರತಿಭೆಗಳನ್ನು ಹುಡುಕಲು ಮತ್ತು ಅವರನ್ನು ಪ್ರೊತ್ಸಾಹಿಸುವ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ ಒಡೆತನದಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣಗೊಂಡಿರುವ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಟೀ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಉದ್ಘಾಟಿಸಿದ್ದಾರೆ.
ಹೊಸೂರಿನಲ್ಲಿ ಧೋನಿ ಉದ್ಘಾಟಿಸಿದ ಸೂಪರ್ ಕಿಂಗ್ಸ್ ಅಕಾಡೆಮಿ ಎಂಟು ಪಿಚ್‌ಗಳನ್ನು ಹೊಂದಿದೆ. ಇದಲ್ಲದೆ ಅಭ್ಯಾಸಕ್ಕಾಗಿ ಟರ್ಫ್ ಮತ್ತು ಮ್ಯಾಚ್ಗಳಿಗಾಗಿ ಟರ್ಫ್-ವಿಕೆಟ್ ಫಿಲ್ಡ್ಗಳನ್ನು ಹೊಂದಿದೆ. MS ಧೋನಿ ಗ್ಲೋಬಲ್ ಸ್ಕೂಲ್ನಲ್ಲಿ ಆರಂಭವಾಗಿರುವ ಈ ಅಕಾಡೆಮಿ ಭಾರತದ ಮೊದಲ ಫ್ರಾಂಚೈಸ್ ಮಾಲೀಕತ್ವದ ಅಕಾಡೆಮಿಯಾಗಿದೆ.
ಈ ಸಮಾರಂಭದಲ್ಲಿ ಧೋನಿ ಹೊರತಾಗಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಕೂಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಾತನಾಡಿದ ಧೋನಿ, ನಾವು ಯಾವಾಗಲೂ ಕ್ರೀಡೆಗೆ ಹಿಂತಿರುಗಲು ಬಯಸುತ್ತೇವೆ ಮತ್ತು ಇದು ನಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಭವಿಷ್ಯದ ಪೀಳಿಗೆಯ ಕ್ರಿಕೆಟಿಗರನ್ನು ಬೆಳೆಸಲು ನಮಗೆ ಉತ್ತಮ ಅವಕಾಶವಾಗಿದೆ. ನಾವು ಈ ವರ್ಷ ಜೂನಿಯರ್ ಸೂಪರ್ ಕಿಂಗ್ಸ್ ಅನ್ನು ಮರುಪ್ರಾರಂಭಿಸುತ್ತೇವೆ. ಸೂಪರ್ ಕಿಂಗ್ಸ್ ಅಕಾಡೆಮಿ ತಮಿಳುನಾಡಿನಾದ್ಯಂತ ಹೆಚ್ಚಿನ ಪ್ರತಿಭೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಈ ಹೊಸ ಪಯಣದ ಬಗ್ಗೆ ನಾವು ಉತ್ಸುಕರಾಗಿದ್ದೇವೆ, ಈ ವರ್ಷದ ಏಪ್ರಿಲ್‌ನಲ್ಲಿ ನಾವು ಎರಡು ಕೇಂದ್ರಗಳಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದೇವೆ. ಆದ್ದರಿಂದ ಈ ಅಕಾಡೆಮಿಯನ್ನು ರಾಜ್ಯದ ಇತರ ಭಾಗಗಳಿಗೂ ಹರಡಲು ನಾವು ಬಯಸಿದ್ದೇವೆ.
ಕ್ರೀಡಾ ಜಗತ್ತಿಗೆ ಮತ್ತೆ ಏನನ್ನಾದರೂ ಕೊಡಬೇಕು ಎಂಬ ಹಂಬಲ ನನ್ನದು. ನನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡಲು ಇದೊಂದು ಉತ್ತಮ ಅವಕಾಶ. ಈ ವರ್ಷ ಜೂನಿಯರ್ ಸೂಪರ್ ಕಿಂಗ್ಸ್ ಅಕಾಡೆಮಿ ಕೂಡ ಆರಂಭವಾಗಲಿದೆ. ಇದು ಅನ್ವೇಷಣೆಗೆ ಅನುಕೂಲವಾಗಲಿದೆ ಎಂದು ಮಹಿ ಹೇಳಿದರು.
Published On - 4:49 pm, Wed, 12 October 22