ಶಾಲಾ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?

ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಬೆಂಗಳೂರಿನ ಕತ್ರಿಗುಪ್ಪೆಯ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಟಿವಿ9 ಕನ್ನಡ ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಶಾಲಾ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?
ಭವ್ಯ ವಿಶ್ವನಾಥ್, ಆಪ್ತ ಸಮಾಲೋಚಕಿ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 30, 2022 | 1:16 PM

ಬೆಂಗಳೂರಿನ ವಿವಿಧ ಶಾಲೆಗಳ ಮಕ್ಕಳ ಬ್ಯಾಗ್​ಗಳಲ್ಲಿ ಸ್ಮಾರ್ಟ್​ಫೋನ್​ಗಳು, ಸಿಗರೇಟ್, ಕಾಂಡೋಮ್​ಗಳು, ಗರ್ಭನಿರೋಧಕ ಮಾತ್ರೆಗಳು ಕಂಡುಬಂದಿದ್ದು ಶಾಲಾ ಸಿಬ್ಬಂದಿ ಮತ್ತು ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥಾಪಕ ಮಂಡಳಿಯು (Associated Managements of Primary and Secondary Schools in Karnataka – KAMS) ಸಹ ಮಕ್ಕಳ ಬ್ಯಾಗ್​ಗಳನ್ನು ತಪಾಸಣೆಗೆ ಒಳಪಡಿಸುವಂತೆ ಎಲ್ಲ ಶಾಲೆಗಳಿಗೆ ಸಲಹೆ ಮಾಡಿತ್ತು. ಈ ಹಿನ್ನೆಲೆ ಮಕ್ಕಳ ಬ್ಯಾಗ್​ಗಳನ್ನು ತಪಾಸಣೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಬೆಂಗಳೂರಿನ ಕತ್ರಿಗುಪ್ಪೆಯ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಟಿವಿ9 ಕನ್ನಡ ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಮಕ್ಕಳೊಂದಿಗೆ ಸಮಯ ಕಳೆಯಿರಿ:

ಇಂತಹ ಘಟನೆಗಳು ನಡೆದಿದ್ದು ಇದೇ ಮೊದಲೇನಲ್ಲ. ಇಂದಿನ ಮಕ್ಕಳ ಮನಸ್ಥಿತಿ ಬದಲಾದ ಜೀವನಶೈಲಿಯಿಂದಾಗಿ ಯಾವ ರೀತಿ ಬದಲಾಗಿದೆ ಎಂಬುದನ್ನು ತಿಳಿಸುತ್ತದೆ. ಯಾವುದೇ ಒತ್ತಡದ ಕೆಲಸ ಕಾರ್ಯಗಳಿದ್ದರೂ ಕೂಡ ನಿಮ್ಮ ಮಕ್ಕಳೊಂದಿಗೆ ಪ್ರತಿ ದಿನ ಕೆಲವೊಂದಿಷ್ಟು ಕಾಲ ಸಮಯವನ್ನು ಕಳೆಯಿರಿ. ನಿಮ್ಮ ಮಕ್ಕಳನ್ನು ಅವರ ಪಾಡಿಗೆ ಬಿಡದಿರಿ. ಅವರ ಮನಸ್ಥಿತಿ ಅವರ ಬೆಳವಣಿಗೆಗೆ ತಕ್ಕಂತೆ ಯಾವ ರೀತಿ ಬದಲಾಗುತ್ತಿದೆ ಎಂಬುದನ್ನು ಪ್ರತಿ ಪೋಷಕರು ತಿಳಿದುಕೊಳ್ಳಬೇಕಿದೆ. ನಿಮ್ಮ ಯಾವುದೇ ಒತ್ತಡದ ಕೆಲಸ ಕಾರ್ಯಗಳಿದ್ದರೂ ಸಹ ಪ್ರತಿ ದಿನ ನಿಮ್ಮ ಮಕ್ಕಳನ್ನು ಮುಖಾ ಮುಖಿಯಾಗಿ ಕುಳಿತುಕೊಳ್ಳಿಸಿ ಈದಿನ ಎನಾಯಿತು? ಇಂದಿನ ದಿನ ಹೇಗಿತ್ತು? ಪ್ರತಿ ದಿನ ಅವರೊಂದಿಗೆ ಸಂವಹನ ನಡೆಸುವುದು ಪೋಷಕರ ಕರ್ತವ್ಯ ಎಂದು ಹೇಳುತ್ತಾರೆ.

ಮತ್ತಷ್ಟು ಓದಿ: ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಸ್ಕೂಲ್​ಬ್ಯಾಗ್​ನಲ್ಲಿ ಕಾಂಡೋಮ್, ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆ; ಶಿಕ್ಷಕರಿಗೆ ಆಘಾತ

ಆಹಾರ ಪದ್ದತಿ:

ಮಕ್ಕಳ ಇಂತಹ ಮನಸ್ಥಿತಿಗೆ ಅವರು ಸೇವಿಸುವ ಆಹಾರಗಳು ಕೂಡ ಪ್ರಮುಖ ಭಾಗವಾಗಿರುತ್ತದೆ. ಇಂದಿನ ಬದಲಾದ ಜೀವನಶೈಲಿಗಳಿಂದ ನಗರಗಳಲ್ಲಿ ವಾಸಿಸುವವರು ಮನೆಯಲ್ಲಿನ ಆಹಾರಕ್ಕಿಂತ ಜಾಸ್ತಿಯಾಗಿ ಆನ್ಲೈನ್ ಆಹಾರಗಳನ್ನು ಖರೀದಿಸಿ ಸೇವಿಸುವವರೇ ಜಾಸ್ತಿಯಾಗಿದೆ. ಇದರಿಂದಾಗಿ ಜಂಕ್ ಫುಡ್ ಗಳು ಸುಲಭವಾಗಿ ಹಾಗೂ ತ್ವರಿತವಾಗಿ ಸಿಗುವುದ್ದರಿಂದ ಮಕ್ಕಳು ಅದನ್ನೇ ಜಾಸ್ತಿ ಇಷ್ಟ ಪಟ್ಟು ಪ್ರತಿ ದಿನ ತಿನ್ನುತ್ತಿರುವುದ್ದರಿಂದ ಅವರ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಆಲೋಚನೆಗಳಲ್ಲಿನ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಸ್ಮಾರ್ಟ್​ ಫೋನ್:

ಕೋವಿಡ್ ನಂತರದ ದಿನಗಳಿಂದ ಶಿಕ್ಷಣ ವ್ಯವಸ್ಥೆಯೇ ಬದಲಾಗಿದ್ದು, ಮಕ್ಕಳು ಸ್ಮಾರ್ಟ್​ ಫೋನ್, ಲ್ಯಾಪ್ ಟಾಪ್ ಬಳಸುವುದು ಅನಿವಾರ್ಯವಾಗಿದೆ. ಆದ್ದರಿಂದ ಪೋಷಕರು ಮಕ್ಕಳ ಫೋನ್ ಯಾವ ಮನಸ್ಥಿಯನ್ನು ಇಟ್ಟುಕೊಂಡು ಬಳಕೆ ಮಾಡುತ್ತಿದ್ದಾರೆ. ಶೈಕ್ಷಣಿಕ ವಿಷಯದ ಹೊರತಾಗಿ ಯಾವ ಕಾರಣಕ್ಕಾಗಿ ಫೋನ್ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಸ್ನೇಹಿತರ ಸಹವಾಸ:

ಇಂತಹ ಪ್ರಕರಣಗಳು ಸಂಭವಿಸಲು ಸ್ನೇಹಿತರ ಮಾತು ಹಾಗೂ ಅವರ ನಡವಳಿಕೆಗಳು ಕೂಡ ನಿಮ್ಮ ಮಕ್ಕಳಿಗೆ ಪ್ರೇರಣೆಯಾಗಬಹುದು. ಆದ್ದರಿಂದ ನಿಮ್ಮ ಮಕ್ಕಳ ಸ್ನೇಹಿತರು ಹೇಗೆ ಎಂಬುದನ್ನು ಪ್ರತಿಯೊಬ್ಬ ಪೋಷಕರು ಕೂಡ ತಿಳಿದುಕೊಳ್ಳಬೇಕು. ನಿಮ್ಮ ಮಕ್ಕಳು ಕೆಟ್ಟ ಹಾದಿಯನ್ನು ತುಳಿಯಲು ಪೋಷಕರ ನಿರ್ಲಕ್ಷ್ಯವೇ ಮೊದಲ ಕಾರಣವಾಗಿರುತ್ತದೆ ಎಂದು ಇವರು ಎಚ್ಚರಿಕರ ನೀಡುತ್ತಾರೆ.

ಇದನ್ನು ಓದಿ: ಸಣ್ಣ ಪುಟ್ಟ ವಿಷಯಕ್ಕೂ ಕೋಪ ಬರುತ್ತಾ? ಈ ಸಲಹೆಗಳನ್ನು ಅನುಸರಿಸಿ ಕೂಲ್ ಆಗ್ತೀರ

ಹದಿಹರೆಯದ ಮಕ್ಕಳಿಗಾಗಿ ಸಮಾಲೋಚನೆ:

ಪ್ರತಿಯೊಂದು ಶಾಲೆಗಳಲ್ಲಿಯೂ ಪ್ರತಿವಾರ ಹದಿಹರೆಹದ ಮಕ್ಕಳಿಗಾಗಿ ಅವರ ಸಮಸ್ಯೆ ಎನು? ಅವರ ಮನಸ್ಥಿತಿ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಹದಿಹರೆಯದವರ ಸಮಾಲೋಚನೆ (Teenage counselling) ಕಡ್ಡಾಯಗೊಳಿಸಬೇಕಿದೆ ಎಂದು ಇವರು ಹೇಳತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:37 pm, Wed, 30 November 22