AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala-Style Snack: ಕೇರಳ ಸ್ಪೇಷಲ್ ಮೊರಪ್ಪಮ್ ನೀವು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ

ಮೊರಪ್ಪಮ್ ಇದು ಕೇರಳ ಮಲಯಲಂ ಭಾಷೆಯಲ್ಲಿ ಹೇಳುವುದಾದರೆ ಮೊಸರಿನಿಂದ ಮಾಡಿದ ತಿಂಡಿ ಎಂಬ ಅರ್ಥವನ್ನು ನೀಡುತ್ತದೆ. ಇದರ ಸಂಪೂರ್ಣ ಪಾಕ ವಿಧಾನ ಇಲ್ಲಿದೆ.

Kerala-Style Snack: ಕೇರಳ ಸ್ಪೇಷಲ್ ಮೊರಪ್ಪಮ್ ನೀವು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ
A Perfect Kerala-Style Snack Image Credit source: NDTV FOOD
TV9 Web
| Updated By: ಅಕ್ಷತಾ ವರ್ಕಾಡಿ|

Updated on: Nov 29, 2022 | 7:08 PM

Share

ದಕ್ಷಿಣ ಭಾರತದ ತಿಂಡಿಗಳೇ ವಿಶೇಷ. ಇಲ್ಲಿ ಬಳಸುವ ಮಸಾಲೆಗಳು ರುಚಿಯ ಜೊತೆಗೆ ಒಂದು ಒಳ್ಳೆಯ ಸುವಾಸನೆಯನ್ನು ನೀಡುತ್ತದೆ. ಮೃದುವಾದ ಮತ್ತು ಮೃದು ಬೋಂಡಾ ಆಗಿರಲಿ ಅಥವಾ ಕುರುಕುಲಾದ ತಿಂಡಿಗಳೇ ಆಗಿರಲಿ ಚಟ್ನಿಯೊಂದಿಗೆ ಸವಿದರೇ ಅದರ ರುಚಿಯೇ ಬೇರೆ. ಜೊತೆಗೆ ಮತ್ತು ನಿಮ್ಮ ಸಂಜೆಯ ಒಂದು ಕಪ್ ಚಹಾದೊಂದಿಗೆ ಒಂದು ಉತ್ತಮ ಜೋಡಿಯಾಗಿದೆ. ಕರ್ನಾಟಕದ ಇಡ್ಲಿ- ಸಂಬಾರ್, ದೋಸೆ ಚಟ್ನಿಯಂತೆಯೇ ಕೇರಳದ ಜನಪ್ರಿಯ ತಿಂಡಿಗಳಲ್ಲಿ ಒಂದಾದ ಮೊರಪ್ಪಮ್ ತಿಂಡಿಯ ಸಂಪೂರ್ಣ ಪಾಕ ವಿಧಾನ ಇಲ್ಲಿದೆ. ಒಂದು ಒಳ್ಳೇ ರುಚಿ ನೀಡುವ ಜೊತೆಗೆ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ಮಾಡಬಹುದಾದ ತಿಂಡಿ ಇದಾಗಿದೆ ಒಮ್ಮೆ ನೀವೂ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.

ಮೊರಪ್ಪಮ್ ಇದು ಕೇರಳ ಮಲಯಲಂ ಭಾಷೆಯಲ್ಲಿ ಹೇಳುವುದಾದರೆ ಮೊಸರಿನಿಂದ ಮಾಡಿದ ತಿಂಡಿ ಎಂಬ ಅರ್ಥವನ್ನು ನೀಡುತ್ತದೆ. ಇದರ ಸಂಪೂರ್ಣ ಪಾಕ ವಿಧಾನ ಇಲ್ಲಿದೆ.

ಇದನ್ನು ಓದಿ: ನೀವು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ತಿಂಡಿಗಳು ಇಲ್ಲಿವೆ

ಮಾಡುವ ವಿಧಾನ:

ಮೊದಲಿಗೆ ಅಕ್ಕಿ, ಬೇಳೆಯನ್ನು ಪ್ರತ್ಯೇಕವಾಗಿ 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ನಯವಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಕನಿಷ್ಠ 3-4 ಗಂಟೆಗಳ ಕಾಲ ಹಾಗೇ ಇಡಿ. ನಂತರ ಇದಕ್ಕೆ ಮೊಸರು ಸೇರಿಸಿ ಹತ್ತು ನಿಮಿಷಗಳ ಕಾಲ ಇಡಿ. ನಂತರ ಇದನ್ನು ನೀವು ಸಾಮಾನ್ಯವಾಗಿ  ಅಪ್ಪಂ ಮಾಡುವ ಕಾವಲಿಗೆ ಚೆನ್ನಾಗಿ ಎಣ್ಣೆ ಸವರಿ ಅದರಲ್ಲಿ ಸುರಿದು 2 ನಿಮಿಷ ಬೇಯಿಸಿ. ಜೊತೆಗೆ ಅದರ ಮೇಲೆ ಕತ್ತರಿಸಿದ ಈರುಳ್ಳಿಗಳನ್ನು ಹಾಕಬಹುದು. ಗೋಲ್ಡನ್ ಬ್ರೌನ್ ರವರೆಗೆ ಬೇಯಿಸಿ.ರುಚಿಯಾದ ಕೇರಳದ ವಿಶೇಷ ಮೊರಪ್ಪಮ್  ಸವಿಯಲು ಸಿದ್ದ.  ತಕ್ಷಣವೇ ಕೊತ್ತಂಬರಿ ಹಾಗೂ ತೆಂಗಿನಕಾಯಿಯ ಚಟ್ನಿಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: