AC Side Effects: ನಿಮ್ಮ ಕಾರಿನಲ್ಲಿರುವ AC ಆದಷ್ಟು ಕಡಿಮೆ ಬಳಸಿ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು
ಅಧಿಕ ಜನದಟ್ಟನೆ ಹಾಗೂ ಧೂಳು ಮಾಲಿನ್ಯಗಳು ಇರುವಂತಹ ಪ್ರದೇಶಗಳಲ್ಲಿ ನಿಮ್ಮ ಕಾರಿನ ಎಸಿ ಬಳಸಿ ಇದು ಉತ್ತಮ. ಆದರೆ ಕಡಿಮೆ ಜನ ಹಾಗೂ ವಿಶಾಲ ಪ್ರದೇಶಗಳಲ್ಲಿ ನೀವು ಕಡಿಮೆ ವೇಗದಲ್ಲಿ ಹೋಗಲು ಬಯಸಿದರೆ ಆದಷ್ಟು ನಿಮ್ಮ ಕಾರಿನ ಕಿಟಕಿ ತೆರೆಯಿರಿ.
ಈಗ ಪ್ರತಿಯೊಬ್ಬರ ಕಾರಿನಲ್ಲಿಯೂ ಎಸಿ ಸಾಮಾನ್ಯವಾಗಿದೆ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಎಷ್ಟು ಸೂಕ್ತ ಎಂಬುದು ನೀವು ಮೊದಲು ತಿಳಿದುಕೊಳ್ಳಬೇಕಿದೆ. ಇದು ವಿಶೇಷವಾಗಿ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಿದರೂ ಕೂಡ, ಇದು ನಿಮ್ಮನ್ನು ಅರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದಲೂ ಕುಗ್ಗಿಸುತ್ತದೆ. ಬೇಸಿಗೆಯ ಸಮಯದಲ್ಲಿ ಎಸಿಯು ನಿಮ್ಮ ಇಂಧನದ 12.5 ಪ್ರತಿಶತದವರೆಗೆ ಬಳಸುತ್ತದೆ. ಅಂದರೆ, ನಿಮ್ಮ ಕಾರಿಗೆ ಹಾಕುವ 70 ಲೀಟರ್ ಗ್ಯಾಸೋಲಿನ್‌ನಲ್ಲಿ ಸುಮಾರು 8.75 ಲೀಟರ್ ಎಸಿ ಬಳಸುತ್ತಿದೆ ಎಂದು ಅರ್ಥ.
ಅಧಿಕ ಜನದಟ್ಟನೆ ಹಾಗೂ ಧೂಳು ಮಾಲಿನ್ಯಗಳು ಇರುವಂತಹ ಪ್ರದೇಶಗಳಲ್ಲಿ ನಿಮ್ಮ ಕಾರಿನ ಎಸಿ ಬಳಸಿ ಇದು ಉತ್ತಮ. ಆದರೆ ಕಡಿಮೆ ಜನ ಹಾಗೂ ವಿಶಾಲ ಪ್ರದೇಶಗಳಲ್ಲಿ ನೀವು ಕಡಿಮೆ ವೇಗದಲ್ಲಿ ಹೋಗಲು ಬಯಸಿದರೆ ಆದಷ್ಟು ನಿಮ್ಮ ಕಾರಿನ ಕಿಟಕಿ ತೆರೆಯಿರಿ. ಆದಷ್ಟು ತಂಪಾದ ಗಾಳಿಯನ್ನು ಪಡೆದುಕೊಳ್ಳಿ. ಆದಾಗ್ಯೂ, ನೀವು ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ, ನಿಮ್ಮ ಕಾರಿನಲ್ಲಿ ಎಸಿ ಬಳಸುವುದು ಉತ್ತಮ. ನೀವು ವೇಗವಾಗಿ ಚಾಲನೆ ಮಾಡುತ್ತಿರುವಾಗ ನಿಮ್ಮ ಕಿಟಕಿಗಳನ್ನು ತೆರೆಯುವುದರಿಂದ ನಿಮ್ಮ ಕಾರನ್ನು ನಿಧಾನಗೊಳಿಸುತ್ತದೆ, ಇದು ಹೆಚ್ಚು ಇಂಧನವನ್ನು ತೆಗೆದುಕೊಳ್ಳುತ್ತದೆ.
ಏರ್ ಕಂಡೀಷನರ್ ನಿಮ್ಮ ಕಾರಿನಲ್ಲಿ ತುಂಬಾ ತಂಪು ನೀಡುವುದರ ಜೊತೆಗೆ, ನಮಗೆ ವಿಶ್ರಾಂತಿಯನ್ನು ನೀಡಿದಂತೆ ಅನುಭವವಾಗುತ್ತದೆ. ಆದರೆ ಇದು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸಬಹುದು. ಕಾರಿನ ಒಳಗೆ ಮತ್ತು ಹೊರಗೆ ತಾಪಮಾನವು ತುಂಬಾ ಭಿನ್ನವಾಗಿರುತ್ತದೆ, ತಾಪಮಾನದಲ್ಲಿನ ಬದಲಾವಣೆಯು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸಬಹುದು.
ಇದನ್ನು ಓದಿ: ನಿಮಗೂ ಆಫೀಸ್ನಲ್ಲಿ ಊಟದ ನಂತರ ಸ್ವಲ್ಪ ನಿದ್ರೆ ಮಾಡಬೇಕು ಎಂದೆನಿಸುತ್ತಾ? ಕಾರಣ ತಿಳಿಯಿರಿ
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಯಾವುದೇ ಸ್ಧಳಕ್ಕೆ ತಲುಪುವ ಐದು ನಿಮಿಷಗಳ ಮೊದಲು ಎಸಿ ಯನ್ನು ಆಫ್ ಮಾಡಿ. ಇದರಿಂದಾಗಿ ನೀವು ಕಾರಿನಿಂದ ಹೊರಬರುವ ಮೊದಲು ಕಾಲ ಕ್ರಮೇಣ ಮತ್ತೆ ಹೊರಗಿನ ತಾಪಮಾನಕ್ಕೆ ಒಗ್ಗಿಕೊಳ್ಳಬಹುದು. ನಿಮಗೆ ಅನಾರೋಗ್ಯ ಮತ್ತು ಇಂಧನ ಎರಡನ್ನೂ ಉಳಿಸಲು ನೀವು ಚಾಲನೆ ಮಾಡುವಾಗ ಎಸಿಯನ್ನು ಆದಷ್ಟು ಕಡಿಮೆ ಬಳಕೆ ಮಾಡುವುದು ಉತ್ತಮವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: