Zomato InterCity Legends: ಎಲ್ಲೇ ಇರಿ, ಭಾರತದ ವಿವಿಧ ನಗರಗಳ ಆಹಾರ ಸವಿಯಿರಿ; ಝೊಮೆಟೊದ ವಿನೂತನ ಪ್ರಯತ್ನ

ಇನ್ನು ಮುಂದೆ ನೀವು ಭಾರತದ ಯಾವುದೇ ಭಾಗದಲ್ಲಿದ್ದರೂ ದೇಶದ ಯಾವುದೇ ನಗರದ ಖಾದ್ಯಗಳನ್ನು ಸವಿಯಬಹುದು. ಇದಕ್ಕಾಗಿ ಝೊಮೊಟೊ ಸಂಸ್ಥೆ ಇಂಟರ್‌ಸಿಟಿ ಲೆಜೆಂಡ್ಸ್ ಎಂದು ಇಂಟರ್‌ಸಿಟಿ ಆಹಾರ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

Zomato InterCity Legends: ಎಲ್ಲೇ ಇರಿ, ಭಾರತದ ವಿವಿಧ ನಗರಗಳ ಆಹಾರ ಸವಿಯಿರಿ; ಝೊಮೆಟೊದ ವಿನೂತನ ಪ್ರಯತ್ನ
ಸಾಂದರ್ಬಿಕ ಚಿತ್ರ
Follow us
| Updated By: Rakesh Nayak Manchi

Updated on:Sep 01, 2022 | 11:34 AM

ಆನ್‌ಲೈನ್ ಆಹಾರ ವಿತರಣಾ ಪಾಲುದಾರ ಝೊಮಾಟೊ ಇಂಟರ್‌ಸಿಟಿ ಲೆಜೆಂಡ್ಸ್ ಎಂಬ ಇಂಟರ್‌ಸಿಟಿ ಆಹಾರ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸುವ ಮೂಲಕ ವಿನೂತನ ಪ್ರಯೋಗಕ್ಕೆ ಕೈಹಾಕಿದೆ. ಆ ಮೂಲಕ ನೀವು ಭಾರತದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ದೇಶದ ಯಾವುದೇ ನಗರದ ಭಕ್ಷ್ಯಗಳನ್ನು ಆರ್ಡರ್ ಮಾಡಿ ಸವಿಯಬಹುದು. ಝೊಮೊಟೊ ಪೈಲೆಟ್ ಯೋಜನೆಯು ಭಾರತದ ಯಾವುದೇ ನಗರದಿಂದ ದೇಶದ ವಿವಿಧ ಭಾಗಗಳಿಗೆ ಅನನ್ಯ ಆಹಾರವನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಇಂಟರ್‌ಸಿಟಿ ಆಯ್ಕೆಯನ್ನು ಬಳಸಿಕೊಂಡು ಗ್ರಾಹಕರು ರಾಷ್ಟ್ರದ ಪ್ರತಿಯೊಂದು ಪ್ರದೇಶದಲ್ಲಿನ ವಿವಿಧ ಪಾಕಪದ್ಧತಿಗಳನ್ನು ಆನಂದಿಸಬಹುದು ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಡಿಪಿಂದರ್ ಗೋಯಲ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ ಗುರುಗ್ರಾಮ್ ಮತ್ತು ದಕ್ಷಿಣ ದೆಹಲಿಯಲ್ಲಿ ಆಯ್ದ ಗ್ರಾಹಕರಿಗಾಗಿ ಯೋಜನೆಯ ಫಲ ಸಿಗಲಿದ್ದು, ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಇತರ ನಗರಗಳಿಗೆ ವಿಸ್ತರಿಸುವ ಗುರಿಯನ್ನೂ ಸಂಸ್ಥೆ ಹೊಂದಿದೆ.

ತನ್ನ ರೆಸ್ಟೋರೆಂಟ್ ಪಾಲುದಾರರಿಂದ 7 ರಿಂದ 10 ಕಿಲೋಮೀಟರ್ ದೂರದಲ್ಲಿರುವ ಪ್ರದೇಶಗಳಲ್ಲಿ ಝೊಮೊಟೊದ ಪ್ರಸ್ತುತ ಪ್ಲಾಟ್‌ಫಾರ್ಮ್ ಮೂಲಕ ಮಾತ್ರ ಆರ್ಡರ್‌ಗಳನ್ನು ಇರಿಸಬಹುದು. ಹಾಗಿದ್ದರೆ ಈ ಪೈಲೆಟ್ ಯೋಜನೆಯು ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ವಿವಿಧ ನಗರಗಳ ‘ಐಕಾನಿಕ್ ಡಿಶ್’ಗಳನ್ನು ಝೊಮೊಟೊ ಇಂಟರ್‌ಸಿಟಿ ಲೆಜೆಂಡ್ಸ್​ನಿಂದ ಆರ್ಡರ್ ಮಾಡಬಹುದು. ಹೀಗೆ ಆರ್ಡರ್ ಮಾಡಲಾದ ಆಹಾರಗಳನ್ನು ವಿಮಾನಗಳ ಮೂಲಕ ಸಾಗಿಸಲಾಗುತ್ತದೆ. “ಆಹಾರವನ್ನು ರೆಸ್ಟೋರೆಂಟ್‌ನಿಂದ ಹೊಸದಾಗಿ ತಯಾರಿಸಲಾಗುತ್ತದೆ. ವಿಮಾನದಲ್ಲಿ ಸಾಗಣೆಯ ಸಮಯದಲ್ಲಿ ಅದನ್ನು ಸುರಕ್ಷಿತವಾಗಿರಿಸಲು ಆಹಾರಗಳನ್ನು ಮರುಬಳಕೆ ಮಾಡಬಹುದಾದ ಮತ್ತು ಟ್ಯಾಂಪರ್-ಪ್ರೂಫ್ ಕಂಟೇನರ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ” ಎಂದು ಗೋಯಲ್ ಹೇಳಿದ್ದಾರೆ. ಮೊಬೈಲ್ ರೆಫ್ರಿಜರೇಷನ್ ಟೆಕ್ನಾಲಜಿಯು ಆಹಾರವನ್ನು ಸಂರಕ್ಷಿಸುತ್ತದೆ.

“ನೀವು ಸಿಹಿತಿಂಡಿಗಳು, ಬಿರಿಯಾನಿಗಳು, ಕಚೋರಿಗಳು ಅಥವಾ ಕಬಾಬ್‌ಗಳನ್ನು ಇಷ್ಟಪಡುತ್ತೀರಾ? ಇದು ಪಾಕಶಾಲೆಯ ಸ್ವರ್ಗವಾಗಿರುತ್ತದೆ. ಮುಂದಿನ ಕೆಲವು ವಾರಗಳಲ್ಲಿ ನಾವು ಇದನ್ನು ಇತರ ನಗರಗಳಿಗೆ ತ್ವರಿತವಾಗಿ ವಿತರಿಸಲಿದ್ದೇವೆ, 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಮೂಲಕ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿಸ್ತರಣೆಯಾಗಲಿದೆ. ಹೊಸ ಉಪಕ್ರಮದ ಬಗ್ಗೆ ಬುಲ್ಲಿಶ್ ಹೇಳಿದರು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Thu, 1 September 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ