- Kannada News Photo gallery Try this simple home remedy to reduce dark circles under your eyes Kannada news
Dark Circles : ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆಮಾಡಲು ಈ ಸರಳ ಮನೆ ಮದ್ದು ಪ್ರಯತ್ನಿಸಿ
ನಿಮ್ಮ ಕಣ್ಣಿನ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಿ ಕಾಫಿ ಐ ಕ್ರೀಮ್. ಇದು ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ಮತ್ತು ಉಬ್ಬಿರುವ ಕಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Updated on:Nov 30, 2022 | 2:54 PM

ಡಾರ್ಕ್ ಸರ್ಕಲ್ ನಿಮ್ಮ ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಇದು ನಿಮ್ಮ ಕಣ್ಣಿನ ಆರೋಗ್ಯವನ್ನು ಕೆಡಿಸುವುದಲ್ಲದೇ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ.

ಕಾಫಿ ಐ ಕ್ರೀಮ್ ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ಮತ್ತು ಉಬ್ಬಿರುವ ಕಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿದ್ರೆಯ ಕೊರತೆಯಿಂದ ಉಂಟಾಗುವ ಕಣ್ಣುಗಳ ಸುತ್ತಲಿನ ಇತರ ಹಾನಿಗಳಿಗೂ ಇದು ಚಿಕಿತ್ಸೆ ನೀಡುತ್ತದೆ.

ಕಾಫಿ ಐ ಕ್ರೀಮ್ ಸುಲಭವಾಗಿ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಬಹುದಾಗಿದೆ. ಆದ್ದರಿಂದ ನಿಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಲು ಕಾಫಿ ಐ ಕ್ರೀಮ್ ವಿಧಾನ ಇಲ್ಲಿದೆ.

. ಕಾಫಿ ಎಣ್ಣೆ ತಯಾರಿಸಿ: ಮೂರು ಚಮಚ ಕಾಫಿ ಪುಡಿಗೆ 120 ಮಿಲಿ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ನಂತರ 15-20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.

ಮುಂದೆ, ಒಂದು ಚಮಚ ಕೋಕೋ ಬಟರ್ ಸೇರಿಸಿ. ಡಬಲ್ ಬಾಯ್ಲರ್ ಪ್ರಕ್ರಿಯೆಯನ್ನು ಬಳಸಿ, ಅದು ಸುಮಾರು 30 ಸೆಕೆಂಡುಗಳ ಕಾಲ ಕರಗುವ ತನಕ ಅದನ್ನು ಬಿಸಿ ಮಾಡಿ.

ಕರಗಿದ ಬೆಣ್ಣೆ ಮಿಶ್ರಣಕ್ಕೆ ಅರ್ಧ ಚಮಚ ಜೊಜೊಬಾ ಎಣ್ಣೆ, ಒಂದು ಚಮಚ ಕಾಫಿ ಎಣ್ಣೆ, ಕ್ಯಾಮೊಮೈಲ್ ಮತ್ತು ಲ್ಯಾವೆಂಡರ್ ತೈಲಗಳ ಐದು ಹನಿಗಳನ್ನು ಸೇರಿಸಿ.

ನಂತರ ವಿಟಮಿನ್ ಇ ಕ್ಯಾಪ್ಸುಲ್‌ನಿಂದ ಹನಿಗಳನ್ನು ಮಿಶ್ರಣಕ್ಕೆ ಸೇರಿಸಿ. ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಇನ್ನಷ್ಟು ಆರೋಗ್ಯ ನೀಡುತ್ತದೆ. ಕಾಫಿ ಐ ಕ್ರೀಮ್ ಈಗ ಸಿದ್ಧವಾಗಿದೆ.

ನೀವು ಈಗಾಗಲೇ ತಯಾರಿಸಿದ ಕ್ರೀಮ್ ತೆಗೆದು ಒಂದು ಪಾತ್ರೆಗೆ ಸುರಿಯಿರಿ ಮತ್ತು ಅದನ್ನು ಗಟ್ಟಿಯಾಗಿ ಮುಚ್ಚಿಡಿ. ಒಂದು ಗಂಟೆಗಳ ಕಾಲ ಗಟ್ಟಿಯಾಗಲು ಮತ್ತು ತಣ್ಣಗಾಗಲು ಬಿಡಿ.

ಬಳಸುವ ವಿಧಾನ: ನಿಮ್ಮ ಮುಖವನ್ನು ಶುಚಿಗೊಳಿಸಿದ ನಂತರ, ಕಾಫಿ ಐ ಕ್ರೀಮ್ ಕಣ್ಣಿನ ಕೆಳ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಪ್ರತಿ ದಿನ ಬಳಸುವುದ್ದರಿಂದ ಒಂದೇ ವಾರದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
Published On - 2:54 pm, Wed, 30 November 22



















