- Kannada News Photo gallery Cricket photos Gautam Gambhir picks Hardik, Shaw as India's future captaincy zp
Team India: ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರು? ಅಚ್ಚರಿ ಹೆಸರು ಸೂಚಿಸಿದ ಗಂಭೀರ್..!
Team India: ಪೃಥ್ವಿ ಶಾ ಅಂಡರ್ 19 ತಂಡದ ನಾಯಕರಾಗಿ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. 2018 ರ ಕಿರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಪೃಥ್ವಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
Updated on:Nov 29, 2022 | 11:07 PM

ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರು? ಈ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಉತ್ತರ.. ಕೆಎಲ್ ರಾಹುಲ್ or ರಿಷಭ್ ಪಂತ್ or ಹಾರ್ದಿಕ್ ಪಾಂಡ್ಯ ಅಥವಾ ಶ್ರೇಯಸ್ ಅಯ್ಯರ್. ಆದರೆ ಇದೇ ಪ್ರಶ್ನೆಯನ್ನು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ಗೆ ಮುಂದಿಟ್ಟಾಗ ಅಚ್ಚರಿಯ ಉತ್ತರ ನೀಡಿದ್ದಾರೆ.

ಎಫ್‌ಐಸಿಸಿಐ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಗೌತಮ್ ಗಂಭೀರ್ ಅವರಿಗೆ ಭವಿಷ್ಯದಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕುತ್ತರಿಸಿದ ಗೌತಿ, ಹಾರ್ದಿಕ್ ಪಾಂಡ್ಯ ಮತ್ತು ಪೃಥ್ವಿ ಶಾ ಅವರನ್ನು ಭವಿಷ್ಯದ ಟೀಮ್ ಇಂಡಿಯಾ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

ಹಾರ್ದಿಕ್ ಅವರ ಆಯ್ಕೆಯು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ಏಕೆಂದರೆ ಅವರು ತಮ್ಮ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ ಪೃಥ್ವಿ ಶಾ ಹೆಸರೇಳುವ ಮೂಲಕ ಗಂಭೀರ್ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಏಕೆಂದರೆ 2021ರ ಜುಲೈ ಬಳಿಕ ಪೃಥ್ವಿ ಶಾ ಟೀಮ್ ಇಂಡಿಯಾ ಪರ ಆಡಿಲ್ಲ. ಇದಾಗ್ಯೂ ಗಂಭೀರ್ ಯುವ ಆಟಗಾರನನ್ನು ಹೆಸರಿಸಲು ಕಾರಣವನ್ನೂ ಕೂಡ ತಿಳಿಸಿದ್ದಾರೆ.

ನಾನು ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲು ಕಾರಣ, ಆತನಲ್ಲಿರುವ ಆಕ್ರಮಣಕಾರಿ ಗುಣಗಳು. ಪೃಥ್ವಿ ಅತ್ಯಂತ ಆಕ್ರಮಣಕಾರಿ ನಾಯಕ, ಅತ್ಯಂತ ಯಶಸ್ವಿ ನಾಯಕನಾಗಬಹುದು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಒಬ್ಬ ವ್ಯಕ್ತಿಯು ಆಟವನ್ನು ಆಡುವ ರೀತಿಯಲ್ಲಿ ಆಕ್ರಮಣಶೀಲತೆಯನ್ನು ನೀವು ನೋಡುತ್ತೀರಿ. ಹೀಗಾಗಿ ಪೃಥ್ವಿ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಬಹುದು ಎಂದು ಗಂಭೀರ್ ತಿಳಿಸಿದ್ದಾರೆ.

ಅಂದಹಾಗೆ ಪೃಥ್ವಿ ಶಾ ಅಂಡರ್ 19 ತಂಡದ ನಾಯಕರಾಗಿ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. 2018 ರ ಕಿರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಪೃಥ್ವಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹೀಗಾಗಿ ಗಂಭೀರ್ ಹೇಳಿದಂತೆ ಯುವ ಆಟಗಾರ ಮುಂದೊಂದು ದಿನ ಭಾರತ ತಂಡವನ್ನು ಮುನ್ನಡೆಸಿದರೂ ಅಚ್ಚರಿ ಪಡಬೇಕಿಲ್ಲ.
Published On - 11:03 pm, Tue, 29 November 22



















