Kichcha Sudeep: ಪಿವಿಆರ್ ಹೊಸ ಮಲ್ಟಿಪ್ಲೆಕ್ಸ್ ಆವರಣದಲ್ಲಿ ಕನ್ನಡ ನಟರ ಫೋಟೋ ಇಲ್ಲ; ಸುದೀಪ್ ಪ್ರತಿಕ್ರಿಯೆ ಏನು?
PVR Multiplex: ‘ಇಂಥ ಮಲ್ಟಿಪ್ಲೆಕ್ಸ್ ಶುರುವಾಗಿರುವುದಕ್ಕೆ ಖುಷಿ ಪಡೋಣ. ಯಾವಾಗಲೂ ತಪ್ಪನ್ನೇ ಹುಡುಕಬಾರದು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರಿನ ರೆಕ್ಸ್ ಚಿತ್ರಮಂದಿರ ಇದ್ದ ಜಾಗದಲ್ಲೀಗ ಹೊಸ ಪಿವಿಆರ್ ಮಲ್ಟಿಪ್ಲೆಕ್ಸ್ (PVR Multiplex) ತಲೆ ಎತ್ತಿದೆ. ಇದರ ಆವರಣದಲ್ಲಿ ಹಾಲಿವುಡ್, ಬಾಲಿವುಡ್ನ ದಿಗ್ಗಜರ ಫೋಟೋಗಳನ್ನು ಹಾಕಲಾಗಿದೆ. ಕನ್ನಡದ (Sandalwood) ಸೆಲೆಬ್ರಿಟಿಗಳ ಫೋಟೋ ಇಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಗಳೂರಿನಲ್ಲಿ ಇಂಥ ಮಲ್ಟಿಪ್ಲೆಕ್ಸ್ ಶುರುವಾಗಿರುವುದಕ್ಕೆ ಖುಷಿಪಡೋಣ. ಯಾವಾಗಲೂ ತಪ್ಪನ್ನೇ ಹುಡುಕಬಾರದು. ಕನ್ನಡ ಸಿನಿಮಾ ರಿಲೀಸ್ ಆಗಲಿ ಅಂತ ಮಲ್ಟಿಪ್ಲೆಕ್ಸ್ ಮಾಡಿದ್ದಾರೆ. ಆತುರ ಬೇಡ. ಮುಂದಿನ ದಿನಗಳಲ್ಲಿ ಕನ್ನಡದವರ ಫೋಟೋ ಹಾಕ್ತಾರೆ ಬಿಡಿ’ ಎಂದು ಸುದೀಪ್ (Kichcha Sudeep) ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 02, 2022 03:28 PM
Latest Videos