ಹೊಸ ಸಾಹಸಕ್ಕೆ ಮುಂದಾದ ರೋಹಿತ್​ ಶೆಟ್ಟಿ; ಮುಂಬೈನಲ್ಲಿ ತಲೆ ಎತ್ತಲಿದೆ ಅತಿ ದೊಡ್ಡ ಸ್ಟುಡಿಯೋ?

ಮುಂಬೈನ ಹಾಗೂ ಗುಜರಾತ್​ನಲ್ಲಿ ಹಲವು ಜಾಗಗಳನ್ನು ರೋಹಿತ್ ಶೆಟ್ಟಿ ನೋಡಿಟ್ಟಿದ್ದಾರೆ. ಇದರಲ್ಲಿ ಕೆಲವನ್ನು ಅವರು ಫೈನಲ್​ ಮಾಡಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸ್ಟುಡಿಯೋ ನಿರ್ಮಾಣ ಮಾಡುವ ಆಲೋಚನೆ ಅವರದ್ದು

ಹೊಸ ಸಾಹಸಕ್ಕೆ ಮುಂದಾದ ರೋಹಿತ್​ ಶೆಟ್ಟಿ; ಮುಂಬೈನಲ್ಲಿ ತಲೆ ಎತ್ತಲಿದೆ ಅತಿ ದೊಡ್ಡ ಸ್ಟುಡಿಯೋ?
ರೋಹಿತ್ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 6:30 AM

ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಆ್ಯಕ್ಷನ್​ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗಂತೂ ರೋಹಿತ್ ಶೆಟ್ಟಿ ಬಗ್ಗೆ ತಿಳಿದಿರುತ್ತದೆ. ತಮ್ಮ ಕೆಲಸದ ಮೂಲಕ ಅಷ್ಟು ದೊಡ್ಡ ಹೆಸರು ಮಾಡಿದ್ದಾರೆ ಅವರು. ‘ಸಿಂಘಂ’, ‘ಸಿಂಘಂ ರಿಟರ್ನ್ಸ್​’, ‘ಗೋಲ್​ಮಾಲ್​ 3’, ‘ಚೆನ್ನೈ ಎಕ್ಸ್​ಪ್ರೆಸ್​’, ‘ಗೋಲ್​ಮಾಲ್​ ಅಗೇನ್​’, ‘ಸಿಂಬಾ’ ಹಾಗೂ ಇತ್ತೀಚೆಗೆ ತೆರೆಕಂಡ ‘ಸೂರ್ಯವಂಶಿ’ (Sooryavanshi) ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅವರದ್ದು. ಕೆಲ ಚಿತ್ರಗಳಿಗೆ ಅವರು ಬಂಡವಾಳ ಕೂಡ ಹೂಡಿದ್ದಾರೆ. ಈಗ ಅವರು ಪ್ರೊಡಕ್ಷನ್​ ಹೌಸ್ (Production House)​ ನಿರ್ಮಾಣ ಮಾಡುವ ಆಲೋಚನೆಯಲ್ಲಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಇದರ ಜತೆಗೆ ಮತ್ತೊಂದು ದೊಡ್ಡ ಆಲೋಚನೆಯೂ ಅವರ ತಲೆಯಲ್ಲಿದೆ.

ಚಿತ್ರರಂಗದಲ್ಲಿ ನಟ/ನಟಿಯಾಗಿ, ನಿರ್ದೇಶಕನಾಗಿ ಹೆಸರು ಮಾಡಿದ ನಂತರದಲ್ಲಿ ಸಿನಿಮಾ ನಿರ್ಮಾಣಕ್ಕೆ ಇಳಿದವರ ಪಟ್ಟಿ ದೊಡ್ಡದಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದ ಮೇಲೆ ಅವರಿಗೆ ಒಂದು ಹಿಡಿತ ಬಂದಿದೆ. ಸಿನಿಮಾ ಸ್ಕ್ರಿಪ್ಟ್​ ನೋಡಿಯೇ ಅವರು ಒಂದು ಜಡ್ಜ್​ಮೆಂಟ್​ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಅವರಿಗೆ ಇದೆ. ಈ ಕಾರಣಕ್ಕೆ ನಿರ್ಮಾಣ ಸಂಸ್ಥೆ ಆರಂಭಿಸುವ ಆಲೋಚನೆ ಅವರಿಗೆ ಬಂದಿದೆ! ಅಲ್ಲದೆ, ಮುಂಬೈನಲ್ಲಿ ಅತಿ ದೊಡ್ಡ ಸ್ಟುಡಿಯೋ ಆರಂಭಿಸುವ ಆಲೋಚನೆಯೂ ಅವರಿಗೆ ಇದೆ.

‘ರೋಹಿತ್ ಶೆಟ್ಟಿ ಪಿಕ್ಚರ್ಸ್’​ ಬ್ಯಾನರ್​ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ರೋಹಿತ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಐದು ಸಿನಿಮಾಗಳು ಆರಂಭದ ಹಂತದಲ್ಲಿವೆ. ಪ್ರೊಡಕ್ಷನ್​ ಹೌಸ್​ ಘೋಷಣೆ ಮಾಡುವುದರ ಜತೆಗೆ ಸಿನಿಮಾ ಹೆಸರುಗಳನ್ನೂ ಘೋಷಣೆ ಮಾಡಲು ಅವರು ಆಲೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಸ್ವಂತ ಸ್ಟುಡಿಯೋ ಆರಂಭಿಸೋಕೂ ಅವರು ಚಿಂತನೆ ನಡೆಸಿದ್ದಾರೆ.

ಮುಂಬೈನ ಹಾಗೂ ಗುಜರಾತ್​ನಲ್ಲಿ ಹಲವು ಜಾಗಗಳನ್ನು ರೋಹಿತ್ ಶೆಟ್ಟಿ ನೋಡಿಟ್ಟಿದ್ದಾರೆ. ಇದರಲ್ಲಿ ಕೆಲವನ್ನು ಅವರು ಫೈನಲ್​ ಮಾಡಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸ್ಟುಡಿಯೋ ನಿರ್ಮಾಣ ಮಾಡುವ ಆಲೋಚನೆ ಅವರದ್ದು. ತಮ್ಮದೇ ಪ್ರೊಡಕ್ಷನ್​ ಹೌಸ್​ಗಳ ಚಿತ್ರಗಳನ್ನು ಇದೇ ಸ್ಟುಡಿಯೋಗಳಲ್ಲಿ ಶೂಟ್​ ಮಾಡಬಹುದು. ಇದರಿಂದ ಸಿನಿಮಾದ ಬಜೆಟ್​ ಕಡಿಮೆ ಆಗುತ್ತದೆ. ಜತೆಗೆ ಈ ಸ್ಟುಡಿಯೋಗಳನ್ನು ಬೇರೆ ಸಿನಿಮಾಗಳ ಚಿತ್ರೀಕರಣಕ್ಕೆ ಬಾಡಿಗೆಗೆ ನೀಡಿದರೆ ಒಂದಷ್ಟು ಕಮಾಯಿ ಆಗುತ್ತದೆ ಎನ್ನುವ ಆಲೋಚನೆ ಅವರದ್ದು. ಸದ್ಯ, ಈ ವಿಚಾರಗಳನ್ನು ಮೂಲಗಳು ಖಚಿತಪಡಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ.

ರೋಹಿತ್​ ಶೆಟ್ಟಿ ಸದ್ಯ ‘ಸರ್ಕಸ್​’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ರಣವೀರ್​ ಸಿಂಗ್​, ಪೂಜಾ ಹೆಗ್ಡೆ ಹಾಗೂ ಜಾಕ್ವೆಲಿನ್​ ಫರ್ನಾಂಡಿಸ್​ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2022ರ ದೀಪಾವಳಿಗೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ‘ಸಿಂಘಂ 3’ ಶೂಟಿಂಗ್​ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಇದರಲ್ಲಿ ಅಜಯ್​ ದೇವಗನ್​ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಯಾವ ಖಾನ್​ಗೂ ಕಮ್ಮಿ ಇಲ್ಲ ಅಕ್ಷಯ್​ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’

‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್