Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಂಥಾ ಮಕ್ಕಳಾಟ? ಬಿಕಿನಿಯಲ್ಲಿ ಪ್ರ್ಯಾಂಕ್​ ಮಾಡಿದ ಸಾರಾ ಅಲಿ ಖಾನ್​ಗೆ ಛೀಮಾರಿ

ಸ್ವಿಮ್ಮಿಂಗ್​ ಪೂಲ್​ ಒಂದರ ಮೇಲೆ ಸಾರಾ ಅಲಿ ಖಾನ್​ ಬಿಕಿನಿ ತೊಟ್ಟು ನಿಂತಿದ್ದರು. ಅವರ ಪಕ್ಕದಲ್ಲಿ ಮತ್ತೊಂದು ಮಹಿಳೆಯೂ ನಿಂತಿದ್ದರು. ಫೋಟೋಗೆ ಪೋಸ್​ ಕೊಡುವಂತೆ ನಾಟಕ ಮಾಡಿದ ಸಾರಾ, ಆ ಮಹಿಳೆಯನ್ನು ನೀರಿಗೆ ತಳ್ಳಿದರು

ಇದೆಂಥಾ ಮಕ್ಕಳಾಟ? ಬಿಕಿನಿಯಲ್ಲಿ ಪ್ರ್ಯಾಂಕ್​ ಮಾಡಿದ ಸಾರಾ ಅಲಿ ಖಾನ್​ಗೆ ಛೀಮಾರಿ
ಸಾರಾ ಅಲಿ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 04, 2022 | 5:15 PM

ಸೆಲೆಬ್ರಿಟಿ ಆಗಿರೋದು ಅಷ್ಟು ಸುಲಭದ ಮಾತಲ್ಲ. ಏನೇ ಮಾಡಿದರೂ ಅದನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಅವರು ನಡೆದುಕೊಂಡ ರೀತಿ ಇಷ್ಟವಾಗದಿದ್ದರೆ ನೇರವಾಗಿ ಟ್ರೋಲ್​ ಮಾಡುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತದೆ. ಈಗ ನಟಿ ಸಾರಾ ಅಲಿ ಖಾನ್ (Sara Ali Khan)​ ವಿಚಾರದಲ್ಲೂ ಹೀಗೆಯೇ ಆಗಿದೆ. ಪ್ರ್ಯಾಂಕ್​ ಮಾಡೋಕೆ ಹೋಗಿ ಅವರು ಟೀಕೆಗೆ ಗುರಿಯಾಗಿದ್ದಾರೆ. ಸ್ವಿಮ್ಮಿಂಗ್​ ಪೂಲ್​ ಎದುರಲ್ಲಿ ಸಾರಾ ಪ್ರ್ಯಾಂಕ್​ ಮಾಡೋಕೆ ಹೋಗಿದ್ದಾರೆ. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸ್ವಿಮ್ಮಿಂಗ್​ ಪೂಲ್​ ಒಂದರ ಮೇಲೆ ಸಾರಾ ಅಲಿ ಖಾನ್​ ಬಿಕಿನಿ ತೊಟ್ಟು ನಿಂತಿದ್ದರು. ಅವರ ಪಕ್ಕದಲ್ಲಿ ಮತ್ತೊಂದು ಮಹಿಳೆಯೂ ನಿಂತಿದ್ದರು. ಫೋಟೋಗೆ ಪೋಸ್​ ಕೊಡುವಂತೆ ನಾಟಕ ಮಾಡಿದ ಸಾರಾ, ಆ ಮಹಿಳೆಯನ್ನು ನೀರಿಗೆ ತಳ್ಳಿದರು. ನಂತರ ತಾವೂ ನೀರಿಗೆ ಇಳಿದಿದ್ದಾರೆ. ಸ್ವಿಮಿಂಗ್​ ಪೂಲ್​ನಲ್ಲಿ ಆಳ ಇರುವ ಕಡೆ ಆ ಮಹಿಳೆಯನ್ನು ಕರೆದುಕೊಂಡು ಹೋಗುವ ಪ್ರಯತ್ನವನ್ನು ಸಾರಾ ಅಲಿ ಖಾನ್​ ಮಾಡಿದರು. ಆದರೆ, ಅದು ಯಶಸ್ವಿ ಆಗಲೇ ಇಲ್ಲ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಇದಕ್ಕೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

View this post on Instagram

A post shared by HT City (@htcity)

‘ಇದೆಂಥಾ ಮಕ್ಕಳಾಟ? ಒಂದೊಮ್ಮೆ ತಳ್ಳುವಾಗ ಆ ಮಹಿಳೆಯ ತಲೆ ಕಟ್ಟೆಗೆ ಹೊಡೆದಿದ್ದರೆ ಏನು ಗತಿ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ನೀವು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ’ ಎಂದು ಪ್ರಶ್ನಿಸಿದ್ದಾರೆ. ‘ಆ ಮಹಿಳೆಗೆ ನೀರಿಗೆ ಇಳಿಯುವ ಆಲೋಚನೆಯೇ ಇರಲಿಲ್ಲ. ಆದರೂ ಅವರನ್ನು ನೀವು ನೀರಿಗೆ ಇಳಿಸಿದ್ದೀರಿ. ನಿಮಗೆ ಏನು ಅನಿಸುತ್ತಿಲ್ಲವೇ? ನಿಮಗೂ ಯಾರಾದರೂ ಇದೇ ರೀತಿ ಮಾಡಿದ್ದರೆ ಹೇಗನಿಸುತ್ತಿತ್ತು’ ಎಂದು ಪ್ರಶ್ನೆ ಮಾಡಲಾಗಿದೆ.

ಮದುವೆ ಬಗ್ಗೆ ಮಾತನಾಡಿದ್ದ ಸಾರಾ:

ಸಾರಾ ಅಲಿ ಖಾನ್​ ‘ಅಂತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದಿತ್ತು.  ಅಕ್ಷಯ್​ ಕುಮಾರ್​, ತಮಿಳು ನಟ ಧನುಷ್​, ಸಾರಾ ಅಲಿ ಖಾನ್​ ಚಿತ್ರದಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಆನಂದ್​ ಎಲ್​. ರಾಯ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಅವರು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳುವುದರ ಜತೆಗೆ ಅವರ ಷರತ್ತು ಏನು ಎಂಬುದನ್ನು ಹೇಳಿದ್ದರು. ‘ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜತೆ ಇರಬೇಕು’ ಎಂದಿದ್ದರು ಅವರು.  ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ದಂಪತಿಯ ಮಗಳು ಸಾರಾ. ಸೈಫ್​ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜತೆ ಇದ್ದಾರೆ. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜತೆ ವಾಸ ಮಾಡಬೇಕು ಎಂಬುದು ಅವರ ಆಸೆ.

ಇದನ್ನೂ ಓದಿ: Sara Ali Khan: ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್​

ಟ್ರೇಡಿಷನಲ್ ಲುಕ್​ನಲ್ಲಿ ಮಿಂಚಿದ ಸಾರಾ

Published On - 5:05 pm, Fri, 4 February 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !