AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ದುಮುಚ್ಚಿ ಬೇರೆಯವರ ಜೊತೆ ಸುತ್ತಾಡಿದ್ದ ದೀಪಿಕಾ? ಸಿಟ್ಟಾದ ರಣವೀರ್ ಸಿಂಗ್  

2012ರಿಂದಲೇ ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದರು. ರಣವೀರ್ ಸಿಂಗ್ ಅವರು ಗಂಭೀರವಾಗಿ ಪ್ರೀತಿಯಲ್ಲಿದ್ದರು. ಆದರೆ, ದೀಪಿಕಾ ಆ ರೀತಿ ಇರಲಿಲ್ಲ ಎನ್ನಲಾಗಿದೆ.  

ಕದ್ದುಮುಚ್ಚಿ ಬೇರೆಯವರ ಜೊತೆ ಸುತ್ತಾಡಿದ್ದ ದೀಪಿಕಾ? ಸಿಟ್ಟಾದ ರಣವೀರ್ ಸಿಂಗ್   
ರಣವೀರ್​-ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 27, 2023 | 1:06 PM

ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿ ‘ಕಾಫಿ ವಿತ್ ಕರಣ್ ಸೀಸನ್ 8’ರ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಈ ದಂಪತಿ ಮಾತನಾಡಿದ್ದಾರೆ. ರಣವೀರ್ ಸಿಂಗ್ ತೋರಿಸುವ ಪ್ರೀತಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಅವರು ಹೇಳಿರೋ ಒಂದು ವಿಚಾರ ರಣವೀರ್​ಗೆ ಬೇಸರ ತರಿಸಿದೆ. ಅವರು ಏಕಾಏಕಿ ಸಿಟ್ಟಾಗಿದ್ದಾರೆ. ಈ ಕ್ಲಿಪ್ ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಸಾಕಷ್ಟು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ.

ರಣವೀರ್ ಸಿಂಗ್ ಅವರು ದೀಪಿಕಾನ ಭೇಟಿ ಮಾಡಿದ್ದು 2012ರಲ್ಲಿ. ಸಂಜಯ್ ಬನ್ಸಾಲಿ ನಿರ್ದೇಶನದ ‘ರಾಮ್​ಲೀಲಾ’ ಚಿತ್ರದಲ್ಲಿ ರಣವೀರ್ ಸಿಂಗ್​ಗೆ ಜೊತೆಯಾಗಿ ಕರೀನಾ ಕಪೂರ್ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಕರೀನಾ ಸಿನಿಮಾದಿಂದ ಹೊರ ನಡೆದರು. ಆಗ, ದೀಪಿಕಾ ಹೆಸರನ್ನು ಫೈನಲ್ ಮಾಡಲಾಯಿತು. 2012ರಿಂದಲೇ ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದರು. ರಣವೀರ್ ಸಿಂಗ್ ಅವರು ಗಂಭೀರವಾಗಿ ಪ್ರೀತಿಯಲ್ಲಿದ್ದರು. ಆದರೆ, ದೀಪಿಕಾ ಆ ರೀತಿ ಇರಲಿಲ್ಲ ಎನ್ನಲಾಗಿದೆ.

‘ಇಬ್ಬರೂ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ರಣವೀರ್ ಹಾಗೂ ದೀಪಿಕಾಗೆ ಕರಣ್ ಕೇಳಿದರು. ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ. ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಶಿಪ್​ನಿಂದ ಆಗತಾನೇ ಹೊರಬಂದಿದ್ದೆ. ಹೀಗಾಗಿ ನಾನು ಸಿಂಗಲ್ ಆಗಿರಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ರಣವೀರ್ ಬಂದರು. ಆದರೆ, ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರಲಿಲ್ಲ. ನಾನು ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್​ಮೆಂಟ್ ಇರಲಿಲ್ಲ’ ಎಂದಿದ್ದಾರೆ ದೀಪಿಕಾ.

ರಣವೀರ್ ಸಿಂಗ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ‘ನಾವು ಡೇಟ್​ಗೆ ಹೋಗುತ್ತಿದ್ದೆವು. ಒಟ್ಟಿಗೆ ರಜಾ ಕಳೆದಾಗ, ಹೊಸ ವರ್ಷ ಆಚರಿಸಿದಾಗ ಒಟ್ಟಿಗೆ ಇದ್ದ ಭಾವನೆ ಬರುತ್ತದೆ. ಮೊದಲ ಆರು ತಿಂಗಳಲ್ಲಿ ಕೆಲವರು ದೀಪಿಕಾನ ಮದುವೆ ಆಗಲು ಪ್ರಯತ್ನಿಸುತ್ತಿದ್ದರು’ ಎಂದಿದ್ದಾರೆ ರಣವೀರ್ ಸಿಂಗ್.

ಆ ಮೂರು ಜನ ಯಾರು ಎನ್ನುವ ಪ್ರಶ್ನೆಯನ್ನು ದೀಪಿಕಾ ಕೇಳಿದರು. ಇದಕ್ಕೆ ರಣವೀರ್ ಸಿಂಗ್​ಗೆ ಸಿಟ್ಟು ಬಂತು. ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ?’ ಎಂದು ರಣವೀರ್ ಸಿಂಗ್ ಪ್ರಶ್ನೆ ಮಾಡಿದರು. ದೀಪಿಕಾ ಕಡೆಯಿಂದ ‘ಇಲ್ಲ’ ಎನ್ನುವ ಉತ್ತರ ಬಂತು. ‘ನನಗೆ ಸರಿಯಾಗಿ ನೆನಪಿದೆ’ ಎಂದರು ರಣವೀರ್ ಸಿಂಗ್ ಸಿಟ್ಟಲ್ಲೇ ಹೇಳಿದರು.

‘ರಣವೀರ್ ಸಿಂಗ್​ಗೆ ಈ ಮಾತಿನಿಂದ ಬೇಸರ ಆಗಿದೆ. ಅವರು ದೀಪಿಕಾ ಬಗ್ಗೆ ಸಿಟ್ಟು ಮಾಡಿಕೊಂಡರು’ ಎಂದು ಕೆಲವರು ಹೇಳಿದ್ದಾರೆ. ‘ದೀಪಿಕಾ ಪಡುಕೋಣೆ ಗೊತ್ತಿಲ್ಲದೆ ಸತ್ಯ ಹೇಳಿಬಿಟ್ಟರು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ರಯಾಂಗಲ್ ಲವ್ ಸ್ಟೋರಿ ಸಿನಿಮಾದಲ್ಲಿ ರಣಬೀರ್ ಕಪೂರ್​, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​?

‘ರಾಮ್ ಲೀಲಾ’ ರಿಲೀಸ್ ಆದ ಬಳಿಕ ರಣವೀರ್ ಸಿಂಗ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ದ್ವೀಪ ಒಂದಕ್ಕೆ ಕರೆದುಕೊಂಡು ಹೋಗಿ ರಿಂಗ್ ನೀಡಿ ರಣವೀರ್ ಮದುವೆ ಪ್ರಪೋಸಲ್ ಇಟ್ಟಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಇವರು ಮದುವೆ ಆದರು. ದೂರದ ಇಟಲಿಯಲ್ಲಿ ಈ ಜೋಡಿ ಮದುವೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್